Advertisement

ರಸ್ತೆಬದಿ ವ್ಯಾಪಾರ: ಸವಾರರಿಗೆ ಕಿರಿಕಿರಿ

04:13 PM Nov 25, 2020 | Mithun PG |

ತಿಪಟೂರು: ನಗರದಲ್ಲಿ ಎಪಿಎಂಸಿ ವತಿಯಿಂದ ಕೋಟ್ಯಂತರ ರೂ. ವೆಚ್ಚ ಮಾಡಿವ್ಯವಸ್ಥಿತ ತರಕಾರಿಮಾರುಕಟ್ಟೆ ನಿರ್ಮಿಸಿದ್ದರೂ ನಗರಾದ್ಯಂತ ಬಿ.ಎಚ್‌.ರಸ್ತೆ ಸೇರಿದಂತೆ ಪ್ರಮುಖರಸ್ತೆಗಳು, ಸರ್ಕಲ್‌ಗ‌ಳಲ್ಲಿ ನಗರಸಭೆ ಮತ್ತು ಪೊಲೀಸ್‌ ಇಲಾಖೆ ನಿರ್ಲಕ್ಷದಿಂದ ಬೀದಿಬದಿ ತರಕಾರಿ, ಹಣ್ಣು, ಹೂ, ಕಡಲೆಕಾಯಿ, ಈರುಳ್ಳಿ ಮಾರಾಟ ಮಾಡುತ್ತಿದ್ದು ಇದರಿಂದ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗಿದೆ.

Advertisement

ಸರ್ಕಾರದಿಂದ ನಗರದ ಕೆ.ಎಸ್‌.ಆರ್‌ .ಟಿ.ಸಿ ಡಿಪೋ ಪಕ್ಕದಲ್ಲಿ ಕೋಟ್ಯಂತರ ರೂ. ವೆಚ್ಚದಲ್ಲಿ ಹೂ, ಹಣ್ಣು ಮತ್ತು ತರಕಾರಿ, ಮಾರುಕಟ್ಟೆ ನಿರ್ಮಿಸಲಾಗಿದೆ. ಆದರೆ ವ್ಯಾಪಾರಸ್ಥರು ಬಿ.ಎಚ್‌. ರಸ್ತೆ, ದೊಡ್ಡಪೇಟೆ, ಅರಳಿಕಟ್ಟೆ, ಕೋಡಿಸ‌ರ್ಕಲ್‌, ಪೈ ಹೋಟೆಲ್‌,ರೈಲ್ವೆ ನಿಲ್ದಾಣ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳು, ಸರ್ಕಲ್‌ಗ‌ಳ ಫ‌ುಟ್‌ಪಾತ್‌ನಲ್ಲಿ ವ್ಯಾಪಾರ ಮಾಡುತ್ತಿದ್ದಾರೆ. ಇದರಿಂದ ಜನದಟ್ಟಣೆ ಹೆಚ್ಚಾಗಿದ್ದು ಪಾದಚಾರಿಗಳಗಳನ್ನು ಪಾರ್ಕ್‌ ಮಾಡಲು ತೀವ್ರ ಕಿರಿಕಿರಿ ಉಂಟಾಗುತ್ತಿದೆ.

ಸಾರ್ವಜನಿಕರಿಂದ ಆರೋಪ: ತರಕಾರಿ, ಹಣ್ಣು, ಹೂಗಳನ್ನು ತರಕಾರಿ ಮಾರುಕಟ್ಟೆ ಬಿಟ್ಟುಬೇರೆಲ್ಲೂ ಮಾರಾಟ ಮಾಡಿ ಸಾರ್ವಜನಿಕರಿಗೆ ತೊಂದರೆ ಕೊಡಬಾರದೆಂದು ತಾಲೂಕು ಆಡ ಳಿತ ತೀರ್ಮಾನಿಸಿದ್ದರೂ ನಗರಸಭೆ ಹಾಗೂ ಪೊಲೀಸ್‌ ಇಲಾಖೆ ಸಾರ್ವಜನಿಕರ ಹಿತರಕಣೆಗೆ  ಗಮನ ನೀಡದೆ ಬೇಜವಾಬ್ದಾರಿಯಿಂದ ಫ‌ುಟ್‌ ಪಾತ್‌ನಲ್ಲಿ ವ್ಯಾಪಾರ ಮಾಡುವವರಿಂದ ಅಕ್ರಮವಾಗಿ ಹಣ ವಸೂಲಿ ಮಾಡಿಕೊಂಡು ವ್ಯಾಪಾರ ಮಾಡಲು ಅನುಮತಿ ನೀಡುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.

ಕ್ರಮ ಕೈಗೊಳ್ಳದ ಪೊಲೀಸ್‌ ಇಲಾಖೆ: ನಗರ ಸಭೆ ಸರ್ಕಲ್‌ ಸುತ್ತ,ಮುತ್ತ ,ದೊಡ್ಡಪೇಟೆ ಹಾಗೂ ರೈಲ್ವೆ ನಿಲ್ದಾಣದ ರಸ್ತೆಗಳಲ್ಲಂತೂ ದಿನಪೂರ್ತಿ ಪಾದಚಾರಿಗಳು ನಡೆದಾಡಲು ಸಾಧ್ಯವೇ ಇಲ್ಲ. ಜನರೂ ಸಹ ವ್ಯಾಪಾರ ಮಾಡಲು ರಸ್ತೆಯ ಎರಡೂ ಕಡೆಗಳಲ್ಲಿ ನಿಲ್ಲುವುದರಿಂದ ವಾಹನ ಸವಾರರಿಗಂತೂ ಸುಗಮ ಸಂಚಾರ ಸಾಧ್ಯವೇ ಇಲ್ಲ. ಪ್ರತಿದಿನ ವಾಹನ ಸವಾರರು ಹಾಗೂ ವ್ಯಾಪಾರಸ್ಥರ ನಡುವೆ ದಾರಿಗಾಗಿ ಜಗಳ ನಡೆಯುತ್ತಿದ್ದರೂ ಪೊಲೀಸರು ಕ್ರಮ ಕೈಗೊಂಡಿಲ್ಲ ಎಂದು ನಾಗರಿಕರು ದೂರಿದರು.

ಇದನ್ನೂ ಓದಿ:ಅಯೋಧ್ಯೆಯ ವಿಮಾನ ನಿಲ್ದಾಣಕ್ಕೆ ಇನ್ನು ಮರ್ಯಾದಾ ಪುರುಷೋತ್ತಮ ಶ್ರೀರಾಮ್‌ ಹೆಸರು

Advertisement

ಮಾರಾಟ ಮಾಡಲು ಬಿಡಬೇಡಿ: ಪೊಲೀಸ್‌ ಇಲಾಖೆ ಹಾಗೂ ನಗರಸಭೆ ಅಧಿಕಾರಿಗಳನ್ನೇ ಕೊಂಡುಕೊಂಡವರಂತೆ ಸಾರ್ವಜನಿಕರ ಮೇಲೆ ಅನೇಕ ಬಾರಿ ವ್ಯಾಪಾರಸ್ಥರು ಕೈ ಮಾಡಿರುವ ಉದಾಹರಣೆಗಳಿದ್ದು ಇನ್ನು ಮೇಲಾದರೂ ನಗರಾಡಳಿತ ಹಾಗೂ ಪೊಲೀಸ್‌ ಇಲಾಖೆ ಈ ಬಗ್ಗೆ ಗಮನಹರಿಸಿ ತರಕಾರಿಮಾರಾಟಗಾರರನ್ನು ನಗರ ತರಕಾರಿ ಮಾರುಕಟ್ಟೆಯತ್ತ ಸ್ಥಳಾಂತಿಸ ಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಸರ್ಕಾರ ಕೋಟ್ಯಂತರ ರೂ.ವೆಚ್ಚದಲ್ಲಿ ಆಧುನೀಕರಣ ರೀತಿಯಲ್ಲಿ ತರಕಾರಿ, ಹೂ, ಹಣ್ಣುಗಳನ್ನು ವ್ಯಾಪಾರಸ್ಥರು, ರೈತರು ಉಚಿತವಾಗಿ ಮಾರಾಟ ಮಾಡಲು ವ್ಯವಸ್ಥಿತ ತರಕಾರಿ ಮಾರುಕಟ್ಟೆ ಕಲ್ಪಿಸಿದ್ದೂ ಅಧಿಕಾರಿಗಳು ಫ‌ುಟ್‌ಪಾತ್‌ಗಳಲ್ಲೇ ವ್ಯಾಪಾರ ಮಾಡಲು ಅವಕಾಶ ಕಲ್ಪಿಸಿಕೊಟ್ಟಿರುವುದರಿಂದ ನಗರದ ಸೌಂದರ್ಯ, ಸುಗಮ ಸಂಚಾರ ಹಾಗೂ ಅಭಿವೃದ್ಧಿಗೆ ಕಪ್ಪುಚುಕ್ಕೆ ಇಟ್ಟಂತಾಗಿದೆ.

ಪಾದಚಾರಿಗಳು ಓಡಾಡುವಹಾಗೂವಾಹನ ಪಾರ್ಕಿಂಗ್‌ ಮಾಡಬೇಕಾದ ಸ್ಥಳಗಳಲ್ಲಿ ವ್ಯಾಪಾರಮಾಡುತ್ತಿರುವವರ ವಿರುದ್ಧ ನಗರ ಪೊಲೀಸ್‌ಇಲಾಖೆಜಂಟಿಕಾರ್ಯಾಚರಣೆ ನಡೆಸಲು ನಗರಸಭೆಗೆ ಮನವಿ ಮಾಡಿದ್ದು, ಅವರುಕೈಜೋಡಿಸಿದರೆಜನರಿಗೆ ತೊಂದರೆ ನೀಡುತ್ತಿರುವ ವ್ಯಾಪಾರಸ್ಥರ ವಿರುದ್ಧಕ್ರಮಜರುಗಿಸಲು ಸದಾ ಸಿದ್ಧ.

-ಶಿವಕುಮಾರ್‌, ಸಿಪಿಐ, ನಗರ ಠಾಣೆ, ತಿಪಟೂರು.

Advertisement

Udayavani is now on Telegram. Click here to join our channel and stay updated with the latest news.

Next