ಅಹಮದಾಬಾದ್: ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿ ಸೋಲಿನ ಬಳಿಕ ಭಾರತ ತಂಡ ರವಿವಾರದಿಂದ ವೆಸ್ಟ್ ಇಂಡೀಸ್ ವಿರುದ್ಧ ಏಕದಿನ ಸರಣಿ ಆಡಲಿದೆ. ಮೂರು ಪಂದ್ಯಗಳ ಸರಣಿ ಅಹಮದಾಬಾದ್ ನಲ್ಲಿ ನಡೆಯಲಿದೆ.
ಪೂರ್ಣಪ್ರಮಾಣದ ನಾಯಕನಾಗಿ ರೋಹಿತ್ ಶರ್ಮ ಮೊದಲ ಸರಣಿ ಆಡುತ್ತಿದ್ದಾರೆ. ಇದೇ ವೇಳೆ ಭಾರತ ತಂಡ 1000ನೇ ಏಕದಿನ ಪಂದ್ಯವಾಡುತ್ತಿದೆ. ಸಹಸ್ರ ಏಕದಿನ ಪಂದ್ಯವಾಡಿದ ಮೊದಲ ದೇಶ ಎಂಬ ಗರಿಮೆಗೆ ಪಾತ್ರವಾಗಲಿದೆ.
ತವರಿನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಹೆಚ್ಚು ರನ್ ಗಳಿಸಿದ ದಾಖಲೆ ವಿರಾಟ್ ಹೆಸರಲ್ಲಿದೆ. 20 ಪಂದ್ಯದಲ್ಲಿ ವಿರಾಟ್ 1239 ರನ್ ಗಳಿಸಿದರೆ, ರೋಹಿತ್ 13 ಪಂದ್ಯಗಳಿಂದ 1040 ರನ್ ಗಳಿಸಿದ್ದಾರೆ.
ಇದನ್ನೂ ಓದಿ:ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಕೋಚ್ ಸ್ಥಾನಕ್ಕೆ ರಾಜೀನಾಮೆ ನೀಡಿದ ಜಸ್ಟಿನ್ ಲ್ಯಾಂಗರ್
ವೆಸ್ಟ್ ಇಂಡೀಸ್ ವಿರುದ್ಧ ಒಟ್ಟು ರನ್ ಗಳಿಸಿದವರ ಪಟ್ಟಿಯಲ್ಲೂ ವಿರಾಟ್ ಕೊಹ್ಲಿ ಮೊದಲ ಸ್ಥಾನದಲ್ಲಿದ್ದಾರೆ. ವಿರಾಟ್ ಕೊಹ್ಲಿ 39 ಪಂದ್ಯಗಳಿಂದ 2235 ರನ್ ಗಳಿಸಿದ್ದು, ಸಚಿನ್ ತೆಂಡೂಲ್ಕರ್ ಅವರು 39 ಪಂದ್ಯಗಳಲ್ಲಿ 1573 ರನ್ ಗಳಿಸಿದ್ದಾರೆ. ರೋಹಿತ್ ಅವರು 33 ಪಂದ್ಯಗಳಲ್ಲಿ 1523 ರನ್ ಗಳಿಸಿದ್ದಾರೆ. ರೋಹಿತ್ ಶರ್ಮಾ ಅವರು ಈ ಸರಣಿಯಲ್ಲಿ ಸಚಿನ್ ತೆಂಡೂಲ್ಕರ್ ದಾಖಲೆ ಮುರಿಯುವುದು ಬಹುತೇಕ ಖಚಿತವಾಗಿದೆ.