ಚಂಡೀಗಢ: ಪಂಜಾಬ್ ನ ತರನ್ ತರನ್ ನಲ್ಲಿ ಶುಕ್ರವಾರ ತಡರಾತ್ರಿ ಪೊಲೀಸ್ ಠಾಣೆಯ ಮೇಲೆ ರಾಕೆಟ್ ದಾಳಿ ನಡೆದಿದೆ. ಠಾಣೆಯೊಳಗೆ ಗ್ರೆನೇಡ್ ಸ್ಫೋಟವಾಗಿದೆ ಎಂದು ವರದಿ ತಿಳಿಸಿದೆ.
ಘಟನೆಯು ರಾತ್ರಿ ಸುಮಾರು ಒಂದು ಗಂಟೆ ವೇಳೆಗೆ ನಡೆದಿದೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ. ಪೊಲೀಸ್ ಠಾಣೆಯ ಹೊರ ಪಿಲ್ಲರ್ ಗೆ ರಾಕೆಟ್ ಅಪ್ಪಳಿಸಿದ ಕಾರಣ ಕಟ್ಟಡಕ್ಕೂ ಹೆಚ್ಚಿನ ಹಾನಿಯಾಗಿಲ್ಲ ಎಂದು ಮೂಲಗಳು ತಿಳಿಸಿವೆ.
ಇದು ಪರಿಣಾಮಕಾರಿ ರಾಕೆಟ್ ಆಗಿದ್ದು, ಆದರೆ ಠಾಣೆಯಲ್ಲಿ ಪಿಲ್ಲರ್ ನ ಮೇಲೆ ಬಿದ್ದು ರಿಬೌಂಡ್ ಆದ ಕಾರಣ ಹೆಚ್ಚಿನ ಹಾನಿ ಉಂಟು ಮಾಡಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಪಂಜಾಬ್ ಡಿಜಿಪಿ ಗೌರವ್ ಯಾದವ್ ಮತ್ತು ಪೊರೆನ್ಸಿಕ್ ತಂಡ ಸ್ಥಳಕ್ಕೆ ಭೇಟಿ ನೀಡಿದೆ.
ಇದನ್ನೂ ಓದಿ:ಸ್ಯಾಂಡಲ್ ವುಡ್ ನಿಂದ ರಶ್ಮಿಕಾ ಬ್ಯಾನ್ ಆಗಿದ್ದು ಹೌದಾ? ನಟಿ ಹೇಳುವುದೇನು?
ಪಾಕಿಸ್ಥಾನಿ ಗುಪ್ತಚರ ಪಡೆ ಐಎಸ್ಐ ನ ಬೆಂಬಲ ಪಡೆಯುತ್ತಿರುವ ಖಲಿಸ್ಥಾನಿ ಉಗ್ರ ಸಂಘಟನೆಗಳು ಈ ಕೃತ್ಯ ನಡೆಸಿವೆ ಎನ್ನಲಾಗಿದೆ. ಹರ್ವಿಂದರ್ ಸಿಂಗ್ ರಿಂಡಾ ಅವರ ಸಾವಿಗೆ ಐಎಸ್ಐ ನೀಡಿದ ಪ್ರತಿಕ್ರಿಯೆ ಇದಾಗಿದೆ ಎಂದು ಅಂದಾಜಿಸಲಾಗಿದೆ.
ಗ್ಯಾಂಗ್ ಸ್ಟರ್ ಆಗಿದ್ದುಕೊಂಡು ಇತ್ತೀಚೆಗೆ ಭಯೋತ್ಪಾದಕ ಕೃತ್ಯ ಮಾಡುತ್ತಿದ್ದ ಹರ್ವಿಂದರ್ ಸಿಂಗ್ ರಿಂಡಾ ಇತ್ತೀಚೆಗೆ ಹತ್ಯೆಯಾಗಿದ್ದ.