Advertisement

ರೋಹಿತ್‌ಗೆ ಭೀತಿಯೊಡ್ಡಿದ್ದ ವೇಗಿಗಳು

12:54 AM May 04, 2020 | Sriram |

ಮುಂಬಯಿ: ನೀವು ಯಾವಾಗ ಶ್ರೇಷ್ಠ ಆಟಗಾರರಾಗಬೇಕೆಂದು ಬಯಸುವಿರೋ ಆಗ ಶ್ರೇಷ್ಠ ಎದುರಾಳಿಗಳನ್ನು ನಿಭಾಯಿಸಿ ನಿಲ್ಲುವುದು ಮುಖ್ಯ ಎಂಬ ಮಾತಿದೆ. ಜಗತ್ತಿನ ಎಲ್ಲ ಖ್ಯಾತ ಕ್ರೀಡಾಪಟುಗಳಿಗೂ ಅನ್ವಯಿಸುವ ಮಾತಿದು. ಆದರೂ ಕೆಲವು ಕಾಲಘಟ್ಟದಲ್ಲಿ ಅನೇಕರು ಅತ್ಯಂತ ಅಪಾಯಕಾರಿಯಾಗಿ ಗೋಚರಿಸಿ ಆಟಗಾರನ ನಿದ್ದೆಗೆಡಿಸುವುದಿದೆ. ಇದಕ್ಕೆ ರೋಹಿತ್‌ ಶರ್ಮ ಕೂಡ ಹೊರತಲ್ಲ.

Advertisement

ಲಾಕ್‌ಡೌನ್‌ ಸಮಯದಲ್ಲಿ ಬಿಡುವಾಗಿರುವ ರೋಹಿತ್‌ ಶರ್ಮ ತನಗೆ ಭೀತಿಯೊಡ್ಡಿದ ನಾಲ್ವರು ವೇಗದ ಬೌಲರ್‌ಗಳ ಬಗ್ಗೆ ಹೇಳಿಕೊಂಡಿದ್ದಾರೆ. ಇವರಲ್ಲಿ ಮುಂಚೂಣಿಯಲ್ಲಿರುವವರು ಆಸ್ಟ್ರೇಲಿಯದ ಬ್ರೆಟ್‌ ಲೀ. ಬಳಿಕ ಡೇಲ್‌ ಸ್ಟೇನ್‌. ಸಮಕಾಲೀನರಲ್ಲಿ ಜೋಶ್‌ ಹ್ಯಾಝಲ್‌ವುಡ್‌ ಮತ್ತು ಕಾಗಿಸೊ ರಬಾಡ ಅವರ ಎಸೆತಗಳನ್ನು ನಿಭಾಯಿಸುವುದು ಕಷ್ಟ ಎಂಬುದು ರೋಹಿತ್‌ ಅನಿಸಿಕೆ.

ನಿದ್ದೆ ಹಾರಿಸಿದ ಬ್ರೆಟ್‌ ಲೀ
ಕ್ರಿಕೆಟಿನ ಆರಂಭದ ದಿನಗಳಲ್ಲಿ ತಾನು ಬ್ರೆಟ್‌ ಲೀ ಅವರಿಂದ ಸಾಕಷ್ಟು ಕಷ್ಟಗಳನ್ನು ಎದುರಿಸಿದೆ ಎನ್ನುತ್ತಾರೆ ರೋಹಿತ್‌ ಶರ್ಮ. “ಅದು 2007ರ ಚೊಚ್ಚಲ ಆಸ್ಟ್ರೇಲಿಯ ಪ್ರವಾಸ. 150-155 ಕಿ.ಮೀ. ವೇಗದಲ್ಲಿ ಎಸೆತಗಳನ್ನಿಕ್ಕುವ ಬ್ರೆಟ್‌ ಲೀ ಅವರನ್ನು ಹೇಗಪ್ಪ ಎದುರಿಸುವುದು ಎಂಬುದು ನನ್ನ ಆತಂಕಕ್ಕೆ ಕಾರಣವಾಗಿತ್ತು. ಆಗ ಲೀ ತಮ್ಮ ಬೌಲಿಂಗಿನ ಉತ್ತುಂಗದಲ್ಲಿದ್ದರು. ಅವರ ವೇಗಕ್ಕೆ ನನ್ನ ನಿದ್ದೆಯೆಲ್ಲ ಹಾರಿಹೋಗಿತ್ತು…’ ಎಂದು ರೋಹಿತ್‌ ಸ್ಟಾರ್‌ ಸ್ಪೋರ್ಟ್ಸ್ “ಕ್ರಿಕೆಟ್‌ ಕನೆಕ್ಟೆಡ್‌’ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

“ಡೇಲ್‌ ಸ್ಟೇನ್‌ ನನ್ನ ಪಾಲಿನ ಮತ್ತೂಬ್ಬ ಅಪಾಯಕಾರಿ ಬೌಲರ್‌. ಲೀ ಮತ್ತು ಸ್ಟೇನ್‌ ಅವರ ಎಸೆತಗಳನ್ನು ನಾನು ಮತ್ತೆಂದೂ ಎದುರಿಸಲು ಬಯಸುವುದಿಲ್ಲ. ಏಕಕಾಲದಲ್ಲಿ ಸ್ಟೇನ್‌ ಅವರ ಪೇಸ್‌ ಮತ್ತು ಸ್ವಿಂಗ್‌ ಅನ್ನು ನಿಭಾಯಿಸುವುದು ನಿಜಕ್ಕೂ ಕಷ್ಟ’ ಎಂಬುದು ರೋಹಿತ್‌ ಅನಿಸಿಕೆ.

Advertisement

Udayavani is now on Telegram. Click here to join our channel and stay updated with the latest news.

Next