ಲಂಡನ್: ಭಾರತ ತಂಡದ ನಾಯಕ ರೋಹಿತ್ ಶರ್ಮಾಗೆ ಕೋವಿಡ್ 19 ಪಾಸಿಟಿವ್ ಆಗಿದ್ದು, ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯಕ್ಕೆ ಅಲಭ್ಯರಾಗುವ ಅನುಮಾನ ಕಾಡಿದೆ.
ಈ ಬಗ್ಗೆ ಬಿಸಿಸಿಐ ಖಚಿತ ಪಡಿಸಿದೆ. ರೋಹಿತ್ ಶರ್ಮಾ ಸದ್ಯ ಲೀಸೆಸ್ಟರ್‌ಶೈರ್ ನಲ್ಲಿ ಹೋಟೆಲ್ ನಲ್ಲಿ ಐಸೋಲೇಶನ್ ನಲ್ಲಿದ್ದಾರೆ. ತಂಡದ ಉಳಿದ ಸದಸ್ಯರು ಇಂದು ನಾಲ್ಕನೇ ದಿನದ ಅಭ್ಯಾಸ ಪಂದ್ಯ ಆಡಲಿದ್ದಾರೆ.
ಶನಿವಾರದಂದು ನಡೆಸಿದ ರಾಪಿಡ್ ಆಂಟಿಜೆನ್ ಟೆಸ್ಟ್‌ನಲ್ಲಿ ರೋಹಿತ್ ಶರ್ಮಾ ಗೆ ಕೋವಿಡ್-19 ಸೋಂಕು ತಾಗಿರುವುದು ದೃಢವಾಗಿದೆ. ಲೀಸೆಸ್ಟರ್ ಶೈರ್ ಕೌಂಟಿ ಕ್ಲಬ್ ನಲ್ಲಿ ನಡೆದ ನಾಲ್ಕು ದಿನಗಳ ಅಭ್ಯಾಸ ಪಂದ್ಯದ ಮೂರನೇ ದಿನದಂದು ಭಾರತ ತಂಡದ ನಾಯಕ ಮೈದಾನಕ್ಕಿಳಿಯಲಿಲ್ಲ.
ಇದನ್ನೂ ಓದಿ:ಭಾರತ-ಐರ್ಲೆಂಡ್ ಟಿ20 ಸರಣಿ: ಇಂದು ಮೊದಲ ಪಂದ್ಯ: ಮೀಸಲು ಸಾಮರ್ಥ್ಯಕ್ಕೊಂದು ಪರೀಕ್ಷೆ
“ಟೀಮ್ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ ಅವರು ಶನಿವಾರ ನಡೆಸಿದ ರಾಪಿಡ್ ಆಂಟಿಜೆನ್ ಟೆಸ್ಟ್ ನಂತರ ಕೋವಿಡ್ 19 ಪತ್ತೆಯಾಗಿದೆ. ಅವರು ಪ್ರಸ್ತುತ ತಂಡದ ಹೋಟೆಲ್‌ನಲ್ಲಿ ಪ್ರತ್ಯೇಕವಾಗಿರುತ್ತಾರೆ ಮತ್ತು ಬಿಸಿಸಿಐ ವೈದ್ಯಕೀಯ ತಂಡದ ಆರೈಕೆಯಲ್ಲಿದ್ದಾರೆ” ಎಂದು ಭಾರತೀಯ ಕ್ರಿಕೆಟ್ ಮಂಡಳಿ ಭಾನುವಾರ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಜುಲೈ 1 ರಿಂದ ಪ್ರಾರಂಭವಾಗುವ ಮೊದಲ ಟೆಸ್ಟ್ ಗೆ ರೋಹಿತ್ ಲಭ್ಯವಿಲ್ಲದಿದ್ದರೆ ಭಾರತವು ಭಾರಿ ಹಿನ್ನಡೆಯನ್ನು ಎದುರಿಸಲಿದೆ. ಭಾರತವು ಈಗಾಗಲೇ ತಮ್ಮ ಮೊದಲ ಆಯ್ಕೆಯ ಆರಂಭಿಕ ಆಟಗಾರ ಕೆಎಲ್ ರಾಹುಲ್ ಅವರನ್ನು ಕಳೆದುಕೊಂಡಿದೆ.