ಮುಂಬೈ: ʻಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮ ಐಪಿಎಲ್‌ನಿಂದ ಕೆಲವೊಂದಷ್ಟು ಸಮಯದ ತನಕ ವಿಶ್ರಾಂತಿ ತೆಗೆದುಕೊಳ್ಳಲಿ. ಆಗ ಅವರು ಜೂನ್ 7 ರಿಂದ ಪ್ರಾರಂಭವಾಗಲಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಹೊಸ ಉತ್ಸಾಹದಿಂದ ಆಡಲು ಸಾಧ್ಯವಾಗಬಹುದು…ʼ ಹೀಗೆಂದು ಸಲಹೆ ನೀಡಿದವರು ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ, ಬ್ಯಾಟಿಂಗ್ ದಿಗ್ಗಜ ಸುನಿಲ್ ಗಾವಸ್ಕರ್.
ಸದ್ಯ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸುತ್ತಿರುವ ರೋಹಿತ್ ತಂಡದ ಪರ 7 ಪಂದ್ಯಗಳನ್ನಾಡಿದ್ದು 25.86 ರ ಸರಾಸರಿಯಲ್ಲಿ 181 ರನ್ ಪೇರಿಸಿದ್ದಾರೆ.
ಇದನ್ನೂ ಓದಿ: ಫ್ಯಾಂಟಸಿ ಗೇಮ್ ನಲ್ಲಿ 49 ರೂ. ಕಟ್ಟಿ 2 ಕೋಟಿ ಗೆದ್ದ ಬಡ ದಿನಗೂಲಿ ನೌಕರ.!
ಐಪಿಎಲ್ ಇತಿಹಾಸದಲ್ಲೇ ಅತಿ ಹೆಚ್ಚು ಬಾರಿ ಚಾಂಪಿಯನ್ ಪಟ್ಟಕ್ಕೇರಿರುವ ದಾಖಲೆ ಹೊಂದಿರುವ ಮುಂಬೈ ಇಂಡಿಯನ್ಸ್ ಈ ಬಾರಿ ಪುಟಿದೇಳುವಲ್ಲಿ ವಿಫಲವಾಗಿದೆ. ಹೀಗಾಗಿ ಸ್ಟಾರ್ ಸ್ಪೋರ್ಟ್ಸ್‌ಗೆ ನೀಡಿರುವ ಸಂದರ್ಶನವೊಂದರಲ್ಲಿ ಈ ಸಲಹೆ ನೀಡಿರುವ ಗಾವಸ್ಕರ್, ʻರೋಹಿತ್ ಸದ್ಯಕ್ಕೆ ವಿಶ್ರಾಂತಿ ಪಡೆಯಲಿ. ಕೊನೆಯ 3-4 ಪಂದ್ಯಗಳಿರುವಾಗ ತಂಡಕ್ಕೆ ಮರಳಲಿ ಎಂಬುದು ನನ್ನ ಅನಿಸಿಕೆʼ ಎಂದು ಅವರು ಹೇಳಿದ್ದಾರೆ.
ಐಪಿಎಲ್ ಅಂಕಪಟ್ಟಿಯಲ್ಲಿ ಸದ್ಯಕ್ಕೆ 7 ನೇ ಸ್ಥಾನದಲ್ಲಿರುವ ಮುಂಬೈ ಇಂಡಿಯನ್ಸ್ ತಂಡ ಪ್ಲೇ ಆಫ್‌ಗೆ ಅವಕಾಶ ಪಡೆದರೆ ಅದೊಂದು ʻಸಾಧನೆʼ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.