Advertisement

ರೋಹಿತ್‌ ಗೋಲ್ಡನ್‌ ಡಕ್‌ಗೆ ಅಣಕ

06:25 AM Feb 23, 2018 | Team Udayavani |

ಸೆಂಚುರಿಯನ್‌: ಬುಧವಾರದ ಸೆಂಚುರಿಯನ್‌ ಟಿ20 ಪಂದ್ಯದಲ್ಲಿ ಭಾರತದ ಆರಂಭಿಕ ಆಟಗಾರ ರೋಹಿತ್‌ ಶರ್ಮ ತಾನೆದುರಿಸಿದ ಮೊದಲ ಎಸೆತದಲ್ಲಿಯೇ ಔಟ್‌ ಆಗಿ ಗೋಲ್ಡನ್‌ ಡಕ್‌ ಅವಮಾನಕ್ಕೆ ಸಿಲುಕಿದ್ದರು. ಇದಕ್ಕೆ ಟ್ವಿಟರ್‌ನಲ್ಲಿ ರೋಹಿತ್‌ ಅವರನ್ನು ಕ್ರಿಕೆಟ್‌ ಅಭಿಮಾನಿಗಳು ಅಣಕವಾಡಿದ್ದಾರೆ.

Advertisement

“ರೋಹಿತ್‌ ಶರ್ಮ ತುಂಬಾ ಪ್ರತಿಭಾವಂತ. ಆದರೆ ಆತನ ಮನಸ್ಸು ಅಲಿಯಾ ಭಟ್‌ ಮನಸ್ಸಿನಂತೆ’ ಎಂದು ಒಬ್ಬರು ಅಣಕಿಸಿದರೆ, ಮತ್ತೂಬ್ಬರು “ಗೋಲ್ಡನ್‌ ಡಕ್‌ ಮೂಲಕ ರೋಹಿತ್‌ ದಿನದ ಶ್ರೇಷ್ಠ ಬ್ಯಾಟ್ಸ್‌ಮನ್‌, 50ಕ್ಕೂ ಹೆಚ್ಚು ರನ್‌ ಬಿಟ್ಟುಕೊಟ್ಟ ಚಾಹಲ್‌ ದಿನದ ಶ್ರೇಷ್ಠ ಬೌಲರ್‌’ ಎಂದು ವ್ಯಂಗ್ಯವಾಡಿದ್ದಾರೆ!

Advertisement

Udayavani is now on Telegram. Click here to join our channel and stay updated with the latest news.

Next