Advertisement
ಟೋಕ್ಯೋ ಒಲಿಂಪಿಕ್ ಡಬಲ್ಸ್‌ನಲ್ಲಿ ಅರ್ಹತೆ ಪಡೆಯಲು ತನಗೆ ಪಾಲ್ಗೊಳ್ಳಲು ಸಾಧ್ಯವಾಗಿಲ್ಲ. ಇದಕ್ಕೆ ಭಾರತ ಟೆನಿಸ್ ಸಂಸ್ಥೆಯ (ಎಐಟಿಎ) ಬೇಜವಾಬ್ದಾರಿಯೇ ಕಾರಣ ಎನ್ನುವುದು ರೋಹನ್ ಬೋಪಣ್ಣ ಆರೋಪ. ತಮ್ಮಿಂದೇನೂ ತಪ್ಪಾಗಿಲ್ಲ. ಅವರನ್ನು ಟೋಕ್ಯೋಗೆ ಕಳಿಸಲು ತಮ್ಮಿಂದಾದ ಎಲ್ಲ ಪ್ರಯತ್ನ ಮಾಡಿದ್ದೇವೆ ಎಂದು ಎಐಟಿಎ ಹೇಳಿಕೊಂಡಿದೆ.
Related Articles
Advertisement
ಆದ ಸಮಸ್ಯೆಯಾದರೂ ಏನು?: ಈ ಬಾರಿ ಒಲಿಂಪಿಕ್‌ನ ಪುರುಷರ ಡಬಲ್ಸ್‌ನಲ್ಲಿ ಆಡಲು ಶ್ರೇಯಾಂಕ ಲೆಕ್ಕಾಚಾರದಲ್ಲಿ ರೋಹನ್ ಬೋಪಣ್ಣ ದಿವಿಜ್ ಶರಣ್ ಅರ್ಹತೆ ಪಡೆದಿರಲಿಲ್ಲ. ದಿವಿಜ್ ಶ್ರೇಯಾಂಕ ಕಡಿಮೆಯಿದ್ದಿದ್ದೇ ಕಾರಣ. ಆದರೂ ಇಬ್ಬರ ಹೆಸರನ್ನು ಡಬಲ್ಸ್‌ಗೆ ಜೂ.22ರೊಳಗೆ ಎಐಟಿಎ ಹೆಸರು ಶಿಫಾರಸು ಮಾಡಿತ್ತು.ಬೇರೆ ಆಟಗಾರರು ಹಿಂದೆ ಸರಿದರೆ ಇವರಿಬ್ಬರಿಗೆ ಅವಕಾಶ ಸಿಗುವ ದೂರ ಸಾಧ್ಯತೆಯೊಂದಿದೆ ಇದರ ಹಿಂದಿನ ತರ್ಕ.
ಪ್ರಮುಖ ಅಂತಾರಾಷ್ಟ್ರೀಯ ಸಿಂಗಲ್ಸ್ ಆಟಗಾರರು ಒಲಿಂಪಿಕ್‌ನಿಂದ ಹಿಂದೆ ಸರಿದ ಪರಿಣಾಮ; ಮೊನ್ನೆ ಶುಕ್ರವಾರ ಸಿಂಗಲ್ಸ್‌ನಲ್ಲಿ ಆಡಲು ಸುಮಿತ್ ನಾಗಲ್ ಅನಿರೀಕ್ಷಿತವಾಗಿ ಅರ್ಹತೆ ಪಡೆದರು! ಇದರಿಂದ ಖುಷಿಯಾದ ಎಐಟಿಎ ಡಬಲ್ಸ್‌ನಿಂದ ದಿವಿಜ್ ಶರಣ್ ಹೆಸರನ್ನು ಹಿಂಪಡೆದು, ನಾಗಲ್‌ಗೆ ಡಬಲ್ಸ್ ಜೊತೆಗಾರನಾಗಿ ರೋಹನ್ ಬೋಪಣ್ಣ ಹೆಸರನ್ನು ಶಿಫಾರಸು ಮಾಡಿತು. ಆದರೆ ಇದನ್ನು ಐಟಿಎಫ್ (ಅಂ.ರಾ. ಟನಿಸ್ ಒಕ್ಕೂಟ) ಒಪ್ಪಲಿಲ್ಲ. ಜೂ.22ರೊಳಗೆ ಈ ಜೋಡಿಯ ಹೆಸರನ್ನು ಪರ್ಯಾಯವಾಗಿ ಎಐಟಿಎ ಸೂಚಿಸಿರಲಿಲ್ಲ ಎನ್ನುವುದು ಐಟಿಎಫ್ ಖಚಿತ ನುಡಿ.