Advertisement

ರೋಜರ್ ಕಪ್‌ ಟೆನಿಸ್‌: ಹಾಲೆಪ್‌-ಸ್ಲೋನ್ಸ್‌  ಸ್ಟೀಫ‌ನ್ಸ್‌  ಸೆಣಸಾಟ

06:00 AM Aug 13, 2018 | |

ಮಾಂಟ್ರಿಯಲ್‌: ವಿಶ್ವದ ನಂಬರ್‌ ವನ್‌ ಸಿಮೋನಾ ಹಾಲೆಪ್‌ ರೋಜರ್ ಕಪ್‌ ಟೆನಿಸ್‌ ಕೂಟದ ಪ್ರಶಸ್ತಿಗಾಗಿ ಅಮೆರಿಕದ ಸ್ಲೋನ್‌ ಸ್ಟೀಫ‌ನ್ಸ್‌ ಅವರ ಸವಾಲನ್ನು ಎದುರಿಸಲಿದ್ದು ಇದು ಫ್ರೆಂಚ್‌ ಓಪನ್‌ ಫೈನಲ್‌ ಹೋರಾಟದ ಪುನರಾವರ್ತನೆಯಾಗಲಿದೆ.

Advertisement

ಹಾಲಿ ಯುಎಸ್‌ ಓಪನ್‌ ಚಾಂಪಿಯನ್‌ ಆಗಿದ್ದ ಸ್ಟೀಫ‌ನ್ಸ್‌ ಅವರನ್ನು ರೋಲ್ಯಾಂಡ್‌ ಗ್ಯಾರೋಸ್‌ನಲ್ಲಿ ಉರುಳಿಸಿದ್ದ ರುಮಾ ನಿಯಾದ ಹಾಲೆಪ್‌ ಚೊಚ್ಚಲ ಗ್ರ್ಯಾನ್‌ ಸ್ಲಾಮ್‌ (ಫ್ರೆಂಚ್‌ ಓಪನ್‌) ಕೂಟದ ಪ್ರಶಸ್ತಿ ಗೆದ್ದ ಸಾಧನೆ ಮಾಡಿದ್ದರು. ಇದೀಗ ಸೇಡು ತೀರಿಸಿಕೊಳ್ಳುವ ಅವಕಾಶ ಸ್ಟೀಫ‌ನ್ಸ್‌ ಅವರಿಗೆ ಲಭಿಸಿದೆ.

ಹಾಲೆಪ್‌ ಈ ಮೊದಲು ನಡೆದ ಸೆಮಿಫೈನಲ್‌ ಪಂದ್ಯದಲ್ಲಿ ಆಸ್ಟ್ರೇಲಿಯದ 22ರ ಹರೆಯದ ಆ್ಯಶೆÉ ಬಾರ್ಟಿ ಅವರನ್ನು 6-4, 6-1 ಸೆಟ್‌ಗಳಿಂದ ಕೆಡಹಿ ಪ್ರಶಸ್ತಿ ಸುತ್ತಿಗೆ ತಲುಪಿದ್ದರು. ಇದೇ ವೇಳೆ ಸ್ಟೀಫ‌ನ್ಸ್‌ ಅವರು ಹಾಲಿ ಚಾಂಪಿಯನ್‌ ಎಲಿನಾ ಸ್ವಿಟೋಲಿನಾ ಅವರನ್ನು 6-3, 6-3 ಸೆಟ್‌ಗಳಿಂದ ಸೋಲಿಸಿದ್ದರು. ಐದು ಬಾರಿ ಸ್ವಿಟೋಲಿನಾ ಅವರ ಗೇಮ್‌ ಬ್ರೇಕ್‌ ಮಾಡಿದ್ದ ಸ್ಟೀಫ‌ನ್ಸ್‌ ಈ ಕೂಟದಲ್ಲಿ ಒಂದೇ ಒಂದು ಸೆಟ್‌ ಕಳೆದುಕೊಳ್ಳದೇ ಪ್ರಶಸ್ತಿ ಸುತ್ತಿಗೆ ತಲುಪಿದ್ದಾರೆ.

8 ಬಾರಿ ಮುಖಾಮುಖೀ
ಹಾಲೆಪ್‌ ಮತ್ತು ಸ್ಟೀಫ‌ನ್ಸ್‌ ಈ ಹಿಂದೆ 8 ಬಾರಿ ಮುಖಾಮುಖೀ ಯಾಗಿದ್ದು ಹಾಲೆಪ್‌ 6 ಗೆಲುವು 2 ಸೋಲಿನ ದಾಖಲೆ ಹೊಂದಿದ್ದಾರೆ. ಹಾಲೆಪ್‌ ಕಳೆದ 5 ಪಂದ್ಯಗಳ‌ಲ್ಲಿ ಸ್ಟೀಫ‌ನ್ಸ್‌ ವಿರುದ್ಧ ಜಯ ಸಾಧಿಸಿ ಗೆಲುವಿನ ವಿಶ್ವಾಸ ಮೂಡಿಸಿ ದ್ದಾರೆ. ಅವರಿಬ್ಬರು ರಕ್ಷಣಾತ್ಮಕ ಮತ್ತು ವೇಗದ ಆಟಕ್ಕೆ ಹೆಸರುವಾಸಿಯಾಗಿದ್ದಾರೆ. ಈ ಹಿಂದಿನ ಪಂದ್ಯದಲ್ಲಿ ನಾನು ಗೆಲುವಿನ ಸನಿಹಕ್ಕೆ ಬಂದಿದ್ದೆ. ಹಾಗಾಗಿ ಈ ಬಾರಿ ಗೆಲುವಿಗಾಗಿ ಶಕ್ತಿಮೀರಿ ಪ್ರಯತ್ನಿಸಲಿದ್ದೇನೆ ಎಂದು ಸ್ಟೀಫ‌ನ್ಸ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next