ರಾಜಕೋಟ್: ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ ಟೀಂ ಇಂಡಿಯಾದ ಏಕದಿನ ಸರಣಿಯ ಮೂರನೇ ಮತ್ತು ಅಂತಿಮ ಪಂದ್ಯ ಬುಧವಾರ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್ ಗ್ರೌಂಡ್ ನಲ್ಲಿ ನಡೆಯಿತು. ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು ಸುಲಭ ಗೆಲುವು ಸಾಧಿಸಿತಾದರೂ ಮೊದಲೆರಡು ಪಂದ್ಯ ಗೆದ್ದ ಕಾರಣ ಭಾರತ ಸರಣಿ ಜಯ ಸಾಧಿಸಿತು.
ವಿಶ್ವಕಪ್ ಕಾರಣದಿಂದ ಸರಣಿಯ ಮೊದಲ ಎರಡು ಪಂದ್ಯಕ್ಕೆ ಭಾರತದ ತಂಡ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಲಾಗಿತ್ತು. ನಾಯಕ ರೋಹಿತ್, ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ, ಕುಲದೀಪ್ ಯಾದವ್ ಮೊದಲೆರಡು ಪಂದ್ಯಗಳಲ್ಲಿ ಆಡಿರಲಿಲ್ಲ. ಈ ಎರಡು ಪಂದ್ಯಗಳಿಗೆ ಕೆಎಲ್ ರಾಹುಲ್ ಅವರು ತಂಡವನ್ನು ಮುನ್ನಡೆಸಿದ್ದರು.
ರಾಜಕೋಟ್ ಪಂದ್ಯದ ಬಳಿಕ ನಡೆದ ಪ್ರಶಸ್ತಿ ಸಮಾರಂಭದಲ್ಲಿ ನಾಯಕ ರೋಹಿತ್ ಶರ್ಮಾ ಅವರು ತನ್ನ ನಡೆಯಿಂದ ಮೆಚ್ಚುಗೆ ಪಡೆದರು. ಸರಣಿಯ ವಿಜೇತರ ಟ್ರೋಫಿ ಸ್ವೀಕರಿಸಲು ನಾಯಕ ರೋಹಿತ್ ಅವರನ್ನು ಆಹ್ವಾನಿಸಿದಾಗ ಅವರು ಮೊದಲೆರಡು ಪಂದ್ಯದಲ್ಲಿ ನಾಯಕತ್ವದ ಜವಾಬ್ದಾರಿ ಹೊತ್ತಿದ್ದ ಕೆಎಲ್ ರಾಹುಲ್ ಅವರನ್ನು ಕರೆದರು. ರಾಹುಲ್ ಅವರೇ ಟ್ರೋಫಿ ಸ್ವೀಕರಿಸಬೇಕು ಎಂದರು.
ರೋಹಿತ್ ಶರ್ಮಾ ಅವರ ಈ ನಡೆ ಮೆಚ್ಚುಗೆ ಸಾಧಿಸಿದೆ. ಇದರ ವಿಡಿಯೋ ವೈರಲ್ ಆಗಿದೆ.
ರಾಜಕೋಟ್ ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ಏಳು ವಿಕೆಟ್ ನಷ್ಟಕ್ಕೆ 252 ರನ್ ಗಳಿಸಿದರೆ, ಭಾರತ ತಂಡವು 49.4 ಓವರ್ ಗಳಲ್ಲಿ 286 ರನ್ ಗಳಿಗೆ ಆಲೌಟಾಯಿತು. ಭಾರತದ ಪರ ರೋಹಿತ್ ಶರ್ಮಾ 81 ರನ್ ಗಳಿಸಿದರು.