ಗಾಝಾ/ಜೆರುಸಲೇಂ: ಇಸ್ರೇಲ್ ಪಡೆಗಳು ಮಂಗಳವಾರ ಗಾಝಾ ಪಟ್ಟಿ ಮೇಲೆ ನಡೆಸಿದ ದಾಳಿಯಲ್ಲಿ ಇರಾನ್ ಬೆಂಬಲಿತ ಪ್ಯಾಲೆಸ್ತೀನ್ ಮೂಲದ ಉಗ್ರ ಸಂಘಟನೆಯ ಮುಖಂಡ ಬಲಿಯಾಗಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.
ಕಳೆದ ಒಂದು ತಿಂಗಳಿನಿಂದ ಗಡಿಯಲ್ಲಿ ದಾಳಿ ನಡೆಯುತ್ತಿದ್ದು, ನಿನ್ನೆ ಇಡೀ ದಿನ ನಡೆದ ದಾಳಿಯಲ್ಲಿ ಇಸ್ಲಾಮಿಕ್ ಜಿಹಾದ್ ನ ಬಹಾ ಅಬು ಅಲ್ ಅಟ್ಟಾ ಸಾವನ್ನಪ್ಪಿರುವುದಾಗಿ ಸಿರಿಯಾದ ಮಾಧ್ಯಮದ ವರದಿ ವಿವರಿಸಿದೆ.
ಇಸ್ರೇಲ್ ಪಡೆ ಗಾಝಾ ಪಟ್ಟಿಯಲ್ಲಿ ರಾತ್ರಿ ನಡೆಸಿದ ವಾಯು ದಾಳಿಯಲ್ಲಿ ಉಗ್ರ ಸಂಘಟನೆಯ ಮುಖ್ಯಸ್ಥ ಅಲ್ ಅಟ್ಟಾ ಮತ್ತು ಆತನ ಪತ್ನಿ ಸೇರಿದಂತೆ ಹತ್ತು ಮಂದಿ ಪ್ಯಾಲೆಸ್ತೀನಿಯರು ಸಾವನ್ನಪ್ಪಿರುವುದಾಗಿ ಗಾಝಾ ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.
ಮತ್ತೊಂದು ಪ್ರತ್ಯೇಕ ವಾಯು ದಾಳಿಯು ಡಮಾಸ್ಕಸ್ ನಲ್ಲಿರುವ ಇಸ್ಲಾಮಿಕ್ ಅಧಿಕೃತ ಕಚೇರಿ ಮತ್ತು ಮನೆ ಮೇಲೆ ನಡೆಸಿದ್ದು, ಇಬ್ಬರು ಸಾವನ್ನಪ್ಪಿರುವುದಾಗಿ ವರದಿ ಹೇಳಿದೆ. ಇಸ್ರೇಲ್ ಡಮಾಸ್ಕಸ್ ಮೇಲೆ ದಾಳಿ ನಡೆಸಿರುವುದಾಗಿ ಸಿರಿಯಾ ಆರೋಪಿಸಿದೆ. ಆದರೆ ಇಸ್ರೇಲ್ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.