Advertisement

ಮಲಯಾಳಂಗೆ ರಾಕ್‌ಲೈನ್‌

11:00 AM Mar 11, 2017 | |

ಕನ್ನಡ, ತಮಿಳು, ತೆಲುಗು, ಹಿಂದಿ ಈ ನಾಲ್ಕು ಭಾಷೆಗಳಲ್ಲಿ, ಅದರಲ್ಲೂ ದೊಡ್ಡ ದೊಡ್ಡ ಸ್ಟಾರ್‌ಗಳ ಅಭಿನಯದಲ್ಲಿ ಚಿತ್ರಗಳನ್ನು ನಿರ್ಮಿಸಿದ್ದ ರಾಕ್‌ಲೈನ್‌ ವೆಂಕಟೇಶ್‌ ಈಗ ಮಲಯಾಳಂನಲ್ಲೂ ಸದ್ದಿಲ್ಲದೆ ಸಿನಿಮಾ ಮಾಡುತ್ತಾರೆ. ಈ ಮೂಲಕ ಐದು ಭಾಷೆಗಳಲ್ಲಿ ಚಿತ್ರಗಳನ್ನು ನಿರ್ಮಿಸಿರುವ ಕನ್ನಡದ ನಿರ್ಮಾಪಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

Advertisement

ಅಂದಹಾಗೆ, ರಾಕ್‌ಲೈನ್‌ ವೆಂಕಟೇಶ್‌ ನಿರ್ಮಿಸುತ್ತಿರುವ ಚಿತ್ರದ ಹೆಸರು “ವಿಲನ್‌’. ಈ ಚಿತ್ರದಲ್ಲಿ ಮಲಯಾಳಂ ಸೂಪರ್‌ಸ್ಟಾರ್‌ ಮೋಹನ್‌ ಲಾಲ್‌ ನಟಿಸುತ್ತಿರುವುದು ವಿಶೇಷ. “ವಿಲನ್‌’ ಚಿತ್ರವು ಈಗಾಗಲೇ ಶುರುವಾಗಿದೆ. ತಿರುವನಂತಪುರದಲ್ಲಿ ಮೊನ್ನೆ ಮಾರ್ಚ್‌ ಮೂರರಂದು ಚಿತ್ರ ಪ್ರಾರಂಭವಾಗಿದೆ. ಈ ಚಿತ್ರದಲ್ಲಿ ಮೋಹನ್‌ ಲಾಲ್‌ ಅವರು ರಿಟೈರ್ಡ್ ಪೊಲೀಸ್‌ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ.

ಅವರ ಜೊತೆಗೆ ತಮಿಳು ನಟ ವಿಶಾಲ್‌ ಸಹ ನಟಿಸುತ್ತಿದ್ದಾರಂತೆ. ಜೊತೆಗೆ ಮಂಜು ವಾರಿಯರ್‌, ಹಂಸಿಕಾ ಮೋಟ್ವಾನಿ, ರಾಶಿ ಖನ್ನಾ ಮುಂತಾದವರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರಕ್ಕೆ ಕಥೆ-ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವುದು ಉನ್ನಿಕೃಷ್ಣನ್‌. ಚಿತ್ರಕ್ಕೆ ಫೋರ್‌ ಮ್ಯೂಸಿಕ್ಸ್‌ ಅವರು ಸಂಗೀತ ಸಂಯೋಜಿಸುತ್ತಿದ್ದು, ಮನೋಜ್‌ ಪರಮಹಂಸ ಅವರು ಛಾಯಾಗ್ರಹಣ ಮಾಡುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next