Advertisement
ಜ.1 ರಿಂದ ಜ.6ರ ವರೆಗೆ ಪುಣೆಯಲ್ಲಿ ಮಹಾರಾಷ್ಟ್ರ ಓಪನ್ ನಡೆಯಲಿದೆ. ಡಿ.30 ಮತ್ತು 31 ರಂದು ಅರ್ಹತಾ ಸುತ್ತಿನ ಪಂದ್ಯಗಳು ನಡೆಯಲಿವೆ. ಭಾರತದಲ್ಲಿ ಇದು ಪ್ರತಿಷ್ಠಿತ ಟೆನಿಸ್ ಟೂರ್ನಿಯಾಗಿದೆ. ಈ ಹಿಂದೆ ಇದೇ ಕೂಟಕ್ಕೆ ಚೆನ್ನೈ ಓಪನ್ ಎಂದು ಕರೆಯಲಾಗುತ್ತಿತ್ತು. ಇದೀಗ ಅದರ ಹೆಸರು ಬದಲಾಗಿದ್ದು, ಮಹಾರಾಷ್ಟ್ರ ಓಪನ್ ಎಂದು ನಾಮಕರಣ ಮಾಡಲಾಗಿದೆ. ಒಮ್ಮೆ ಈ ಬಾರಿ ಫೆಡರರ್ ಮತ್ತು ನಡಾಲ್ ಪಾಲ್ಗೊಂಡರೆ ವಿಶೇಷವಾಗಲಿದೆ.
ಪ್ರತಿಷ್ಠಿತ ಗ್ರ್ಯಾನ್‌ಸ್ಲಾಮ್‌ನಲ್ಲಿ ಒಂದಾದ ಆಸ್ಟ್ರೇಲಿಯಾ ಓಪನ್ ಜ.15 ರಿಂದ ಆರಂಭವಾಗಲಿದೆ. ಈ ಕೂಟ ಟೆನಿಸ್ ಆಟಗಾರರಿಗೆ ಮಹತ್ವದ ಕೂಟ. ಹೀಗಾಗಿ ಗ್ರ್ಯಾಮ್‌ಸ್ಲಾಮ್ ಅನ್ನು ಎದುರು ನಾಡುತ್ತಿರುವ ನಡಾಲ್ ಮತ್ತು ಫೆಡರರ್ ಮಹಾರಾಷ್ಟ್ರ ಓಪನ್‌ನಲ್ಲಿ ಆಡುವ ಸಾಧ್ಯತೆ ಇಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.