Advertisement

ಬಾಬರ್ ಅಜಂ- ರಿಜ್ವಾನ್ ದಾಖಲೆ ಮುರಿದ ಕೆಎಲ್ ರಾಹುಲ್- ರೋಹಿತ್ ಜೋಡಿ

09:46 AM Oct 03, 2022 | Team Udayavani |

ಗುವಾಹಟಿ: ಭಾರತದ ಆರಂಭಿಕ ಜೋಡಿ ರೋಹಿತ್ ಶರ್ಮಾ ಮತ್ತು ಕೆಎಲ್ ರಾಹುಲ್ ಅವರು ಹೊಸ ಟಿ20 ದಾಖಲಯೊಂದನ್ನು ಬರೆದರು. ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ಗಳಲ್ಲಿ ಹೆಚ್ಚು 50-ಪ್ಲಸ್ ಜೊತೆಯಾಟವಾಡಿರುವ ದಾಖಲೆಯನ್ನು ಮುರಿದರು

Advertisement

ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಸರಣಿಯ ಎರಡನೇ ಟಿ20 ಪಂದ್ಯದ ವೇಳೆ ಭಾರತದ ಜೋಡಿ ಈ ಸಾಧನೆ ಮಾಡಿದೆ. ರಾಹುಲ್ – ರೋಹಿತ್ ಜೋಡಿ 15ನೇ ಸಲ ಅರ್ಧ ಶತಕದ ಜೊತೆಯಾಟವಾಡಿದರು. ಪಾಕಿಸ್ತಾನದ ಆರಂಭಿಕ ಜೋಡಿ ಬಾಬರ್ ಅಜಂ-ಮೊಹಮ್ಮದ್ ರಿಜ್ವಾನ್ ಈ ಹಿಂದೆ 50-ಪ್ಲಸ್ ಜೊತೆಯಾಟಗಳ ದಾಖಲೆಯನ್ನು (14) ಹೊಂದಿದ್ದರು.

ಪಾಕಿಸ್ತಾನದ ಜೋಡಿ ಈಗ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದರೆ, ಐರಿಶ್ ಜೋಡಿ ಪಾಲ್ ಸ್ಟಿರ್ಲಿಂಗ್-ಕೆವಿನ್ ಒ’ಬ್ರೇನ್ 13 ಅಂತಹ ಜೊತೆಯಾಟ ಆಡಿ ಮೂರನೇ ಸ್ಥಾನದಲ್ಲಿದ್ದಾರೆ.

ಈ ಪಂದ್ಯದಲ್ಲಿ ಕೆಎಲ್ ರಾಹುಲ್ 28 ಎಸೆತಗಳಲ್ಲಿ ಐದು ಬೌಂಡರಿ ಹಾಗೂ ನಾಲ್ಕು ಭರ್ಜರಿ ಸಿಕ್ಸರ್‌ಗಳ ನೆರವಿನಿಂದ 57 ರನ್ ಗಳಿಸಿ ಅಮೋಘ ಅರ್ಧಶತಕ ಗಳಿಸಿದರು.

ಇದನ್ನೂ ಓದಿ:ಗುಂಡ್ಲುಪೇಟೆ: ಜಮೀನಿನಲ್ಲಿ ಅಕ್ರಮವಾಗಿ ಶೇಖರಿಸಿಟ್ಟಿದ್ದ 510 ಚೀಲದ ರಸ ಗೊಬ್ಬರ ವಶ

Advertisement

ಭಾರತ ತಂಡದ ನಾಯಕ ರೋಹಿತ್ ಶರ್ಮಾ 37 ಎಸೆತಗಳಲ್ಲಿ 7 ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 43 ರನ್ ಗಳಿಸಿ ಉತ್ತಮ ಕಾಣಿಕೆ ನೀಡಿದರು.

ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ಮೂರು ವಿಕೆಟ್ ನಷ್ಟಕ್ಕೆ 237 ರನ್ ಗಳಿಸಿದರೆ, ದಿಟ್ಟ ಹೋರಾಟ ಮಾಡಿದ ದಕ್ಷಿಣ ಆಫ್ರಿಕಾ ಮೂರು ವಿಕೆಟ್ ಕಳೆದುಕೊಂಡು 221 ರನ್ ಗಳಿಸಿತು. ಈ ಮೂಲಕ ಭಾರತ ತಂಡ 16 ರನ್ ಅಂತರ ಜಯ ಸಾಧಿಸಿತು.

Advertisement

Udayavani is now on Telegram. Click here to join our channel and stay updated with the latest news.

Next