ಬೆಂಗಳೂರು: ಮನೆಗಳವು ಮಾಡುತ್ತಿದ್ದ ಆರೋಪಿ ಯನ್ನು ರಾಜಾಜಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ತುಮಕೂರು ಮೂಲದ ರಫೀಕ್ ಅಲಿಯಾಸ್ ಸೇಟು (29) ಬಂಧಿತ. ಆರೋಪಿಯಿಂದ 22.08 ಲಕ್ಷ ರೂ. ಮೌಲ್ಯದ 409.39 ಗ್ರಾಂ ತೂಕದ ಚಿನ್ನಾಭರಣ ಮತ್ತು ಚಿನ್ನದ ಗಟ್ಟಿ 425.8 ಗ್ರಾಂ ತೂಕದ ಬೆಳ್ಳಿಯ ಆಭರಣಗಳು, 189.15 ಗ್ರಾಂನ ನಕಲಿ ಚಿನ್ನಾ ಭರಣ ಗಳನ್ನು ವಶಕ್ಕೆ ಪಡೆಯಲಾಗಿದೆ.
ಆರೋಪಿ ಯ ವಿರುದ್ಧ ನಗರ ಹಾಗೂ ಹೊರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ 20ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ. ಇತ್ತೀಚೆಗೆ ಠಾಣೆ ವ್ಯಾಪ್ತಿ ಪ್ರಕಾಶನಗರದಲ್ಲಿ ದಿನಸಿ ಅಂಗಡಿ ಮಾಲೀಕರು ರಾತ್ರಿ ವ್ಯಾಪಾರ ಮುಗಿಸಿಕೊಂಡು ಬೀಗ ಹಾಕಿಕೊಂಡು ಮನೆಗೆ ಹೋಗಿದ್ದರು. ಮರು ದಿನ ಬೆಳಗ್ಗೆ ಬಂದು ನೋಡಿದಾಗ ಅಂಗಡಿಯ ರೋಲಿಂಗ್ ಶೆಟರ್‌ನ ಬೀಗ ಒಡೆದು 50 ಸಾವಿರ ರೂ. ಕಳವು ಮಾಡಲಾಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ.
ತುಮಕೂರು ಮೂಲದ ಆರೋಪಿ ಉದ್ಯೋಗ ಅರಸಿ ಬೆಂಗಳೂರಿಗೆ ಬಂದಿದ್ದು, ಕೆ.ಆರ್.ಪುರಂ ನಲ್ಲಿ ವಾಸವಾಗಿದ್ದ. ಅಂದಿನಿಂದ ಮನೆ ಕಳವು ಮಾಡುವುದನ್ನೇ ವೃತ್ತಿಯನ್ನಾಗಿಸಿ ಕೊಂಡಿ ದ್ದಾನೆ. ಈತನನ್ನು ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ನಗರದ ಪೀಣ್ಯ, ಗಿರಿನಗರ, ಕಬ್ಬನ್‌ಪಾರ್ಕ್, ಕೆ.ಆರ್.ಪುರಂ, ಬನಶಂಕರಿ, ಅಮೃತಹಳ್ಳಿ, ಕೆ.ಜಿ. ಹಳ್ಳಿ, ಚಂದ್ರಾಲೇಔಟ್ ಮತ್ತು ಹೊರಜಿಲ್ಲೆ ಯಾದ ಚಿಕ್ಕಮಗಳೂರು ನಗರ, ಚಿತ್ರದುರ್ಗ, ಮಂಡ್ಯ, ನೆಲಮಂಗಲ, ತಿಪಟೂರು ಠಾಣೆಗಳಲ್ಲಿ 20ಕ್ಕೂ ಹೆಚ್ಚು ಕಳವು ಪ್ರಕರಣಗಳು ದಾಖ ಲಾಗಿವೆ ಎಂದು ಪೊಲೀಸರು ಹೇಳಿದರು. ರಾಜಾಜಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.