Advertisement
ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವೇದಿಕೆಯ ಪದಾಧಿಕಾರಿಗಳು ವಿಶ್ವಮಾನವ ರಾಷ್ಟ್ರಕವಿ ಕುವೆಂಪು ಅವರನ್ನು ಅವಹೇಳನ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ವಿಷಯವನ್ನು ಹರಡಿಸಿ ವಿಕೃತಿಯನ್ನು ಮೆರೆದಿರುವ ರಾಜ್ಯ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಅವರನ್ನು ಸಮಿತಿಯಿಂದ ವಜಾಗೊಳಿಸಿ ವಿದ್ಯಾರ್ಥಿಗಳ ಮನಸ್ಸನ್ನು ಕೆಡಿಸಲು ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದೆಂದು ಮನವಿ ಮಾಡಿದ್ದಾರೆ.
Related Articles
Advertisement
ರೋಹಿತ್ ಚಕ್ರತೀರ್ಥ ಮತ್ತು ಲಕ್ಷ್ಮಣ್ ಆಕಾಶೆ ಕಾರ್ಕಳ ಅವರ ಬರಹಗಳು ದುರುದ್ದೇಶದಿಂದ ಕೂಡಿದ್ದು ನಾಡಿನ ಜನತೆಯ ಸಹನೆ ಸೌಹಾರ್ಧತೆಯನ್ನು ಕೆಡಿಸುವಂತಹ ಉದ್ದೇಶದಿಂದಲೇ ಬರೆಯಲಾಗಿದ್ದು ಶಾಂತಿಯಲ್ಲಿರುವ ನಾಡಿನಲ್ಲಿ ಈ ರೀತಿಯ ಸಾಮರಸ್ಯ ಕದಡುವ ಬರಹಗಳು ಹಿಂಸೆಗೆ ಪ್ರಚೋದಿಸುವಂತಾಗಿದ್ದು ರಾಷ್ಟ್ರಕವಿಯನ್ನು ಅವಮಾನಿಸಿರುವ ರೋಹಿತ್ ಚಕ್ರತೀರ್ಥ ಅವರನ್ನು ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯಿಂದ ಕೂಡಲೇ ಕೈಬಿಡಬೇಕು ಮತ್ತು ಈ ತಿಂಗಳ ಅಂತ್ಯದೊಳಗೆ ರೋಹಿತ್ ಚಕ್ರತೀರ್ಥ ಕ್ಷಮೆಯಾಚಿಸಬೇಕು ಇಲ್ಲದಿದ್ದ ಪಕ್ಷದಲ್ಲಿ ಜಿಲ್ಲೆಯಾದ್ಯಂತ ಬೃಹತ್ ಪ್ರತಿಭಟನೆ ನಡೆಸಲಾಗುವುದೆಂದು ಸಮಾನ ಮನಸ್ಕರ ವೇದಿಕೆಯ ಪದಾಧಿಕಾರಿಗಳು ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಸಮಾನಮನಸ್ಕರ ವೇದಿಕೆಯ ಪದಾಧಿಕಾರಿಗಳಾದ ಯಲುವಹಳ್ಳಿ ರಮೇಶ್, ಮಾಜಿ ಶಾಸಕ ಎಸ್.ಎಂ. ಮುನಿಯಪ್ಪ, ಕೆ.ಆರ್. ರೆಡ್ಡಿ, ಚಿಕ್ಕಬಳ್ಳಾಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸೊಣ್ಣೇಗೌಡ,ಕಾಮ್ರೆಡ್ ಲಕ್ಷ್ಮಯ್ಯ, ಕ್ರೀಡಾ ಪಟ್ಟು ಶ್ರೀನಿವಾಸ್, ಹನುಮಂತಪ್ಪ ಮತ್ತಿತರರು ಉಪಸ್ಥಿತರಿದ್ದರು.