ಹೊಸದಿಲ್ಲಿ: ತಾನು ಟಿ20 ಪಂದ್ಯಗಳನ್ನಾಡುವ ಭರವಸೆಯನ್ನು ಕಳೆದುಕೊಂಡಿಲ್ಲ ಎಂಬುದಾಗಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮ ಅಚ್ಚರಿಯ ಹೇಳಿಕೆ ನೀಡಿ ದ್ದಾರೆ. ಮುಂದಿನ ವರ್ಷದ ಐಸಿಸಿ ಟಿ20 ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿ ಯನ್ನು ಎದುರು ನೋಡುತ್ತಿದ್ದೇನೆ ಎಂದಿದ್ದಾರೆ.
ಅಮೆರಿಕದಲ್ಲಿ ನಡೆದ ಸಮಾರಂಭ ವೊಂದರಲ್ಲಿ ರೋಹಿತ್ ಶರ್ಮ ಆಡಿದ ಮಾತುಗಳು ವೈರಲ್ ಆಗಿವೆ. “ನಾನು ಅಮೆರಿಕಕ್ಕೆ ಬಂದದ್ದು ಆನಂದಿಸುತ್ತ ಕಾಲ ಕಳೆಯುವ ಉದ್ದೇಶ ದಿಂದಲ್ಲ. ಇದಕ್ಕೆ ಇನ್ನೂ ಒಂದು ಕಾರಣ ಇದೆ. ಮುಂದಿನ ವರ್ಷದ ಜೂನ್‌ನಲ್ಲಿ ಟಿ20 ವಿಶ್ವಕಪ್ ಪಂದ್ಯಾ ವಳಿ ಇಲ್ಲಿ ನಡೆಯಲಿದೆ. ನೀವೆಲ್ಲರೂ ಉತ್ಸುಕರಾಗಿದ್ದೀರಿ ಎಂದು ಭಾವಿಸು ತ್ತೇನೆ. ನಾನು ಕೂಡ ಇದನ್ನು ಎದುರು ನೋಡುತ್ತಿದ್ದೇನೆ’ ಎಂದಿದ್ದಾರೆ ರೋಹಿತ್ ಶರ್ಮ.
2022ರ ಟಿ20 ವಿಶ್ವಕಪ್ ಸೆಮಿ ಫೈನಲ್ ಬಳಿಕ ರೋಹಿತ್ ಶರ್ಮ ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಆಡಿಲ್ಲ. ನ. 10ರ ಈ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್‌ಗೆ ಸೋತ ಭಾರತ ಕೂಟದಿಂದ ಹೊರಬಿದ್ದಿತ್ತು. ಇವರ ಅನುಪಸ್ಥಿತಿಯಲ್ಲಿ ಹಾರ್ದಿಕ್ ಪಾಂಡ್ಯ ತಂಡವನ್ನು ಮುನ್ನಡೆಸುತ್ತ ಬಂದಿದ್ದಾರೆ. ಶುಭಮನ್ ಗಿಲ್, ಇಶಾನ್ ಕಿಶನ್, ಸಂಜು ಸ್ಯಾಮ್ಸನ್, ತಿಲಕ್ ವರ್ಮ, ದೀಪಕ್ ಹೂಡಾ, ಯಶಸ್ವಿ ಜೈಸ್ವಾಲ್ ಮೊದಲಾದವರೆಲ್ಲ ಚುಟುಕು ಮಾದರಿಯ ಪಂದ್ಯಗಳಲ್ಲಿ ಅವಕಾಶ ಪಡೆಯುತ್ತಿದ್ದಾರೆ. ಹೀಗಾಗಿ ರೋಹಿತ್, ಕೊಹ್ಲಿ ಮೊದಲಾದ ಸೀನಿಯರ್ ಸಹಜವಾಗಿಯೇ ದೂರ ಸರಿದಿದ್ದಾರೆ. ಕಳೆದೆರಡು ವಿಶ್ವಕಪ್‌ಗ್ಳಲ್ಲಿ ಇವರೆಲ್ಲ ಮಿಂಚಲು ವಿಫಲರಾಗಿದ್ದರು.
ರೋಹಿತ್ ಆಗಲಿ, ಕೊಹ್ಲಿ ಆಗಲಿ ಟಿ20 ನಿವೃತ್ತಿ ಕುರಿತು ಈವರೆಗೆ ಯಾವುದೇ ಹೇಳಿಕೆ ನೀಡಿಲ್ಲ. ಬಿಸಿಸಿಐ ಜತೆಗೂ ಇವರು ಯಾವುದೇ ಮಾಹಿತಿ ಹಂಚಿಕೊಂಡಿಲ್ಲ. ಸದ್ಯ ಇವರೆಲ್ಲ ಟೆಸ್ಟ್ ನಲ್ಲಿ ಉತ್ತಮ ಪ್ರದರ್ಶನ ಕಾಯ್ದು ಕೊಂಡು ಬಂದಿದ್ದು, ವರ್ಷಾಂತ್ಯದ ಏಕದಿನ ವಿಶ್ವಕಪ್ ಪಂದ್ಯಾವಳಿಗಾಗಿ ಸಿದ್ಧತೆ ನಡೆಸುತ್ತಿದ್ದಾರೆ.