ಜ್ಯೂರಿಚ್ (ಸ್ವಿಜರ್‌ಲ್ಯಾಂಡ್): ಪೋಲೆಂಡ್ ತಂಡದ ನಾಯಕ ರಾಬರ್ಟ್ ಲೆವಾಂಡೋವ್‌ಸ್ಕಿ ತಮ್ಮ ಫುಟ್‌ಬಾಲ್ ಬಾಳ್ವೆಯ ಮಹೋನ್ನತ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ವಿಶ್ವಶ್ರೇಷ್ಠ ಆಟಗಾರರಾದ ಲಿಯೋನೆಲ್ ಮೆಸ್ಸಿ ಮತ್ತು ಕ್ರಿಶ್ಚಿಯಾನೊ ರೊನಾಲ್ಡೊ ಅವರನ್ನು ಹಿಂದಿಕ್ಕಿದ ರಾಬರ್ಟ್ ಲೆವಾಂಡೋವ್‌ಸ್ಕಿ “ಫಿಫಾ 2020ರ ವರ್ಷದ ಫುಟ್ಬಾಲಿಗ’ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ಇಂಗ್ಲೆಂಡಿನ ಲೂಸಿ ಬ್ರಾಂಝ್ ವರ್ಷದ ಆಟಗಾರ್ತಿ ಎನಿಸಿಕೊಂಡರೆ, ಲಿವರ್‌ಪೂಲ್ ತಂಡದ ಜರ್ಗೆನ್ ಕ್ಲಾಪ್ ಸತತ 2ನೇ ವರ್ಷ ಅತ್ಯುತ್ತಮ ಕೋಚ್ ಪ್ರಶಸ್ತಿಗೆ ಪಾತ್ರರಾದರು.
ಇದನ್ನೂ ಓದಿ:ಮುಂದಿನೆರಡು ಒಲಿಂಪಿಕ್ ಗೆ “ರಶ್ಯಾ” ನಿಷೇಧ: ರಶ್ಯಾ ಹೆಸರಲ್ಲಿ ಆಟಗಾರರು ಆಡುವಂತಿಲ್ಲ
2020ರ ಋತುವಿನಲ್ಲಿ ಒಟ್ಟು 55 ಗೋಲು ಬಾರಿಸಿದ್ದು ಲೆವಾಂಡೋವ್‌ಸ್ಕಿ ಹೆಗ್ಗಳಿಕೆ. ಜತೆಗೆ ತಮ್ಮ ಬೇಯರ್ನ್ ಮ್ಯೂನಿಚ್ ತಂಡದ ಪರವಾಗಿಯೂ ಅವರು ಅಮೋಘ ಸಾಧನೆಗೈದಿದ್ದರು.
ಲೆವಾಂಡೋವ್‌ಸ್ಕಿ ಅತ್ಯಧಿಕ 52 ಮತ ಸಂಪಾದಿಸಿದರು. ರೊನಾಲ್ಡೊ 38, ಮೆಸ್ಸಿ 35 ಮತ ಪಡೆದರು. ಫಿಫಾ ವರ್ಷದ ಆಟಗಾರ್ತಿ ಪ್ರಶಸ್ತಿಗೆ ಪಾತ್ರರಾದ ಲೂಸಿ ಬ್ರಾಂಝ್ 52 ಅಂಕ ಗಳಿಸಿದರು.