Advertisement

ಮನೆ ಕೆಲಸಕ್ಕೂ ಅನುವಾದಕ್ಕೂ ತಂತ್ರಜ್ಞಾನದ ನೆರವು

12:44 PM Apr 26, 2017 | Karthik A |

ಬೀಜಿಂಗ್‌: ಒಂದೇ ಗಂಟೆಯಲ್ಲಿ ಈ ರೊಬೋಟ್‌ ಬರೋಬ್ಬರಿ 3,600 ವಸ್ತುಗಳನ್ನು ಅಚ್ಚುಕಟ್ಟಾಗಿ ಜೋಡಿಸುತ್ತದೆ, ಮನೆಗೆ ನೆಂಟರು ಬಂದರೆ ಚಹಾ, ಕಾಫಿ ತಂದು ಅತಿಥಿ ಸತ್ಕಾರ ಮಾಡುತ್ತದೆ, ವ್ಯಾಕ್ಯೂಮ್‌ ಕ್ಲೀನಿಂಗ್‌, ಪಾತ್ರೆ ತೊಳೆಯುವಂಥ ಮನೆ ಕೆಲಸ, ವಯೋವೃದ್ಧರ ಆರೈಕೆ… ಇವುಗಳಿಗೆ ಸಾಧ್ಯವಿಲ್ಲದ್ದು ಯಾವುದೂ ಇಲ್ಲ ಅನ್ನುವಷ್ಟರ ಮಟ್ಟಿಗೆ ರೊಬೋಟ್‌ಗಳ ಆವಿಷ್ಕಾರಗಳು ನಡೆಯುತ್ತಿವೆ. ಅದರಲ್ಲೂ ಈ ಕ್ಷೇತ್ರದಲ್ಲಿ ಪಾರಮ್ಯ ಸಾಧಿಸಲು ಚೀನ ಎಲ್ಲ ರೀತಿಯ ಕಸರತ್ತುಗಳನ್ನೂ ನಡೆಸುತ್ತಿದೆ. ಬಿಡಿ ಭಾಗಗಳ ಜೋಡಣೆ ಕ್ಷೇತ್ರದಲ್ಲಿ ಹೆಚ್ಚಿನ ಬಳಕೆ ಮಾಡಲು ಚಿಂತನೆ ನಡೆಸಿದ್ದು, ಈ ನಿಟ್ಟಿನಲ್ಲಿ ಕೆಲಸ ಮಾಡುವ 2 ಸಾವಿರ ಕಂಪೆನಿಗಳಿಗೆ ಸಬ್ಸಿಡಿ ನೀಡಲು ಮುಂದಾಗಿದೆ.

Advertisement

2016ರಲ್ಲಿ ಚೀನವು ಬರೋಬ್ಬರಿ 90 ಸಾವಿರ ಹೊಸ ರೊಬೋಟ್‌ಗಳನ್ನು ವಿವಿಧ ಕೆಲಸಗಳಿಗಾಗಿ ಅಳವಡಿಸಿಕೊಂಡಿದೆ. ಅಂದರೆ, ಇದು ಇಡೀ ಜಗತ್ತಿನಲ್ಲಿರುವ ಒಟ್ಟು ರೊಬೋಟ್‌ಗಳ ಪೈಕಿ ಮೂರನೇ ಒಂದರಷ್ಟು. ಒಳ್ಳೇದಾಯ್ತಲ್ವ ಎಂದು ಯೋಚಿಸಿದ್ರೆ ಅದು ಮೂರ್ಖತನ. ಮಾನವರು ಮಾಡುವ ಎಲ್ಲ ಕೆಲಸಗಳನ್ನೂ ಯಂತ್ರ ಮಾನವರು ಮಾಡಿದರೆ ನಮ್ಮ ಪಾಡೇನು? ‘ಫ್ಯಾಕ್ಟರಿಗಳಲ್ಲಿ ಯಾವಾಗ ಮನುಷ್ಯರೇ ಇಲ್ಲದಂಥ ಪರಿಸ್ಥಿತಿ ನಿರ್ಮಾಣವಾಗುತ್ತದೋ ಅಲ್ಲಿಯವರೆಗೆ ರೊಬೋಗಳ ತಯಾರಿ ಮುಂದುವರಿಸುತ್ತೇವೆ’ ಎನ್ನುತ್ತಾರೆ ಚೀನದ ರೋಬೋ ತಯಾರಿಕಾ ಕಂಪೆನಿ ಮಾಲಕ ಚು. ಇದು ನಿಜವಾದರೆ, ಮುದೆ ಭಾರತಕ್ಕೂ ಅಪಾಯ ಕಟ್ಟಿಟ್ಟ ಬುತ್ತಿ. ಸೇವಾ ಕ್ಷೇತ್ರಗಳಲ್ಲೂ ಮಾನವರ ಬದಲಿಗೆ ಯಂತ್ರಮಾನವರನ್ನು ಬಳಸಿಕೊಂಡರೆ ಹೆಚ್ಚಿನ ಉದ್ಯೋಗ ನಷ್ಟವಾಗುವ ಸಾಧ್ಯತೆ ಇಲ್ಲದಿಲ್ಲ. 

Advertisement

Udayavani is now on Telegram. Click here to join our channel and stay updated with the latest news.

Next