Advertisement

Team India: ರೋಹಿತ್‌-ಕೊಹ್ಲಿ 5 ಸಾವಿರ ರನ್‌ ಜತೆಯಾಟ

12:30 AM Sep 13, 2023 | Team Udayavani |

ಈ ಪಂದ್ಯದಲ್ಲಿ ರೋಹಿತ್‌ ಶರ್ಮ ಮತ್ತು ವಿರಾಟ್‌ ಕೊಹ್ಲಿ ನಡೆಸಿದ್ದು 10 ರನ್‌ ಜತೆಯಾಟ ಮಾತ್ರ. ಅಷ್ಟರಲ್ಲಿ ಇವರಿಬ್ಬರು ದಾಖಲೆಯೊಂದನ್ನು ನಿರ್ಮಿಸಿ ಸುದ್ದಿಯಾದರು. ಏಕದಿನದಲ್ಲಿ 5 ಸಾವಿರ ರನ್‌ ಜತೆಯಾಟ ನಡೆಸಿದ ಭಾರತದ 3ನೇ ಜೋಡಿ ಎಂಬ ಹೆಗ್ಗಳಿಕೆ ಇವರದ್ದಾಯಿತು. ಇದಕ್ಕೂ ಮಿಗಿಲಾಗಿ 5 ಸಾವಿರ ರನ್‌ ಜತೆಯಾಟವನ್ನು ಅತೀ ಕಡಿಮೆ 86 ಇನ್ನಿಂಗ್ಸ್‌ಗಳಲ್ಲಿ ನಡೆಸಿದ ದಾಖಲೆಯೊಂದಿಗೆ ಗಮನ ಸೆಳೆದರು. ಈ ಸಂದರ್ಭದಲ್ಲಿ ಪತನಗೊಂಡದ್ದು ವೆಸ್ಟ್‌ ಇಂಡೀಸ್‌ನ ವಿಶ್ವವಿಖ್ಯಾತ ಗಾರ್ಡನ್‌ ಗ್ರೀನಿಜ್‌-ಡೆಸ್ಮಂಡ್‌ ಹೇನ್ಸ್‌ ಜೋಡಿಯ ದಾಖಲೆ ಎಂಬುದನ್ನು ಮರೆಯುವಂತಿಲ್ಲ. ಇವರು 5 ಸಾವಿರ ರನ್‌ ಜತೆಯಾಟಕ್ಕೆ 97 ಇನ್ನಿಂಗ್ಸ್‌ ತೆಗೆದುಕೊಂಡಿದ್ದರು.

Advertisement

ರೋಹಿತ್‌-ಕೊಹ್ಲಿ ಈ ಅವಧಿಯಲ್ಲಿ 18 ಶತಕದ ಜತೆಯಾಟ ಹಾಗೂ 15 ಅರ್ಧ ಶತಕದ ಜತೆಯಾಟ ನಡೆಸಿದರು, ಸರಾಸರಿ 62.47. ಇವರಿಬ್ಬರ ದೊಡ್ಡ ಜತೆಯಾಟ ದಾಖಲಾದದ್ದು ವೆಸ್ಟ್‌ ಇಂಡೀಸ್‌ ವಿರುದ್ಧದ 2018ರ ಗುವಾಹಟಿ ಪಂದ್ಯದಲ್ಲಿ. ಇಲ್ಲಿ ಭಾರತ 323 ರನ್‌ ಬೆನ್ನಟ್ಟಿ ಹೊರಟ ಸಂದರ್ಭದಲ್ಲಿ 246 ರನ್‌ ಪೇರಿಸಿದ್ದರು.

ಏಕದಿನದಲ್ಲಿ 5 ಸಾವಿರ ರನ್‌ ಜತೆಯಾಟ ನಡೆಸಿದ ಭಾರತದ ಉಳಿದೆರಡು ಜೋಡಿಯೆಂದರೆ ಸಚಿನ್‌ ತೆಂಡುಲ್ಕರ್‌-ಸೌರವ್‌ ಗಂಗೂಲಿ ಹಾಗೂ ರೋಹಿತ್‌ ಶರ್ಮ-ಶಿಖರ್‌ ಧವನ್‌. ಇದರೊಂದಿಗೆ ರೋಹಿತ್‌ ಇಬ್ಬರು ಜತೆಗಾರರೊಂದಿಗೆ 5 ಸಾವಿರ ರನ್‌ ಒಟ್ಟುಗೂಡಿಸಿದ ಹಿರಿಮೆಗೂ ಪಾತ್ರರಾದರು.

Advertisement

Udayavani is now on Telegram. Click here to join our channel and stay updated with the latest news.

Next