Advertisement

ರೋಗ್‌ ಹುಡುಗನ ರೇಮೋ

12:42 PM Jun 23, 2019 | Lakshmi GovindaRaj |

ಕನ್ನಡದಲ್ಲಿ “ರೋಗ್‌’ ಎಂಬ ಸಿನಿಮಾ ಬಂದಿರೋದು ನಿಮಗೆ ನೆನಪಿರಬಹುದು. ನಿರ್ಮಾಪಕ ಸಿ.ಆರ್‌.ಮನೋಹರ್‌ ಆವರ ಸಹೋದರ ಇಶಾನ್‌ ಈ ಚಿತ್ರದ ಮೂಲಕ ಹೀರೋ ಆಗಿ ಲಾಂಚ್‌ ಆಗಿದ್ದರು. ಪುರಿ ಜಗನ್ನಾಥ್‌ ಈ ಚಿತ್ರವನ್ನು ನಿರ್ದೇಶಿಸಿದ್ದರು. ಆದರೆ, ಚಿತ್ರ ಮಾತ್ರ ದೊಡ್ಡ ಮಟ್ಟದಲ್ಲಿ ಯಶಸ್ಸು ಕಾಣಲಿಲ್ಲ.

Advertisement

ಈಗ ಇಶಾನ್‌ ಮತ್ತೆ ಬಂದಿದ್ದಾರೆ. ಕಳೆದ ಬಾರಿ “ರೊ’ ಅಕ್ಷರದಿಂದ ಎಂಟ್ರಿಕೊಟ್ಟಿದ್ದ ಇಶಾನ್‌ ಈ ಬಾರಿ “ರೆ’ಯೊಂದಿಗೆ ಬರುತ್ತಿದ್ದಾರೆ. ಹೌದು, ನಿರ್ದೇಶಕ ಪವನ್‌ ಒಡೆಯರ್‌ ಜೊತೆಗೆ ಇಶಾನ್‌ ಹೊಸ ಸಿನಿಮಾ ಮಾಡುತ್ತಾರೆಂಬ ಸುದ್ದಿಯನ್ನು ನೀವು ಕೇಳಿರಬಹುದು. ಈಗ ಆ ಸಿನಿಮಾಕ್ಕೆ ಟೈಟಲ್‌ ಫಿಕ್ಸ್‌ ಆಗಿದೆ.

ಚಿತ್ರಕ್ಕೆ “ರೇಮೋ’ ಎಂದು ಶೀರ್ಷಿಕೆ ಇಡಲಾಗಿದ್ದು, ಗುರುವಾರ ಚಿತ್ರದ ಸ್ಕ್ರಿಪ್ಟ್ ಪೂಜೆ ನಡೆದಿದೆ. ಈ ಚಿತ್ರಕ್ಕೆ ಆಶಿಕಾ ರಂಗನಾಥ್‌ ನಾಯಕಿಯಾಗಿದ್ದಾರೆ. ಎಲ್ಲಾ ಓಕೆ, “ರೇಮೋ’ ಎಂದರೆ ಏನು ಎಂದು ನೀವು ಕೇಳಬಹುದು. ನಿರ್ದೇಶಕ ಪವನ್‌ ಒಡೆಯರ್‌ ಹೇಳುವಂತೆ ನಾಯಕ-ನಾಯಕಿಯ ಹೆಸರಿನ ಮೊದಲ ಅಕ್ಷರವನ್ನು ಸೇರಿಸಿ ಚಿತ್ರದ ಟೈಟಲ್‌ ಇಡಲಾಗಿದೆಯಂತೆ.

ಅಂದಹಾಗೆ, ಇದೊಂದು ಅಪ್ಪಟ ಲವ್‌ಸ್ಟೋರಿಯಾಗಿದ್ದು, ದೊಡ್ಡ ಗ್ಯಾಪ್‌ನ ಬಳಿಕ ನಿರ್ದೇಶಕ ಪವನ್‌ ಒಡೆಯರ್‌ ಲವ್‌ಸ್ಟೋರಿಗೆ ಮರಳಿದ್ದಾರೆ. ಇವತ್ತಿನ ಟ್ರೆಂಡ್‌ಗೆ ತಕ್ಕಂತಹ ಲವ್‌ಸ್ಟೋರಿಯಾಗಿದ್ದು, ಯೂತ್ಸ್ಗೆ ಚಿತ್ರ ಹೆಚ್ಚು ಇಷ್ಟವಾಗಲಿದೆ ಎಂಬುದು ನಿರ್ದೇಶಕ ಪವನ್‌ ಮಾತು. ಚಿತ್ರಕ್ಕೆ ವೈದಿ ಛಾಯಾಗ್ರಹಣವಿದೆ.

Advertisement

Udayavani is now on Telegram. Click here to join our channel and stay updated with the latest news.

Next