Advertisement

ಕರ್ನಾಟಕಕ್ಕೂ ಬರಲಿವೆ ಕೇರಳದ ಪೌರಕಾರ್ಮಿಕ ರೋಬೋಗಳು

06:40 AM Apr 08, 2018 | |

ತಿರುವನಂತಪುರಂ: “ಬಂಡಿಕೂಟ್‌’ ಎಂಬ ಮ್ಯಾನ್‌ ಹೋಲ್‌ ಹಾಗೂ ಒಳಚರಂಡಿಗಳನ್ನು ಸ್ವತ್ಛಗೊಳಿಸುವ ರೊಬೋಟ್‌ಗಳನ್ನು ತಯಾರಿಸಿ ಸೈ ಎನ್ನಿಸಿಕೊಂಡಿರುವ ಕೇರಳದ ಹೊಸ ಸ್ಟಾರ್ಟಪ್‌ ಸಂಸ್ಥೆ ಜೆನ್‌ರೋಬೋಟಿಕ್ಸ್‌, ಇದೀಗ ತನ್ನ “ಪೌರಕಾರ್ಮಿಕ ರೋಬೋ’ ಗಳನ್ನು ಕರ್ನಾಟಕ ಹಾಗೂ ತಮಿಳುನಾಡಿಗೂ ಕಳುಹಿಸಲಿದೆ.

Advertisement

ಕೇರಳದ ಕೋವಲಂನಲ್ಲಿ ಶನಿವಾರ ಮುಕ್ತಾಯವಾದ 2 ದಿನಗಳ ತಂತ್ರಜ್ಞಾನ ವಸ್ತು ಪ್ರದರ್ಶನದಲ್ಲಿ, ಈ ರೋಬೋಗಳು ಗಮನ ಸೆಳೆದಿದ್ದು,ಇತ್ತೀಚೆಗೆ ಮ್ಯಾನ್‌ಹೋಲ್‌ ಸ್ವತ್ಛತೆಗಿಳಿಸಲಾಗಿದ್ದ ಇವುಗಳ ಕಾರ್ಯವೈಖರಿಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಹಾಗಾಗಿ, ಇವುಗಳಿಗೆ, ಕರ್ನಾಟಕ ಹಾಗೂ ತಮಿಳುನಾಡಿನಿಂದಲೂ ಬೇಡಿಕೆ ಬಂದಿದೆ ಎಂದು ಹೇಳಲಾಗಿದೆ. ದಕ್ಷಿಣದ ರಾಜ್ಯಗಳು ಮಾತ್ರವಲ್ಲದೆ, ದೂರದ ಯುಎಇಯ ಶಾರ್ಜಾ ಡಿಜಿಟಲ್‌ ಟ್ರಾನ್ಸ್‌ ಫಾರ್ಮೇಶನ್‌ ಹೈಯರ್‌ ಕಮಿಟಿ ಮುಖ್ಯಸ್ಥರಾದ ಶೇಖ್‌ ಫಾಹಿಮ್‌ ಬಿನ್‌ ಸುಲ್ತಾನ್‌ ಅಲ್‌ ಖಾಸಿಮಿ ಅವರೂ ವಸ್ತುಪ್ರದರ್ಶನದಲ್ಲಿದ್ದ ಜೆನ್‌ರೋಬೋಟಿಕ್ಸ್‌ ಮಳಿಗೆಗೆ ಭೇಟಿ ನೀಡಿ ಮಾಹಿತಿ ಕಲೆಹಾಕಿದ್ದಾರೆ.

ಸದ್ಯಕ್ಕೆ ಪ್ರಾಥಮಿಕ ಹಂತದ ಮಾತುಕತೆ ನಡೆದಿದ್ದು, ಇದು ಯಶಸ್ಸಾದರೆ, ವಿಶ್ವದ ಮೊಟ್ಟಮೊದಲ ರೋಬೋ ಮ್ಯಾನ್‌ಹೋಲ್‌ ಕ್ಲೀನರ್‌ ಎಂಬ ಹೆಗ್ಗಳಿಕೆ ಪಡೆದಿರುವ ಈ ರೋಬೋಗಳು, ವಿದೇಶಗಳಿಗೂ ಅಡಿಯಿಡಲಿವೆ.

Advertisement

Udayavani is now on Telegram. Click here to join our channel and stay updated with the latest news.

Next