Advertisement

ಯುಎಇ ಕ್ರಿಕೆಟ್‌ ಸಂಸ್ಥೆಗೆ ಭಾರತದ ರಾಬಿನ್‌ ಸಿಂಗ್‌ ನಿರ್ದೇಶಕ

12:04 PM Feb 13, 2020 | keerthan |

ದುಬಾೖ: ಭಾರತದ ಮಾಜಿ ಕ್ರಿಕೆಟಿಗ ರಾಬಿನ್‌ ಸಿಂಗ್‌, ಯುನೈಟೆಡ್‌ ಅರಬ್‌ ಎಮಿರೇಟ್ಸ್‌ ಕ್ರಿಕೆಟ್‌ನ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಮುಖ್ಯ ತರಬೇತುದಾರನ ಸ್ಥಾನದಿಂದ ಡೌಗಿ ಬ್ರೌನ್‌ ಕಿತ್ತು ಹಾಕಲ್ಪಟ್ಟ ಅನಂತರ, ರಾಬಿನ್‌ ನಿರ್ದೇಶಕ ಸ್ಥಾನಕ್ಕೇರಿದ್ದಾರೆ.

Advertisement

ಕಳೆದ ವರ್ಷ ಯುಎಇ ಕ್ರಿಕೆಟ್‌ ಫಿಕ್ಸಿಂಗ್‌ ಹೊಡೆತಕ್ಕೆ ಸಿಕ್ಕಿ ತತ್ತರಿಸಿದೆ. ತಂಡದ ನಾಯಕರಾಗಿದ್ದ ಮೊಹಮ್ಮದ್‌ ನವೀದ್‌ ಸೇರಿದಂತೆ ಹಲವು ಹಿರಿಯ ಕ್ರಿಕೆಟಿಗರು ನಿಷೇಧಕ್ಕೊಳಗಾಗಿದ್ದಾರೆ.

ಅದರ ಪರಿಣಾಮ ಯುಎಇ ಕ್ರಿಕೆಟ್‌ ಸಂಸ್ಥೆ ಆಯ್ಕೆ ಸಮಿತಿಯನ್ನೇ ವಿಸರ್ಜಿಸಿತ್ತು. ಸದ್ಯ ಅತ್ಯಂತ ಇಕ್ಕಟ್ಟಿನಲ್ಲಿರುವ ತಂಡದ ನೇತೃತ್ವವನ್ನು ರಾಬಿನ್‌ ಸಿಂಗ್‌ ವಹಿಸಿಕೊಂಡಿದ್ದಾರೆ.

56 ವರ್ಷದ ರಾಬಿನ್ ಸಿಂಗ್ 1989ರಿಂದ 2001ರವರೆಗೆ ಭಾರತ ತಂಡವನ್ನು ಪ್ರತಿನಿಧಿಸಿದ್ದರು. 136 ಏಕದಿನ ಪಂದ್ಯಗಳು ಮತ್ತು ಎಕೈಕ ಟೆಸ್ಟ್ ಪಂದ್ಯವನ್ನು ರಾಬಿನ್ ಸಿಂಗ್ ಭಾರತದ ಪರವಾಗಿ ಆಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next