Advertisement

ಟಿ20 ಪಂದ್ಯದ ವೇಳೆ ಸಿರಾಜ್ ತಲೆಗೆ ಹೊಡೆದ ನಾಯಕ ರೋಹಿತ್: ವಿಡಿಯೋ ವೈರಲ್

10:29 AM Nov 18, 2021 | Team Udayavani |

ಜೈಪುರ: ಇಲ್ಲಿನ ಸವಾಯ್ ಮಾನ್ ಸಿಂಗ್ ಕ್ರೀಡಾಂಗಣದಲ್ಲಿ ನಡೆದ ನ್ಯೂಜಿಲ್ಯಾಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತ ತಂಡ ಗೆಲುವು ಸಾಧಿಸಿತು. ಐದು ವಿಕೆಟ್ ಅಂತರದಿಂದ ಪಂದ್ಯ ಗೆದ್ದ ಭಾರತ ತಂಡ ಸರಣಿಯಲ್ಲಿ 1-0 ಅಂತರದಿಂದ ಮುನ್ನಡೆ ಸಾಧಿಸಿತು.

Advertisement

ಬೌಲಿಂಗ್ ವಿಭಾಗದಲ್ಲಿ ರವಿಚಂದ್ರನ್ ಅಶ್ವಿನ್ ಮತ್ತು ಬ್ಯಾಟಂಗ್ ನಲ್ಲಿ ಸೂರ್ಯಕುಮಾರ್ ಯಾದವ್ ಭಾರತಕ್ಕೆ ನೆರವಾದರು. ಪೂರ್ಣಪ್ರಮಾಣದ ನಾಯಕನಾಗಿ ಮೊದಲ ಪಂದ್ಯವಾಡಿದ ರೋಹಿತ್ ಶರ್ಮಾ ಕೂಡಾ ಉತ್ತಮ ಆಟವಾಡಿದರು.

ಬ್ಯಾಟಿಂಗಿಗೆ ಇಳಿಸಲ್ಪಟ್ಟ ನ್ಯೂಜಿಲ್ಯಾಂಡ್‌ ಮಾರ್ಟಿನ್‌ ಗಪ್ಟಿಲ್‌, ಮಾರ್ಕ್‌ ಚಾಪ್‌ಮನ್‌ ಅವರ ಅರ್ಧ ಶತಕಗಳ ನೆರವಿನಿಂದ 6 ವಿಕೆಟಿಗೆ 164 ರನ್‌ ಗಳಿಸಿತು. ಗುರಿ ಬೆನ್ನತ್ತಿದ ಭಾರತ 19.4 ಓವರ್‌ಗಳಲ್ಲಿ 5 ವಿಕೆಟಿಗೆ 166 ರನ್‌ ಬಾರಿಸಿತು. ಸೂರ್ಯಕುಮಾರ್ ಯಾದವ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

ಇದನ್ನೂ ಓದಿ:ನ್ಯೂಜಿಲ್ಯಾಂಡ್ ಆಟಗಾರ ರಚಿನ್ ರವೀಂದ್ರ ಹೆಸರಿನ ಹಿಂದಿದೆ ರಾಹುಲ್-ಸಚಿನ್ ಅಭಿಮಾನದ ಗುಟ್ಟು

ಆದರೆ ಭಾರತದ ಬ್ಯಾಟಿಂಗ್ ವೇಳೆ ಡಗೌಟ್ ನಲ್ಲಿ ರೋಹಿತ್ ಶರ್ಮಾ ಅವರು ತನ್ನೆದುರು ಕುಳಿತಿದ್ದ ಮೊಹಮ್ಮದ್ ಸಿರಾಜ್ ಗೆ ಹೊಡೆದರು. ರೋಹಿತ್ ಶರ್ಮಾ, ಕೆ.ಎಲ್.ರಾಹುಲ್ ಮತ್ತು ಮೊಹಮ್ಮದ್ ಸಿರಾಜ್ ಒಟ್ಟಿಗೆ ಕುಳಿತಿದ್ದರು. ಈ ವೇಳೆ ರೋಹಿತ್ ತಮಾಷೆಯಿಂದ ಸಿರಾಜ್ ತಲೆಗೆ ಹೊಡೆದರು. ಸಿರಾಜ್ ಕೂಡಾ ಇದಕ್ಕೆ ನಕ್ಕರು.

Advertisement

ಈ ವಿಡಿಯೋ ಇದೀಗ ವೈರಲ್ ಆಗಿದೆ. ಅಭಿಮಾನಿಗಳು ವಿವಿಧ ರೀತಿಯಲ್ಲಿ ಇದರ ಬಗ್ಗೆ ಕಮೆಂಟ್ ಮಾಡುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next