Advertisement

ಕೋವಿಡ್‌ ವಾರ್ಡ್‌ಗಳಲ್ಲಿ ರೋಬೋ

12:22 AM Apr 21, 2020 | Sriram |

ಬೆಂಗಳೂರು: ಕೋವಿಡ್‌ -19 ಪೀಡಿತರ ಪ್ರಾಥಮಿಕ ಉಪಚಾರಕ್ಕೆ ರೋಬೋಟ್‌ಗಳನ್ನು ಬಳಸಲು ಬೆಂಗಳೂರು ವೈದ್ಯಕೀಯ ಮಹಾ ವಿದ್ಯಾಲಯ ಮತ್ತು ಸಂಶೋಧನ ಸಂಸ್ಥೆ ಮುಂದಾಗಿದೆ. ಇದಕ್ಕೆ ವಿಪ್ರೋ ಕಂಪೆನಿ ಅಗತ್ಯ ನೆರವು ನೀಡಿದ್ದು, ರೋಬೋ ಅಭಿವೃದ್ಧಿಪಡಿಸುತ್ತಿದೆ.

Advertisement

ಕೋವಿಡ್‌ -19 ಪೀಡಿತರಿಗೆ ಚಿಕಿತ್ಸೆ ನೀಡುವ ವಿಶೇಷ ವಾರ್ಡ್‌ ಗಳಲ್ಲಿ ವೈದ್ಯರು ಮತ್ತು ಶುಶ್ರೂಷಕರು ಪದೇ ಪದೇ ಸೋಂಕು ಪೀಡಿತರೊಂದಿಗೆ ಸಂಪರ್ಕ ಸಾಧಿಸಿದರೆ ಅವರಿಗೂ ಸೋಂಕು ಪ್ರಸಾರವಾಗುವ ಅಪಾಯ ಹೆಚ್ಚು. ಹೀಗಾಗಿ ಪ್ರಾಥಮಿಕ ಆರೈಕೆಗೆ ರೋಬೋಟ್‌ಗಳನ್ನು ಉಪಯೋಗಿಸಿ ವೈದ್ಯರು ಮತ್ತು ಶುಶ್ರೂಷಕರ ಅಪಾಯವನ್ನು ಕಡಿಮೆ ಮಾಡುವ ಚಿಂತನೆ ಇದು.

ಕೇರಳವು ಈಗಾಗಲೇ ಕೊರೊನಾ ವಾರ್ಡ್‌ಗಳಲ್ಲಿ ರೋಬೋ ಬಳಸಿ ಪ್ರಾಥಮಿಕ ಯಶಸ್ಸು ಕಂಡಿದೆ. ಸದ್ಯ ರಾಜ್ಯ ವೈದ್ಯಕೀಯ ಶಿಕ್ಷಣ ಇಲಾಖೆಯು ಇಂಥ ಪ್ರಯತ್ನ ಆರಂಭಿಸಲು ಮುಂದಾಗಿದೆ. ಸದ್ಯ ವಿಪ್ರೋ ಸಂಸ್ಥೆಯು ಇದಕ್ಕಾಗಿ ಮೊದಲ ಹಂತದಲ್ಲಿ ಎರಡು ರೋಬೋಗಳನ್ನು ಎರಡು ಮಾದರಿ ಪ್ರೋಗ್ರಾಂಗಳೊಂದಿಗೆ ಅಭಿವೃದ್ಧಿಪಡಿಸುತ್ತಿದೆ. ಮುಂದಿನ ವಾರದಲ್ಲಿ ಇವು ಸೇವೆಗೆ ಲಭ್ಯವಾಗುವ ಸಾಧ್ಯತೆ ಇದೆ.

ಸೋಂಕುಪೀಡಿತರಿಗೆ ಔಷಧ
ನೀಡುವ, ಉಪಾಹಾರ ಮತ್ತು ಊಟ ವಿತರಿಸುವಂತಹ ಪ್ರಾಥಮಿಕ ಉಪಚಾರಗಳಿಗೆ ರೋಬೋಗಳನ್ನು ಬಳಸುವ ಉದ್ದೇಶ ಹೊಂದಿದ್ದೇವೆ. ಇದರಿಂದ ವೈದ್ಯರು ಮತ್ತು ಶುಶ್ರೂಷಕರು ರೋಗಪೀಡಿತರ ಜತೆಗೆ ಪದೇ ಪದೆ ಮುಖಾಮುಖೀಯಾಗುವ, ಅವರ ಸಂಪರ್ಕಕ್ಕೆ ಬರುವ ಅಗತ್ಯವಿರುವುದಿಲ್ಲ. ಇದರಿಂದ ಅವರಿಗೆ ಸೋಂಕು ಹಬ್ಬುವ ಪ್ರಮಾಣವನ್ನು ಕಡಿಮೆ ಮಾಡಬಹುದು.
-ಡಾ| ಸಿ.ಆರ್‌. ಜಯಂತಿ
ನಿರ್ದೇಶಕಿ ಮತ್ತು ಡೀನ್‌, ಬೆಂಗಳೂರು ವೈದ್ಯಕೀಯ ಮಹಾ ವಿದ್ಯಾಲಯ ಮತ್ತು ಸಂಶೋಧನ ಸಂಸ್ಥೆ

Advertisement

Udayavani is now on Telegram. Click here to join our channel and stay updated with the latest news.

Next