Advertisement

ಆಕ್ಸಿಜನ್‌ ಪ್ಲಾಂಟ್‌ ಹೆಸರಲ್ಲಿ ಲೂಟಿ: ಸಂಸದ ಪ್ರಜ್ವಲ್‌ ರೇವಣ್ಣ

03:29 PM May 14, 2021 | Team Udayavani |

ಸಕಲೇಶಪುರ: ಆಕ್ಸಿಜನ್‌ ಪೂರೈಕೆ ಹೆಸರಿನಲ್ಲಿ ಕೇಂದ್ರ -ರಾಜ್ಯ ಸರ್ಕಾರ ಹಣ ಹೊಡೆಯಲು ಮುಂದಾಗಿದ್ದು ಈ ಕುರಿತು ಎಲ್ಲಾ ದಾಖಲಾತಿ ತನ್ನ ಬಳಿ ಇದೆ ಎಂದು ಸಂಸದ ಪ್ರಜ್ವಲ್‌ ರೇವಣ್ಣ ಹೇಳಿದರು.

Advertisement

ಪಟ್ಟಣದ ತಾಪಂ ಸಭಾಂಗಣದಲ್ಲಿ ತಾಲೂಕು ಮಟ್ಟದ ಕೋವಿಡ್‌ ಟಾಸ್ಕ್ ಫೋರ್ಸ್‌ ಸಭೆ ನಡೆಸಿದ ನಂತರ ಮಾತನಾಡಿದರು. ಆಕ್ಸಿಜನ್‌ ಪ್ಲಾಂಟ್‌ ಮಾಡುವ ಕಂಪನಿಗಳು ಜರ್ಮನಿಯಲ್ಲಿ ಹೆಚ್ಚಾಗಿದ್ದು ಜರ್ಮನಿಯಿಂದ ಇದಕ್ಕೆ ಬೇಕಾದ ಮಿಷನರಿ ತರಿಸಲು ಯೋಜನೆ ಮಾಡಲಾಗಿತ್ತು. ಆದರೆ, ನಂತರ ಇದನ್ನು ಕೈಬಿಟ್ಟು ನಮ್ಮ ದೇಶದಲ್ಲಿರುವ 2 ಆಮ್ಲಜನಕ ಪ್ಲಾಂಟ್‌ ಮಾಡುವ ಕಂಪನಿಗಳಿಗೆ ಆಮ್ಲ ಜನಕ ಪೂರೈಕೆ ಮಾಡುವ ಯಂತ್ರಗಳಿಗೆ ಇವರೇ ಒಂದು ದರ ನಿಗದಿ ಮಾಡಿದ್ದಾರೆ. ಆದರೆ, ಇದಿಷ್ಟೂ ಸಾಲದಂತೆ ಈ ಆಮ್ಲ ಜನಕ ಮಿಷನರಿ ಕೂರಿಸಲು ಸುಮಾರು 10×10 ಅಡಿ ಕಟ್ಟಡ ನಿರ್ಮಾಣ ಮಾಡಲು ಪ್ರತಿ ಪ್ಲಾಂಟ್‌ಗೆ 35 ಲಕ್ಷ ನಿಗದಿ ಮಾಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಈ ಆಮ್ಲ ಜನಕ ಯಂತ್ರಗಳನ್ನು ಕಂಟೈನರ್‌ ಒಳಗೆ ಇಡ ಬಹುದಿತ್ತು. ಇದು ಕೇವಲ 2 ಲಕ್ಷ ದಲ್ಲಿ ಮುಗಿಯುತ್ತಿತ್ತು. ಆದರೆ 2 ಲಕ್ಷದಲ್ಲಿ ಮುಗಿಯುವ ಕೆಲಸಕ್ಕೆ 35 ಲಕ್ಷ ಪ್ರತಿ ಪ್ಲಾಂಟ್‌ಗೆ ವಿನಿಯೋಜಿಸಲಾಗುತ್ತಿದೆ. ಇದಿಷ್ಟು ಸಾಲದಂತೆ ಮೊದಲಿಗೆ ಈ ಕಾಮಗಾರಿ ಲ್ಯಾಂಡ್‌ ಆರ್ಮಿಗೆ ಕೊಡಲು ಯೋಜಿಸಲಾಗಿತ್ತು. ಆದರೆ, ಯಾವಾಗ 30 ಜಿಲ್ಲೆಗೆ ತಲಾ 2 ಪ್ಲಾಂಟ್‌ ನೀಡಲು ಯೋಜಿಸಲಾಯಿತೋ ತಕ್ಷಣ ಆರೋಗ್ಯ ಇಲಾಖೆಯಿಂದ ಸಿಂಗಲ್‌ ಟೆಂಡರ್‌ ಕರೆದು 2 ದಿನಗಳಲ್ಲಿ ಮುಗಿಯುವ ಕೆಲ ಸಕ್ಕೆ ಹೆಚ್ಚು ದಿನ ಬೇಕಾಗುವಂತೆ ಮಾಡಿದ್ದಾರೆ. ಇದರಲ್ಲಿ ಭ್ರಷ್ಟಚಾರ ಉಂಟಾಗು ತ್ತಿರುವುದು ನೇರವಾಗಿ ಕಾಣುತ್ತಿದೆ. ಮುಖ್ಯ ಮಂತ್ರಿಗಳು ಅಥವಾ ಆರೋಗ್ಯ ಸಚಿವರು ಕೇಳಿದ್ದಲ್ಲಿ ನಾನು ದಾಖಲಾತಿ ಬಿಡುಗಡೆ ಮಾಡುತ್ತೇನೆಂದು ತಿಳಿಸಿದರು.

ಕಷ್ಟದ ಕಾಲದಲ್ಲಿ ಜನರ ದುಡ್ಡನ್ನು ಅನವಶ್ಯಕವಾಗಿ ಪೋಲು ಮಾಡುತ್ತಿರು ವುದು ಸರಿಯಲ್ಲ, ಕೊರೊನಾದಂತಹ ಸಂಕಷ್ಟದ ಕಾಲದಲ್ಲೂ ಹಣ ಲೂಟಿ ಮಾಡುತ್ತಿರು ವುದು ಬೇಸರದ ಸಂಗತಿ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next