Advertisement

ಕ್ಲೀನ್ ‌ಮಾಡಲೊಂದು ರೋಬೋಟ್‌

02:32 PM Apr 27, 2020 | mahesh |

ಮನೆಗಳಲ್ಲಿ ನಾವು ಲಾಕ್‌ ಡೌನ್‌ ಆಗಿರುವ ಈ ಹೊತ್ತಿನಲ್ಲಿ, ಆಫೀಸು ಕೆಲಸಗಳ ನಡುವೆ ಮನೆಯ ಕೆಲಸಗಳಲ್ಲೂ ತೊಡಗಿಕೊಳ್ಳುತ್ತಿದ್ದೇವೆ. ಈ ಸಮಯದಲ್ಲಿ, ನೋಡಲು ವೇಯ್ಟ್ ಮಶೀನಿನಂತೆ ಕಾಣುವ ರೊಬೋಟ್‌  ವ್ಯಾಕ್ಯೂಮ್‌ ಕ್ಲೀನರ್‌ವೊಂದರ ಪರಿಚಯ ನೀಡುವುದು ಹೆಚ್ಚು ಸೂಕ್ತ ಎನಿಸುತ್ತದೆ. ಸ್ಮಾರ್ಟ್‌ ಫೋನ್‌ ಸಂಸ್ಥೆ ಶಿಯೋಮಿ, ಈ ಸಾಧನವನ್ನು ಭಾರತದಲ್ಲಿ ಬಿಡುಗಡೆಗೊಳಿಸಲಿದೆ. ಇದರ ವೈಶಿಷ್ಟ್ಯವೆಂದರೆ, ಕಸಮುಕ್ತಗೊಳಿಸುವುದು ಮಾತ್ರವಲ್ಲ, ಮನೆಯನ್ನು ಒರೆಸುತ್ತದೆ ಕೂಡಾ.

Advertisement

ರೋಬೋವ್ಯಾಕ್‌ ಎಂಬ ಹೆಸರಿನ ಈ ರೋಬೋಟ್‌ ವ್ಯಾಕ್ಯೂಮ್‌ ಕ್ಲೀನರ್‌, ಅಟೋಮ್ಯಾಟಿಕ್‌ ಆಗಿ ಕಾರ್ಯಾಚರಿಸುತ್ತದೆ. ಅಂದರೆ, ಇದನ್ನು ಚಾಲೂ
ಮಾಡಿ ಕೋಣೆಯೊಳಗೆ ಬಿಟ್ಟು ಬಿಟ್ಟರೆ ಆಯಿತು. ತನ್ನ ಪಾಡಿಗೆ ಕೆಲಸ ಶುರು ಮಾಡುತ್ತದೆ. ಇದರಲ್ಲಿ 12 ಸೆನ್ಸಾರ್‌ಗಳಿವೆ. ಅದರಲ್ಲಿ ಮುಖ್ಯವಾದುದು ಲೇಸರ್‌ ಡಿಸ್ಟನ್ಸ್ ಸೆನ್ಸಾರ್‌. ಈ ಸೆನ್ಸಾರ್‌ ಮನೆಯ ಉದ್ದಗಲವನ್ನು ಅಳೆದು, ಯಾವುದೇ ಸಮಸ್ಯೆ ಬಾರದಂತೆ ಮೂಲೆ ಮೂಲೆಗಳನ್ನು ಕವರ್‌ ಮಾಡುತ್ತಾ ಶುಚಿಗೊಳಿಸುತ್ತದೆ.

ಈ ಯಂತ್ರವನ್ನು ಸ್ಮಾರ್ಟ್‌ ಫೋನ್‌ ಮುಖಾಂತರ ನಿಯಂತ್ರಿಸಬಹುದು ಆ್ಯಪ್‌ನ ಸಹಾಯದಿಂದ ಟೈಮರ್‌ ಅನ್ನು ಸೆಟ್‌ ಮಾಡಬಹುದು. ಇದರಿಂದ, ಬಳಕೆದಾರ ನಿಗದಿಪಡಿಸಿದ ಸಮಯಕ್ಕೆ ಸರಿಯಾಗಿ, ಯಂತ್ರ ತಂತಾನೇ ಆನ್‌ ಆಗುವಂತೆ ಮಾಡಬಹುದು. ಈ ಕ್ಲೀನರ್‌ ಎಷ್ಟು ಸ್ಮಾರ್ಟ್‌ ಎಂದರೆ, ಇದರಲ್ಲಿನ ಬ್ಯಾಟರಿ ಖಾಲಿಯಾಗುತ್ತಿದ್ದಂತೆ, ತಾನಾಗಿಯೇ ಚಾರ್ಜಿಂಗ್‌ ಮಾಡುವ
ಜಾಗದ ಬಳಿ ಹೋಗುತ್ತದೆ. ಬ್ಯಾಟರಿ ರೀಚಾರ್ಜ್‌ ಆದ ನಂತರ, ತಾನು ಯಾವ ಸ್ಥಳದಲ್ಲಿ ಕೆಲಸ ಮಾಡುವುದನ್ನು ನಿಲ್ಲಿಸಿತ್ತೋ ಸರಿಯಾಗಿ ಅದೇ ಸ್ಥಳದಿಂದ ಮುಂದುವರಿಸುತ್ತದೆ. ಈ ಉತ್ಪನ್ನ ಭಾರತದಲ್ಲಿ ಬಿಡುಗಡೆ ಹೊಂದಲು ಕೆಲ ಸಮಯ ಕಾಯಬೇಕಾಗುತ್ತದೆ. ಇದಕ್ಕೆ ಸಂಸ್ಥೆ ನಿಗದಿ ಪಡಿಸಿರುವ ಅಂದಾಜು ಬೆಲೆ 17,999 ರೂ. ಇದನ್ನು ಪ್ರೀಬುಕ್‌ ಮಾಡಬಹುದು.

ಅದರ ವೈಶಿಷ್ಟ್ಯ
– ಗುಡಿಸುತ್ತದೆ, ಮನೆ ಒರೆಸುತ್ತದೆ
– ಮ್ಯಾಪಿಂಗ್‌ ಮತ್ತು ರೂಟ್‌ ಪ್ಲ್ಯಾನಿಂಗ್‌
– ಸ್ಮಾರ್ಟ್‌ ಆಪ್‌ ಕಂಟ್ರೋಲ್‌

Advertisement

Udayavani is now on Telegram. Click here to join our channel and stay updated with the latest news.

Next