Advertisement

ಖಾರದ ಪುಡಿ ಎರಚಿ, 16 ಲಕ್ಷ ದರೋಡೆ: ಸೆರೆ

01:12 PM Apr 18, 2021 | Team Udayavani |

ಬೆಂಗಳೂರು: ಉತ್ತರ ಕರ್ನಾ ಟ ಕ ದಿಂದಎಮ್ಮೆ ಗ ಳನ್ನು ತಂದು ಮಾರಾಟ ಮಾಡಿದಹಣ ವನ್ನು ಪಡೆ ದು ಕೊಂಡು ಆಟೋ ದಲ್ಲಿಹೋಗುವಾ ಅಡ್ಡ ಗಟ್ಟಿ ಚಾಲ ಕ ನಿಗೆ ಖಾರದಪುಡಿ ಎರಚಿ ಬರೋಬರಿ 16 ಲಕ್ಷ ರೂ.ದರೋಡೆ ಮಾಡಿದ್ದ ನಾಲ್ವರು ಭಾರ ತೀ ನಗರ ಪೊಲೀ ಸರ ಬಲೆಗೆ ಬಿದ್ದಿ ದ್ದಾ ರೆ.ಡಿ.ಜೆ. ಹಳ್ಳಿ ನಿವಾಸಿ ಅಪ್ಸರ್‌ ಪಾಷಾ(34), ಸೈಯ್ಯದ್‌ ತೌಸೀಫ್‌ (32),ಮೊಹಮ್ಮದ್‌ ಅಲಿ (30), ಮೊಹಮ್ಮದ್‌ಅಜರುಲ್ಲಾ (30) ಬಂಧಿತರು. ಆರೋಪಿಗಳಿಂದ 4 ಲಕ್ಷ ರೂ. ನಗದು ಹಾಗೂ ಕೃತ್ಯಕ್ಕೆಬಳಸಿದ್ದ 2 ದ್ವಿಚಕ್ರವಾಹನ ಜಪ್ತಿಮಾಡಲಾಗಿದೆ.

Advertisement

ತಲೆಮರೆಸಿಕೊಂಡಿರುವಆರೋಪಿ ಮುಕ್ರೀಮ್‌ಗಾಗಿ ಹುಡು ಕಾಟನಡೆ ಯು ತ್ತಿದೆ. ಆರೋ ಪಿ ಗಳು ಜ.7ರಂದುಬಳ್ಳಾರಿ ಮೂಲದ ಮುನೀರ್‌ (65)ಎಂಬವ ರನ್ನು ಅಡ್ಡ ಗಟ್ಟಿ 16.60 ಲಕ್ಷ ರೂ.ದರೋಡೆ ಮಾಡಿ ಪರಾ ರಿ ಯಾ ಗಿ ದ್ದರುಎಂದು ಪೊಲೀ ಸರು ಹೇಳಿ ದ ರು.

ಬಳ್ಳಾರಿ ಹಾಗೂ ಗಂಗಾವತಿ ಮೂಲದಎಮ್ಮೆಗಳನ್ನು ಬೆಂಗಳೂರಿಗೆ ಸಾಗಣೆಮಾಡಿದ ಹಣ ವಸೂಲಿ ಮಾಡುವಮಧ್ಯವರ್ತಿಯಾಗಿ ಮುನೀರ್‌ ಕೆಲಸಮಾಡುತಿದ್ದಾ ರೆ. ಜ.7ರಂದು ಹಣವಸೂಲಿ ಮಾಡಲು ಟ್ಯಾನರಿ ರಸ್ತೆಗೆಬಂದಿದ್ದರು. ಎಮ್ಮೆಗಳ ಖರೀದಿದಾರರಾದಮಜರ್‌, ಫರ್ವೀಜ್‌, ನೂರ್‌, ಷರೀಫ್‌ಎಂಬವವರಿಂದ ಒಟ್ಟು 9.90 ಲಕ್ಷ ರೂ.ಪಡೆದು, ಪರಿಚಿತ ಯೂಸುಫ್‌ಎಂಬುವರು ಗಂಗಾವತಿಯಲ್ಲಿರುವ ತನ್ನತಂದೆಗೆ ನೀಡಲು 6.70 ಲಕ್ಷ ರೂ. ಅನ್ನುಮುನೀರ್‌ ಕೈಗೆ ಕೊಟ್ಟಿದ್ದರು.

ಒಟ್ಟು 16.60ಲಕ್ಷ ರೂ.ಅನ್ನು ಬ್ಯಾಗ್‌ನಲ್ಲಿಟ್ಟುಕೊಂಡುಸಹೋದರ ಲತೀಫ್‌ನ ಆಟೋದಲ್ಲಿಮೆಜೆಸ್ಟಿಕ್‌ ಕಡೆಗೆ ಬರುತ್ತಿದ್ದರು.ಮಾರ್ಗಮಧ್ಯೆ ಮುನೀರ್‌ನ ಮಾವಹಬೀಬ್‌ ಸಿಕ್ಕಿದ್ದು, ಶಿವಾಜಿ ಚೌಕ್‌ಗೆ ಡ್ರಾಪ್‌ಕೊಡುವಂತೆ ಮನವಿ ಮಾಡಿದ್ದರಿಂದರಾತ್ರಿ 12 ಗಂಟೆಗೆ ಅವರನ್ನು ಮನೆಗೆ ಬಿಟ್ಟುಆಟೋದಲ್ಲಿ ತಡರಾತ್ರಿ 3 ಗಂಟೆಗೆಮೆಜೆಸ್ಟಿಕ್‌ಗೆ ಹೋಗು ತ್ತಿ ದ್ದ ರು.ಮುನೀರ್‌ ಬಗ್ಗೆ ಈ ಹಿಂದೆಯೇಅರಿತಿದ್ದ ಆರೋ ಪಿ ಗ ಳಾ ದ ಮುಕ್ರೀಮ್‌ಹಾಗೂ ಅಪ್ಸರ್‌ ಪಾಷಾ, ಇತರೆಆರೋಪಿಗಳ ಸಹಾಯ ಪಡೆದು ಶಿವಾಜಿಚೌಕ್‌ನಿಂದ 2 ದ್ವಿಚಕ್ರ ವಾಹನದಲ್ಲಿ ಅವರಆಟೋ ಹಿಂಬಾಲಿಸಿಕೊಂಡು ಬಂದಆರೋಪಿಗಳು ಭಾರತಿನಗರದ ಕಾಕ್‌ಬರ್ನ್ ರಸ್ತೆಯಲ್ಲಿ ಅಡ್ಡಗಟ್ಟಿ ಕೃತ್ಯವೆಸಗಿಕೈಯಲ್ಲಿದ್ದ ಹಣದ ಬ್ಯಾಗ್‌ನ್ನು ಕಸಿದುಪರಾರಿಯಾಗಿದ್ದರು.

ಭಾರತೀನಗರ ಪೊಲೀಸರು ಪ್ರಕರಣದಾಖಲಿಸಿಕೊಂಡು ತನಿಖೆ ನಡೆಸಿದಾಗಆರಂಭದಲ್ಲಿ ಆರೋಪಿಗಳ ಸುಳಿವು ಸಿಕ್ಕಿರಲಿಲ್ಲ. ನಂತರ ವಿವಿಧ ಠಾಣೆ ಅಧಿಕಾರಿಗಳನ್ನು ಸೇರಿಸಿ ತಂಡ ರಚಿಸಲಾಗಿತ್ತು. ಈತಂಡ ಕೃತ್ಯ ಸ್ಥಳದ ಸುತ್ತಮುತ್ತಲ ಸಿಸಿಕ್ಯಾಮೆರಾ ದೃಶ್ಯಗಳನ್ನು ಸಂಗ್ರಹಿಸಿತ್ತು.ಜತೆಗೆ ವಲಯವಾರು ದರೋಡೆಕೋರರನ್ನು ವಿಚಾರಣೆ ನಡೆಸಿ ಕೃತ್ಯಕ್ಕೆಸಂಬಂಧಿಸಿದಂತೆ ಮಾಹಿತಿ ಕಲೆ ಹಾಕಿತ್ತು.3 ತಿಂಗಳ ಸತತ ಕಾರ್ಯಾಚರಣೆ ನಡೆಸಿಅಪ್ಸರ್‌ ಪಾಷಾನನ್ನು ಬಂಧಿಸಿ ವಿಚಾರಣೆನಡೆಸಿದಾಗ, ಈತನ ಮಾಹಿತಿ ಮೇರೆಗೆಇತರ ಆರೋಪಿಗಳನ್ನು ಬಂಧಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next