Advertisement
ಪುಣೆ ನಗರ ಯುವ ಕಾಂಗ್ರೆಸ್ ಅಧ್ಯಕ್ಷ ವಿಶಾಲ್ ಹರಿ ಮಲ್ಕೆ ಕಾಂಗ್ರೆಸ್ ಭವನದಲ್ಲಿ ರೋಹನ್ ಪಿ. ಶೆಟ್ಟಿಯವರಿಗೆ ನಿಯುಕ್ತಿ ಪತ್ರ ನೀಡಿ ಅಭಿನಂದಿಸಿ ಶುಭಹಾರೈಸಿದರು.
ಇವರು 2011-12 ರಲ್ಲಿ ಡಿಇಎಸ್ ಲಾ ಕಾಲೇಜಿನಲ್ಲಿ ವಿದ್ಯಾರ್ಥಿ ಪ್ರತಿನಿಧಿಯಾಗಿ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿ ¨ªಾರೆ. ಡಿಇಎಸ್ ಲಾ ಕಾಲೇಜಿನ ಅಲುಮ್ನಿ ಅಸೋಸಿಯೇಶನ್‌ನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ¨ªಾರೆ. ಯೂಥ್ ದ ಪರ್ವ ಟು ಚೇಂಜ್ ಎನ್ನುವ ಯುವ ಸಂಘಟನೆಯ ಸ್ಥಾಪಕಾಧ್ಯಕ್ಷರಾಗಿ, ಲೆಟ್ಸ್ ಇನ್ಸ$³ರ್ಯ ಎನ್ನುವ ಸರಕಾರೇತರ ಸಂಸ್ಥೆಯನ್ನು ಸ್ಥಾಪಿಸಿ ಮಕ್ಕಳ ಅಭಿವೃದ್ಧಿಗೆ ಶ್ರಮಿಸಿ ¨ªಾರೆ. ಹಲವಾರು ರಾಜಕೀಯ ಚಟುವಟಿಕೆಗಳು, ಮುಷ್ಕರಗಳು, ಆಂದೋಲನಗಳನ್ನು ಸಮಾಜದ ಅಭಿವೃದ್ಧಿಯ ಚಿಂತನೆಯಡಿಯಲ್ಲಿ ಯಶಸ್ವಿಯಾಗಿ ಸಂಘಟಿಸಿದ ಶ್ರೇಯಸ್ಸು ಇವರಿಗೆ ಸಲ್ಲುತ್ತದೆ. ಕೊಳೆಗೇರಿ ಪ್ರದೇಶದಲ್ಲಿ ವಾಸಿಸುತ್ತಿ ರುವ ಬಡ ಮಕ್ಕಳಿಗೆ ಶೈಕ್ಷಣಿಕ ಪರಿಕರಗಳನ್ನು ವಿತರಿಸಿ ಶಿಕ್ಷಣಕ್ಕೆ ಪ್ರೋತ್ಸಾಹಿಸುವ ಕಾರ್ಯ, ಕಳೆದ 13 ವರ್ಷಗಳಿಂದ ಪಂಢರಾಪುರಕ್ಕೆ ತೆರಳುವ ವಾರ್ಕರಿಗಳಿಗೆ ಸೇವಾ ಕಾರ್ಯಗಳನ್ನು ಮಾಡುವುದು, ವಿವಿಧ ಕ್ರೀಡಾ ಚಟುವಟಿಕೆಗಳನ್ನು ಆಯೋಜಿಸುವುದು, ವಿವಿಧ ಸಂಸ್ಥೆಗಳಲ್ಲಿ ಶೈಕ್ಷಣಿಕ ಸಂಸ್ಥೆಗಳಲ್ಲಿ ಸಾಮಾಜಿಕ ವಿಷಯಗಳ ಬಗ್ಗೆ ಚರ್ಚಾ ಕಮ್ಮಟದಲ್ಲಿ ಭಾಗವಹಿಸಿ¨ªಾರೆ. 2017 ರಿಂದ ಪುಣೆ ತುಳುಕೂಟದ ಯುವ ವಿಭಾಗದ ಕಾರ್ಯಾಧ್ಯಕ್ಷರಾಗಿ ಆಯ್ಕೆಗೊಂಡು ಪುಣೆಯಲ್ಲಿರುವ ಯುವ ತುಳು-ಕನ್ನಡಿಗರನ್ನು ಸಂಘಟಿಸಿ ದ್ದರಲ್ಲದೆ ಹಲವಾರು ಕಾರ್ಯ ಕ್ರಮಗಳನ್ನು ಮಾಡುವ ಮೂಲಕ ಕ್ರಿಯಾಶೀಲ ವ್ಯಕ್ತಿತ್ವದೊಂದಿಗೆ ಗುರುತಿಸಿಕೊಂಡಿದ್ದಾರೆ. 2017 ರ ಪುಣೆ ಮಹಾನಗರಪಾಲಿಕೆ ಚುನಾವಣೆಯಲ್ಲಿಯೂ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ¨ªಾರೆ. ಇವರು ಪುಣೆಯ ನಿವೃತ್ತ ಬ್ಯಾಂಕ್ ಉದ್ಯೋಗಿಯಾಗಿರುವ ಪುರುಷೋತ್ತಮ ಶೆಟ್ಟಿ ಹಾಗೂ ಸಮಾಜಸೇವಕಿ ಪ್ರೇಮಾ ಶೆಟ್ಟಿಯವರ ಪುತ್ರ.
Related Articles
Advertisement