Advertisement

ಬಾಲ್ಯದ ನೆನಪನ್ನು ಮೆಲುಕು ಹಾಕಿದ ರಾಕಿಂಗ್ ಆ್ಯಂಕರ್

04:07 PM Nov 11, 2018 | |

ಕನ್ನಡ ಕಿರುತೆರೆಯ ನಂಬರ್ ಒನ್​ ಆ್ಯಂಕರ್​ ಯಾರು ಅಂದರೆ ಎಲ್ಲರೂ ಹೇಳೋ ಮೊದಲ ಹೆಸರೇ ಅನುಶ್ರೀ. ಕನ್ನಡದ ರಿಯಾಲಿಟಿ ಶೋ “ಬಿಗ್​​ಬಾಸ್’ ಮನೆಗೆ ಎಂಟ್ರಿ ಕೊಟ್ಟ ಬಳಿಕ ಅನುಶ್ರೀ ಮತ್ತಷ್ಟು ಫೇಮಸ್ ಆಗಿದ್ದರು. ತಮ್ಮ ಮಾತಿನ ಮೂಲಕವೇ ಎಲ್ಲರನ್ನೂ ಸೆಳೆಯುವ ಅನುಶ್ರೀಗೆ ದೊಡ್ಡ ಅಭಿಮಾನಿ ಬಳಗವಿದೆ.

Advertisement

ಅಲ್ಲದೇ ಅಷ್ಟೇ ಕಷ್ಟಪಟ್ಟು ಇಷ್ಟೊಂದು ಎತ್ತರಕ್ಕೆ ಅನುಶ್ರೀ ಬೆಳೆದು ನಿಂತಿದ್ದು, ರಾಕಿಂಗ್ ಆ್ಯಂಕರ್ ಎಂಬ ಪಟ್ಟವನ್ನು ಪಡೆದಿದ್ದಾರೆ ಕೂಡಾ. ಸದ್ಯಕ್ಕೆ ಅನುಶ್ರೀ ಇನ್​ಸ್ಟಾಗ್ರಾಂನಲ್ಲಿ ತುಂಬಾ ಸಕ್ರಿಯವಾಗಿದ್ದು, ಪ್ರತಿ ದಿನವೂ ಒಂದಾದರೂ ತಮ್ಮ ದಿನಚರಿಯ ಫೋಟೊ ಅಥವಾ ಹಳೆಯ ಫೋಟೋಗಳನ್ನು ಪೋಸ್ಟ್ ಮೂಲಕ ಹಂಚಿಕೊಳ್ಳುತ್ತಿರುತ್ತಾರೆ. 

ಹೀಗೆ ಅನುಶ್ರೀ ಮೆಹೆಂದಿ ಹಾಕಿಕೊಂಡು ಸಂಭ್ರಮಿಸುತ್ತಿರುವ ಬಾಲ್ಯದ ಮುದ್ದಾದ​ ಫೋಟೊವನ್ನು ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. “Pehchaan kaun???? ನೆನಪುಗಳು ಮಧುರ ಅದರಲ್ಲು ಚಿಕ್ಕ ಮಕ್ಕಳಾಗಿದ್ದಾಗಿನ ನೆನಪು ಸುಮಧುರ….’ ಎಂದು ಬರೆದುಕೊಂಡಿದ್ದು, ಇದಕ್ಕೆ ಸಾಕಷ್ಟು ತರಹೇವಾರಿ ಕಮೆಂಟ್‍ಗಳು ಬಂದಿದೆ. ಸದ್ಯಕ್ಕೆ ಪೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇನ್ನು ಅನುಶ್ರೀ “ಉಪ್ಪು ಹುಳಿ ಖಾರ’ ನಂತರ “ಟ್ಯೂಬ್​ಲೈಟ್​​’ ಚಿತ್ರದಲ್ಲಿ ನಟಿಸುತ್ತಿದ್ದು, ಸಿನಿಮಾದ ಟ್ರೈಲರ್​ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next