ಸಿಂಧನೂರು: ವರ್ಷಕ್ಕೊಮ್ಮೆ ರಾಯಚೂರು, ಕೊಪ್ಪಳ, ಬಳ್ಳಾರಿ ಜಿಲ್ಲೆಯ ಹಾಲು ಉತ್ಪಾದಕರ ಒಕ್ಕೂಟದಿಂದ ಹಮ್ಮಿಕೊಳ್ಳುವ ವಾರ್ಷಿಕ ಸಭೆಯನ್ನು ಹಾಲು ಉತ್ಪಾದಕರ ಸಹಕಾರ ಸಂಘದ ಪದಾಧಿಕಾರಿಗಳುಬಹಿಷ್ಕರಿಸಿದ ಪ್ರಸಂಗ ಸೋಮವಾರ ನಗರದಲ್ಲಿ ನಡೆಯಿತು.
ಹಾಲು ಉತ್ಪಾದಕರ ಒಕ್ಕೂಟದಿಂದ ನಗರದ ಕಮ್ಮವಾರಿ ಭವನದಲ್ಲಿನಡೆದ ವರ್ಚುವಲ್ ಮೀಟಿಂಗ್‌ನಲ್ಲಿ ಆರಂಭದಲ್ಲಿ ವಿಘ್ನ ಕಾಡಿದವು. 8 ಕಡೆಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಆನ್‌ಲೈನ್‌ನಲ್ಲಿ ಸಹಕಾರ ಸಂಘದಪದಾಧಿಕಾರಿಗಳು ಪಾಲ್ಗೊಂಡು ಪ್ರಶ್ನೆ ಕೇಳಿದಾಗ ತಾಂತ್ರಿಕ ತೊಂದರೆಯಿಂದ ಪರಸ್ಪರ ಸಂವಾದ ಸ್ಥಗಿತವಾಯಿತು.
ಆಕ್ರೋಶ: ರಾಯಚೂರು ಜಿಲ್ಲೆಯ ವಿವಿಧ ಕಡೆಯಿಂದ ಆಗಮಿಸಿದ್ದ 62 ಜನ ಸಹಕಾರಿ ಸಂಘದ ಪ್ರತಿನಿಧಿಗಳುಸಭೆಯನ್ನು ಬಹಿಷ್ಕರಿಸಿ, ರಾಬಕೊ ಒಕ್ಕೂಟದ ಆಡಳಿತ ಮಂಡಳಿ ನಡೆಯನ್ನು ಖಂಡಿಸಿದರು. ಆಡಳಿತ ಮಂಡಳಿ ರಾಜಕೀಯ ಪ್ರತಿಷ್ಠೆಯನ್ನು ಕೈಬಿಟ್ಟು, ರೈತರ ಹಿತ ಕಾಪಾಡಲು ಮುಂದಾಗಬೇಕು ಎಂದು ಆಗ್ರಹಿಸಿದರು.
ಮಲದಗುಡ್ಡದ ಸಹಕಾರಿ ಸಂಘದ ಅಧ್ಯಕ್ಷ ಪ್ರವೀಣ್ ಕುಮಾರ್ ಮಾತನಾಡಿ,ವರ್ಷಕ್ಕೊಮ್ಮೆ ಮಾತ್ರ ಒಕ್ಕೂಟದಸಭೆ ನಡೆಯಲಿದ್ದು, ಆಗಲೇ ಸಮಸ್ಯೆಹೇಳಿಕೊಳ್ಳಬೇಕು. ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನ ಬಾಕಿಯಿದೆ. ಕೋವಿಡ್ ಬಂದರೆ, ಆರ್ಥಿಕನೆರವು ನೀಡುವ ರೈತ ಕಲ್ಯಾಣ ಟ್ರಸ್ಟ್ ಯೋಜನೆಯಿದ್ದರೂ ಅನ್ನದಾತರಿಗೆ ಲಾಭವಾಗಿಲ್ಲ. ಅರಳಹಳ್ಳಿಯಲ್ಲಿ ಕೊರೊನಾದಿಂದ ಸತ್ತರೂ ಆರ್ಥಿಕನೆರವು ನೀಡಿಲ್ಲ. ಒಂದು ಸಭೆಗೆ 20 ಲಕ್ಷ ರೂ. ಖರ್ಚಾಗುತ್ತದೆ. ರೈತರ ಮೇಲೆ ಈ ಹೊರೆಯನ್ನು ಹಾಕಲಾಗುತ್ತಿದ್ದು, ಅದರ ಪ್ರಯೋಜನ ಇಲ್ಲವಾಗಿದೆ. ಸೂಕ್ತ ರೀತಿಯಲ್ಲಿ ಮತ್ತೂಮ್ಮೆ ಸಭೆ ಆಯೋಜಿಸಿ ನಮ್ಮ ಬೇಡಿಕೆಗಳನ್ನು ಆಲಿಸಬೇಕು ಎಂದರು.
ಪಾಮನಕಲ್ಲೂರು ಹಾಲುಉತ್ಪಾದಕರ ಸಂಘದ ಅಧ್ಯಕ್ಷಅಮರಗುಂಡಪ್ಪ, ವಿರುಪಾಪುರದಮೇಟಿ ವೀರನಗೌಡ, ಶ್ರೀನಿವಾಸಕ್ಯಾಂಪಿನ ಚನ್ನಬಸವ ದೇಸಾಯಿ,7ನೇ ಮೈಲ್ ಕ್ಯಾಂಪ್ ಲಕ್ಷ್ಮಣರಾವ್, ಗಾಳಿದುರುಗಮ್ಮ ಕ್ಯಾಂಪಿನ ಪದ್ಮಾ,ಸೀತಾರಾಮನಗರ ಕ್ಯಾಂಪಿನ ಸಹಕಾರ ಸಂಘದ ಅಧ್ಯಕ್ಷೆ ಜಾನ್ಸಿರಾಣಿ ಇದ್ದರು.