ಮುಂಬೈ: ಇದೇ ವರ್ಷಾಂತ್ಯದಲ್ಲಿ ಭಾರತದಲ್ಲಿ ಏಕದಿನ ವಿಶ್ವಕಪ್ ನಡೆಯಲಿದ್ದು, ಟೀಂ ಇಂಡಿಯಾ ಸಿದ್ದತೆಯಲ್ಲಿ ತೊಡಗಿದೆ. ಟೀಂ ಇಂಡಿಯಾದಲ್ಲಿ ಈಗಾಗಲೇ ಹಲವಾರು ಪ್ರಮುಖ ಆಟಗಾರರು ಗಾಯಗೊಂಡಿದ್ದು, ಇದು ನಾಯಕ ರೋಹಿತ್ ತಲೆನೋವಿಗೆ ಕಾರಣವಾಗಿದೆ.
ಸದ್ಯ ಕೆಲವೇ ದಿನಗಳಲ್ಲಿ ಐಪಿಎಲ್ ಆರಂಭವಾಗಲಿದೆ. ಸತತ ಪಂದ್ಯಗಳ ಕಾರಣದಿಂದ ಆಟಗಾರರು ಗಾಯಗೊಳ್ಳದಿರುವ ರೋಹಿತ್ ಶರ್ಮಾ ಸಲಹೆ ನೀಡಿದ್ದಾರೆ. ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯದ ಬಳಿಕ ರೋಹಿತ್ ಈ ಬಗ್ಗೆ ಮಾತನಾಡಿದ್ದಾರೆ.
“ಇದು ಈಗ ಫ್ರಾಂಚೈಸಿಗೆ ಬಿಟ್ಟದ್ದು. ಫ್ರಾಂಚೈಸಿಗಳು ಈಗ ಅವುಗಳನ್ನು ಹೊಂದಿದ್ದಾರೆ. ನಾವು ಅವರಿಗೆ ಕೆಲವು ಸೂಚನೆಗಳನ್ನು ನೀಡಿದ್ದೇವೆ. ಆದರೆ ಅಂತಿಮವಾಗಿ ಇದು ಫ್ರಾಂಚೈಸಿಗಳಿಗೆ ಬಿಟ್ಟದ್ದು. ಮುಖ್ಯವಾಗಿ ಆಟಗಾರರಿಗೆ. ಅವರ ದೇಹವನ್ನು ಅವರೇ ನೋಡಿಕೊಳ್ಳಬೇಕು. ಅವರೆಲ್ಲರೂ ಪ್ರೌಢರು. ಹಾಗಾಗಿ ಅವರು ತಮ್ಮ ದೇಹವನ್ನು ನೋಡಿಕೊಳ್ಳಬೇಕು. ಒತ್ತಡ ಸ್ವಲ್ಪ ಜಾಸ್ತಿಯಾಗುತ್ತಿದೆ ಎಂದು ಅನಿಸಿದರೆ ಸರಿ ಹೊಂದಿಸಬೇಕು, 1-2 ಪಂದ್ಯಗಳಲ್ಲಿ ವಿಶ್ರಾಂತಿ ಪಡೆಯಬಹುದು. ಆದರೆ ಅದು ಆಗುವುದು ಅನುಮಾನ” ಎಂದಿದ್ದಾರೆ.
ಇದನ್ನೂ ಓದಿ:ದೋಷಿ,2 ವರ್ಷ ಶಿಕ್ಷೆಯ ತೀರ್ಪು…ರಾಹುಲ್ ರಾಜಕೀಯ ಭವಿಷ್ಯ ಏನಾಗಲಿದೆ?ಕಾನೂನು ತಜ್ಞರು ಹೇಳೋದೇನು
ಜಸ್ಪ್ರೀತ್ ಬುಮ್ರಾ, ರಿಷಭ್ ಪಂತ್ ಮತ್ತು ಶ್ರೇಯಸ್ ಅಯ್ಯರ್ ಅವರು ಗಾಯದ ಕಾರಣದಿಂದ ಭಾರತ ತಂಡದ ಸೇವೆಗೆ ಲಭ್ಯವಾಗುತ್ತಿಲ್ಲ. ಬೆನ್ನುನೋವಿನ ಕಾರಣದಿಂದ ಶ್ರೇಯಸ್ ಅಯ್ಯರ್ ಮುಂದಿನ ಐಪಿಎಲ್ ಗೂ ಲಭ್ಯವಾಗುತ್ತಿಲ್ಲ.