Advertisement

Rohan Cup; ಕ್ರೀಡೆಯಿಂದ ಸೌಹಾರ್ದ, ಪ್ರೀತಿ: ಯು.ಟಿ.ಖಾದರ್‌

12:35 AM Jan 06, 2024 | Team Udayavani |

ಮಂಗಳೂರು: ಕ್ರೀಡೆಯು ಸೌಹಾರ್ದತೆ, ಸೋದರತೆ ಹಾಗೂ ಪ್ರೀತಿ ಹಂಚಿಕೊಳ್ಳುವುದರ ಸಂಕೇತ ಎಂದು ರಾಜ್ಯ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್‌ ಅಭಿಪ್ರಾಯಪಟ್ಟಿದ್ದಾರೆ.

Advertisement

ದ.ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ವತಿಯಿಂದ ಕ್ಯಾಪ್ಟನ್‌ ಪ್ರಾಂಜಲ್‌ ಗೌರವಾರ್ಥ ಬ್ರಾಂಡ್‌ ಮಂಗಳೂರು “ರೋಹನ್‌ ಕಪ್‌’ ಪತ್ರಕರ್ತರ ರಾಜ್ಯ ಮಟ್ಟದ ಕ್ರಿಕೆಟ್‌ ಪಂದ್ಯಾವಳಿಗೆ ಅಡ್ಯಾರ್‌ ಸಹ್ಯಾದ್ರಿ ಮೈದಾನದಲ್ಲಿ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು.

ಜಿಲ್ಲೆಯ ಪತ್ರಕರ್ತರು ರಾಜಕೀಯ, ಕ್ರೀಡೆ ಹೀಗೆ ಎಲ್ಲ ಕ್ಷೇತ್ರಗಳಲ್ಲೂ ಬೆರೆತು ಜನರಿಗೆ ಸಂಪರ್ಕ ಸೇತುವೆಯಾಗಿ ಸಮಾಜಕ್ಕೆ ಹತ್ತಿರವೆನಿಸುವ ಕಾರ್ಯ ನಡೆಸುತ್ತಿದ್ದಾರೆ. ಈ ಪಂದ್ಯಾಟವೂ ಅದೇ ರೀತಿ ಕ್ರೀಡಾ ಸ್ಫೂರ್ತಿ ಮೂಡಿಸುವಲ್ಲಿ ನೆರವಾಗುತ್ತದೆ ಎಂದರು.

ರಾಜಕೀಯವೂ ಕ್ರಿಕೆಟ್‌ನ ರೀತಿ ಯೇ. ಆದರೆ ಕ್ರಿಕೆಟ್‌ನಲ್ಲಿ ಚೆಂಡು ಎಲ್ಲಿಂದ ಬರುತ್ತದೆ ಗೊತ್ತಾಗದು ಎಂದ ಅವರು, ಈ ಪಂದ್ಯಾಟದಲ್ಲಿ ಎಲ್ಲರೂ ಗೆಲ್ಲಲಾಗದು, ಯಾರು ಗೆದ್ದರೂ ಅದು ಕರ್ನಾಟಕ ಪತ್ರಕರ್ತರ ಗೆಲುವೇ ಆಗಿರಲಿದೆ ಎಂದು ಹೇಳಿದರು.

ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ಅಧ್ಯಕ್ಷ ಡಾ| ಎಂ.ಎನ್‌. ರಾಜೇಂದ್ರ ಕುಮಾರ್‌ ಅವರು ಮಾತನಾಡಿ, ಪತ್ರಕರ್ತರ ಪಂದ್ಯಾವಳಿ ರಾಜ್ಯಕ್ಕೆ ಮಾದರಿಯಾಗಲಿ. ಪಂದ್ಯಾಟ ಯಶಸ್ವಿ ಯಾಗಲಿ ಎಂದರು.

Advertisement

ರೋಹನ್‌ ಕಾರ್ಪೊರೇಶನ್‌ ಆಡಳಿತ ನಿರ್ದೇಶಕ ರೋಹನ್‌ ಮೊಂತೇರೋ ಟ್ರೋಫಿ ಅನಾವರಣಗೊಳಿಸಿದರು.

ಎಂಆರ್‌ಜಿ ಗ್ರೂಪ್‌ನ ಅಧ್ಯಕ್ಷ ಪ್ರಕಾಶ್‌ ಶೆಟ್ಟಿ, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಬಾಳ ಜಗನ್ನಾಥ ಶೆಟ್ಟಿ,, ಪತ್ರಿಕಾ ಭವನ ಟ್ರಸ್ಟ್‌ ಅಧ್ಯಕ್ಷ ರಾಮಕೃಷ್ಣ ಆರ್‌., ಸಂಸದ ನಳಿನ್‌ ಕುಮಾರ್‌ ಕಟೀಲು, ಶಾಸಕ ವೇದವ್ಯಾಸ ಕಾಮತ್‌, ವಿಧಾನ ಪರಿಷತ್‌ ಸದಸ್ಯ ಮಂಜುನಾಥ ಭಂಡಾರಿ, ಮೇಯರ್‌ ಸುಧೀರ್‌ ಶೆಟ್ಟಿ ಕಣ್ಣೂರು ಮತ್ತಿತರರು ಉಪಸ್ಥಿತರಿದ್ದರು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್‌ ಇಂದಾಜೆ ಸ್ವಾಗತಿಸಿದರು, ಪ್ರ. ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ವಂದಿಸಿದರು, ಮಂಗಳೂರು ಪ್ರಸ್‌ ಕ್ಲಬ್‌ ಅಧ್ಯಕ್ಷ ಪಿ. ಬಿ. ಹರೀಶ್‌ ರೈ ನಿರೂಪಿಸಿದರು.

ಜನಪ್ರತಿನಿಧಿಗಳ ಬ್ಯಾಟಿಂಗ್‌, ಬೌಲಿಂಗ್‌ ರಂಜನೆ!
ಪಂದ್ಯಾಟಕ್ಕೆ ಮುನ್ನ ನಡೆದ ಮೇಯರ್‌ ಇಲೆವನ್‌ ಹಾಗೂ ಪತ್ರಕರ್ತರ ಇಲೆವೆನ್‌ ಮಧ್ಯೆ ಪ್ರದರ್ಶನ ಪಂದ್ಯದಲ್ಲಿ ಮೇಯರ್‌ ಇಲೆವೆನ್‌ ಜಯ ಗಳಿಸಿತು. ಮೇಯರ್‌ ಸುಧೀರ್‌ ಶೆಟ್ಟಿ ಕಣ್ಣೂರು ಅವರ ನೇತೃತ್ವದ ತಂಡದಲ್ಲಿ ಖಾದರ್‌, ನಳಿನ್‌, ವೇದವ್ಯಾಸ ಕಾಮತ್‌ ಮತ್ತಿತರರು ಬ್ಯಾಟಿಂಗ್‌, ಬೌಲಿಂಗ್‌ ಮತ್ತು ಫೀಲ್ಡಿಂಗ್‌ ಮಾಡುವ ಮೂಲಕ ಮನರಂಜಿಸಿದ್ದು ವಿಶೇಷ.

Advertisement

Udayavani is now on Telegram. Click here to join our channel and stay updated with the latest news.

Next