Advertisement

ನಿರ್ಮಾಣದತ್ತ ರಾಕಿ ಭಾಯ್ ಚಿತ್ತ ? ಯಶ್ ಮುಂದಿನ ಸಿನಿಮಾ ಯಾವುದು !

08:34 PM Jan 09, 2021 | Team Udayavani |

ಬೆಂಗಳೂರು: ಸ್ಯಾಂಡಲ್ ವುಡ್ ಅಭಿಮಾನಿಗಳ ಅತೀ ಕಾತರತೆಯ ಸಿನಿಮಾ ಕೆಜಿಎಫ್ ಚಾಪ್ಟರ್-2 ನ ಟೀಸರ್ ವಿಶ್ವ ದಾಖಲೆಯೊಂದಿಗೆ 100 ಮಿಲಿಯನ್ ವೀಕ್ಷಣೆ ಕಂಡು ಚಿತ್ರತಂಡವನ್ನೂ ಒಳಗೊಂಡಂತೆ ನಟ ಯಶ್ ಅವರಿಗೆ ಬಹುದೊಡ್ಡ ಯಶಸ್ಸನ್ನು ತಂದುಕೊಟ್ಟಿದೆ. ಕನ್ನಡ ಸೇರಿದಂತೆ ಹಲವಾರು ಭಾಷೆಯ ಸಿನಿ ಪ್ರಿಯರು ಈ ಟೀಸರ್ ನೋಡಿ ಫಿದಾ ಆಗಿದ್ದಾರೆ

Advertisement

ಈ ನಡುವೆ ನಟ ಯಶ್ ಹೊಸದೊಂದು ಆಲೋಚನೆಯಲ್ಲಿದ್ದಾರೆ ಎಂಬ ಗುಸು ಗುಸು ಸುದ್ದಿಗಳು ಹರಿದಾಡುತ್ತಿವೆ. ಕೆಜಿಎಫ್ ಚಾಪ್ಟರ್ -2 ಸಿನಿಮಾದ ಬಳಿಕ ರಾಕಿ ಭಾಯ್ ನಿರ್ಮಾಣ ರಂಗಕ್ಕೆ ಇಳಿಯುವ ಸಾಧ್ಯತೆಗಳಿವೆ ಎಂಬ ಸುದ್ದಿ ಹರಿದಾಡುತ್ತಿವೆ. ಹಾಗಂತ ಯಶ್ ಯಾವ ಸಿನಿಮಾದ ನಿರ್ಮಾಪಕರಾಗಲಿದ್ದಾರೆ ಎಂಬಿತ್ಯಾದಿ ಯಾವ ಮಾಹಿತಿಗಳು ಇನ್ನೂ ತಿಳಿದುಬಂದಿಲ್ಲ.

ಯಶ್ ಅಭಿನಯಿಸುತ್ತಿರುವ ಮುಂದಿನ ಸಿನಿಮಾಕ್ಕೆ ಅವರೆ ಬಂಡವಾಳ ಹೂಡಲಿದ್ದಾರಂತೆ. ಅವರ ಆಪ್ತ ವಲಯ ಈ  ಸಲಹೆಯೊಂದನ್ನು ನೀಡಿದ್ದು, ರಾಕಿಂಗ್ ಸ್ಟಾರ್ ಅಭಿನಯದಲ್ಲಿ ಮೂಡಿಬರಲಿರುವ ಮುಂದಿನ ಸಿನಿಮಾ ಅವರ ಬ್ಯಾನರ್ ಅಡಿಯಲ್ಲಿಯೇ ನಿರ್ಮಾಣಗೊಳ್ಳುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.

ಇದನ್ನೂ ಓದಿ:ಅಮೀರಾ ಪುನ್ವಾನಿ ಹುಟ್ಟುಹಬ್ಬ ಆಚರಿಸಿದ ಅನುಷ್ಕಾ

ಯಶ್ ಅವರ ಮುಂದಿನ ಸಿನಿಮಾ ಯಾವುದಿರಬಹುದು ? 

Advertisement

ಕೆಜಿಎಫ್ ಸಿನಿಮಾದ ನಂತರ ಭಾರಿ ಖ್ಯಾತಿಯನ್ನು ಪಡೆದಿರುವ ನಟ ಯಶ್ ರಾಣಾ , ಕಿರಾತಕ 2 ಸೇರಿದಂತೆ  ಈಗಾಗಲೇ ಹಲವಾರು ಸಿನಿಮಾಗಳನ್ನು ತಮ್ಮ ಕೈಯಲ್ಲಿಟ್ಟುಕೊಂಡಿದ್ದಾರೆ.   ಆದರೆ ಯಾವ ಸಿನಿಮಾದಲ್ಲಿ ಇವರು ಕಾಣಿಸಿಕೊಳ್ಳಲಿದ್ದಾರೆ ಎಂಬುವುದು ಮಾತ್ರ ಇನ್ನೂ ತಿಳಿದುಬಂದಿಲ್ಲ. ಈ ಎಲ್ಲಾ ಸುದ್ದಿಗಳ ನಡುವೆ ಯಶ್ ಅವರ ಮುಂದಿನ ಸಿನಿಮಾವನ್ನು ಮಫ್ತಿ ನಿರ್ದೇಶಕ ನರ್ತನ್ ನಿರ್ದೇಶಿಸಲಿದ್ದಾರೆ ಎಂಬ ಗಾಸಿಪ್ ಗಳೂ ಹರಿದಾಡುತ್ತಿದ್ದು ಯಾವುದೂ ಇನ್ನು ಅಧಿಕೃತಗೊಂಡಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next