Advertisement

ಪೈನಲ್‌ ತಲುಪಿದ ರೋಜರ್‌ ಫೆಡರರ್‌

12:30 AM Mar 03, 2019 | |

ದುಬಾೖ: ಇಲ್ಲಿ ನಡೆಯುತ್ತಿರುವ “ದುಬಾೖ ಡ್ನೂಟಿ ಫ್ರೀ ಟೆನಿಸ್‌ ಚಾಂಪಿಯನ್‌ಶಿಪ್‌’ನಲ್ಲಿ ರೋಜರ್‌ ಫೆಡರರ್‌ ಕ್ರೊವೇಶಿಯದ ಬೋರ್ನ ಕೊರಿಕ್‌ ಅವರನ್ನು 6-2, 6-2 ಅಂತರದಿಂದ ಮಣಿಸಿ ಪೈನಲ್‌ ತಲುಪಿದ್ದಾರೆ.

Advertisement

ಫೈನಲ್‌ನಲ್ಲಿ ಫೆಡರರ್‌ ಗ್ರೀಕ್‌ನ ಸ್ಟಿಫ‌ನಸ್‌ ಸಿಸಿಪಸ್‌ ಅವರನ್ನು ಎದುರಿಸಲಿದ್ದಾರೆ. ಇನ್ನೊಂದು ಸೆಮಿಪೈನಲ್‌ನಲ್ಲಿ ಸಿಸಿಪಸ್‌ ಫ್ರಾನ್ಸ್‌ನ ಗೇಲ್‌ ಮಾನ್‌ಫಿಲ್ಸ್‌ ಅವರನ್ನು 6-7, 7-6 ಅಂತರದಿಂದ ಸೋಲಿಸಿದರು.

7 ಬಾರಿಯ ದುಬಾೖ ಚಾಂಪಿಯನ್‌ ಫೆಡರರ್‌ ಫೈನಲ್‌ ಪಂದ್ಯ ಗೆದ್ದರೆ ತಮ್ಮ ಜೀವನದ 100ನೇ ಪ್ರಶಸ್ತಿಗೆ ಭಾಜನರಾಗಲಿದ್ದಾರೆ. ಆಗ 100 ಪ್ರಶಸ್ತಿ ಗೆದ್ದ 2ನೇ ಟೆನಿಸಿಗನಾಗಲಿದ್ದಾರೆ. ಜಿಮ್ಮಿ ಕಾನರ್ ಮೊದಲಿಗ.

Advertisement

Udayavani is now on Telegram. Click here to join our channel and stay updated with the latest news.

Next