ಬರ್ಮಿಂಗ್ ಹ್ಯಾಂ: ಇಂಗ್ಲೆಂಡ್ ವಿರುದ್ಧ ಟೆಸ್ಟ್ ಪಂದ್ಯದಲ್ಲಿ ಸೋಲನುಭವಿಸಿದರೂ, ಟಿ20 ಸರಣಿಯಲ್ಲಿ ಭಾರತ ತಂಡ ಸೇಡು ತೀರಿಸಿಕೊಂಡಿದೆ. ಶನಿವಾರ ನಡೆದ ಎರಡನೇ ಟಿ20 ಪಂದ್ಯವನ್ನೂ ಗೆದ್ದ ರೋಹಿತ್ ಶರ್ಮಾ ಪಡೆ, ಇನ್ನೂ ಒಂದು ಪಂದ್ಯ ಬಾಕಿ ಇರುವಂತೆ ಸರಣಿ ವಶಪಡಿಸಿಕೊಂಡಿದೆ.
ಇದೇ ವೇಳೆ ನಾಯಕ ರೋಹಿತ್ ಶರ್ಮಾ ಅವರು ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಅವರ ದಾಖಲೆ ಸರಿಗಟ್ಟುವ ಸನಿಹದಲ್ಲಿದ್ದಾರೆ. ಶನಿವಾರ ಗೆಲುವಿನೊಂದಿಗೆ ನಾಯಕನಾಗಿ ರೋಹಿತ್ ಸತತ 19ನೇ ಗೆಲುವು ದಾಖಲಿಸಿದರು. ಭಾರತ ತಂಡ ಇಂದು (ಜುಲೈ 10) ಪಂದ್ಯ ಗೆದ್ದು ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದರೆ ರೋಹಿತ್ ಸತತ 20 ಪಂದ್ಯ ಗೆದ್ದ ಸಾಧನೆ ಮಾಡಲಿದ್ದಾರೆ.
2003 ರಲ್ಲಿ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಅವರು 20 ಪಂದ್ಯಗಳನ್ನು ನಾಯಕನಾಗಿ ಗೆದ್ದಿದ್ದಾರೆ. ರೋಹಿತ್ ಇಂದಿನ ಪಂದ್ಯ ಗೆದ್ದರೆ ಪಾಂಟಿಂಗ್ ದಾಖಲೆಯನ್ನು ಸರಿಗಟ್ಟಲು ಸಾಧ್ಯವಾಗುತ್ತದೆ.
ಇದನ್ನೂ ಓದಿ:‘ಸಣ್ಣ ಕಡಿತದ ಬಗೆಗೂ ಎಚ್ಚರದಿಂದಿರಿ’- ವಿಶ್ವ ಪ್ರಾಣಿಜನ್ಯ ರೋಗ ದಿನ
ವಿರಾಟ್ ಕೊಹ್ಲಿ ಟಿ20 ನಾಯಕತ್ವದಿಂದ ಕೆಳಗಿಳಿದ ನಂತರ ಮತ್ತು ಕಳೆದ ವರ್ಷ ಏಕದಿನ ನಾಯಕತ್ವದಿಂದ ವಜಾಗೊಂಡ ನಂತರ ಬಿಸಿಸಿಐ ರೋಹಿತ್ ಶರ್ಮಾ ಅವರನ್ನು ಸೀಮಿತ ಓವರ್ ತಂಡದ ನಾಯಕರನ್ನಾಗಿ ನೇಮಿಸಿತು. 2022 ರ ಜನವರಿಯಲ್ಲಿ ಕೊಹ್ಲಿ ಟೆಸ್ಟ್ ತಂಡದ ನಾಯಕತ್ವವನ್ನೂ ತ್ಯಜಿಸಿದ ನಂತರ ರೋಹಿತ್‌ಗೆ ಟೆಸ್ಟ್ ತಂಡದ ಜವಾಬ್ದಾರಿಯನ್ನು ಹಸ್ತಾಂತರಿಸಲಾಯಿತು