ಪರ್ತ್: ರೋಹಿತ್ ಶರ್ಮಾ ನಾಯಕತ್ವದ ಟೀಂ ಇಂಡಿಯಾ ಐಸಿಸಿ ಟಿ20 ವಿಶ್ವಕಪ್ ತಯಾರಿಯಲ್ಲಿದೆ. ಪರ್ತ್ ನಲ್ಲಿ ನಿತ್ಯ ಅಭ್ಯಾಸದಲ್ಲಿ ತೊಡಗಿರುವ ಭಾರತ ತಂಡವು ಕೂಟ ಆರಂಭಕ್ಕೂ ಮೊದಲು ಎರಡು ಪ್ರಾಕ್ಟಿಸ್ ಮ್ಯಾಚ್ ಆಡಲಿದೆ. ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್ ವಿರುದ್ಧ ಎರಡು ಪಂದ್ಯಗಳು ನಡೆಯಲಿದೆ.
ಇಂದು ಪರ್ತ್ ಮೈದಾನದಲ್ಲಿ ಅಭ್ಯಾಸದಲ್ಲಿ ತೊಡಗಿದ್ದ ಟೀಂ ಇಂಡಿಯಾ ಕ್ಯಾಂಪ್ ನಲ್ಲಿ 11 ವರ್ಷದ ಬಾಲಕನೋರ್ವ ಗಮನ ಸೆಳೆದಿದ್ದಾನೆ. ನಾಯಕ ರೋಹಿತ್ ಶರ್ಮಾಗೆ ಬೌಲಿಂಗ್ ಮಾಡಿರುವ ಬಾಲಕ ಎಲ್ಲರು ಹುಬ್ಬೇರಿಸುವಂತೆ ಮಾಡಿದ್ದಾನೆ.
ಟೀಂ ಇಂಡಿಯಾ ವಾಕಾ ಮೈದಾನದಕ್ಕೆ ನೆಟ್ ಸೆಶನ್ ಗೆ ಬಂದಾಗ ಅಲ್ಲಿ ಸುಮಾರು ಮಕ್ಕಳು ಅಭ್ಯಾಸ ನಡೆಸುತ್ತಿದ್ದರು. ಸುಮಾರು ನೂರಕ್ಕೂ ಹೆಚ್ಚು ಮಕ್ಕಳಲ್ಲಿ 11 ವರ್ಷದ ಬಾಲಕ ದೃಶಿಲ್ ಚೌಹಾಣ್ ತನ್ನ ಬೌಲಿಂಗ್ ನಿಂದ ಟೀಂ ಇಂಡಿಯಾ ಆಟಗಾರರ ಗಮನ ಸೆಳೆದಿದ್ದಾನೆ. ಕೂಡಲೇ ಡ್ರೆಸ್ಸಿಂಗ್ ರೂಮ್ ನಿಂದ ಬಂದ ರೋಹಿತ್ ಶರ್ಮಾ ದೃಶಿಲ್ ಚೌಹಾಣ್ ಗೆ ಬಾಲ್ ಹಾಕುವಂತೆ ಹೇಳಿದ್ದಾನೆ.
ಇಡೀ ಘಟನೆಯ ಬಗ್ಗೆ ಮಾತನಾಡಿದ 11 ವರ್ಷದ ಬಾಲಕ,”ರೋಹಿತ್ ಶರ್ಮಾ ನನ್ನನ್ನು ನೋಡಿದರು ಮತ್ತು ಅವರು ನನಗೆ ಬೌಲಿಂಗ್ ಮಾಡಲು ಹೇಳಿದರು. ತುಂಬಾ ಆಶ್ಚರ್ಯವಾಯಿತು, ನಾನು ತುಂಬಾ ಉತ್ಸುಕನಾಗಿದ್ದೆ. ನನ್ನ ನೆಚ್ಚಿನ ಚೆಂಡು ಸ್ವಿಂಗ್ ಯಾರ್ಕರ್” ಎಂದರು.
ಇದನ್ನೂ ಓದಿ:ಮುಂಬಯಿ: ಕ್ಯಾಬ್ ಚಾಲಕ ಅನುಚಿತವಾಗಿ ವರ್ತಿಸಿದ ಕುರಿತು ನಟಿ ದೂರು
ನೆಟ್ಸ್ ನಲ್ಲಿ ಬೌಲಿಂಗ್ ಮಾಡುವ ವೇಲೆ “ ನೀನು ಪರ್ತ್ ನಲ್ಲಿದ್ದೀಯ, ಹೇಗೆ ಭಾರತ ತಂಡಕ್ಕೆ ಆಡುತ್ತೀಯಾ?” ಎಂದು ರೋಹಿತ್ ಹೇಳಿದರು. ಅದಕ್ಕುತ್ತಿರಿಸಿದ ದೃಶಿಲ್, “ ನಾನು ಭಾರತಕ್ಕೆ ಹೋಗುತ್ತೇನೆ, ಆದರೆ ನಾನು ಸಾಕಷ್ಟು ಒಳ್ಳೆಯ ಆಟಗಾರನಾಗುತ್ತೇನೆಯೇ ಎಂದು ನನಗೆ ತಿಳಿದಿಲ್ಲ” ಎಂದರು.