Advertisement

ರಸ್ತೆ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಿ

08:33 PM Jun 13, 2021 | Team Udayavani |

ತುಮಕೂರು: ಬೆಂಗಳೂರು – ಅರಸೀಕೆರೆ- ಶಿವಮೊಗ್ಗ ಸೇರಿದಂತೆ ಇತರೆ ನಗರಗಳಿಗೆಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 206 ರಸ್ತೆ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣ ಗೊಳಿಸಬೇಕು ಎಂದು ಜಿÇÉಾಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿಎಂಜಿನಿಯರ್‌ ಹಾಗೂ ಗುತ್ತಿಗೆದಾರರಿಗೆಸೂಚಿಸಿದರು.

Advertisement

ನಗರದ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ  ಮಾತನಾಡಿದಅವರು, ಎರಡು ಮೂರು ವರ್ಷಗಳಿಂದ ಹೆದ್ದಾರಿ ಕಾಮಗಾರಿ ಸರಿಯಾಗಿ ನಡೆಯುತ್ತಿಲ್ಲ. ವಿನಾಕಾರಣ  ವಾಹನಗಳ  ಓಡಾಟಕ್ಕೆ ತೊಂದರೆಯಾಗುತ್ತಿದೆ. ಪ್ರಸ್ತುತ ಮುಂಗಾರು ಮಳೆ ಶುರುವಾಗಿದ್ದು, ಇಡೀರಸ್ತೆ ಮಣ್ಣು, ಗುಂಡಿಗಳಿಂದ ಕೂಡಿದೆ. ಸಾರ್ವಜನಿಕರು ರಸ್ತೆ ದುಸ್ಥಿತಿ ಕಂಡು ಶಾಪಹಾಕುತ್ತಿದ್ದಾರೆ. ಆದ್ಯತೆ ಮೇಲೆ ಈಕಾಮಗಾರಿಯನ್ನು ಮುಗಿಸಿ ಎಂದುಎಂಜಿನಿಯರ್‌ಗಳಿಗೆ ಸೂಚಿಸಿದರು.

ಈ ಹೆದ್ದಾರಿಯಲ್ಲಿ ತೆರವುಗೊಳಿಸಿರುವಮುಜರಾಯಿ ಇಲಾಖೆಗೆ ಸಂಬಂಧಿಸಿದದೇವಾಲಯಗಳಿಗೆ ಪರ್ಯಾಯವಾಗಿಬೇರೆಡೆ ದೇವಾಲಯಗಳನ್ನು ನಿರ್ಮಾಣಮಾಡಬೇಕು ಎಂದರು. ಸಂಸದ ಜಿ.ಎಸ್‌.ಬಸವರಾಜ…, ಶಾಸಕ ಬಿ.ಸಿ.ನಾಗೇಶ್‌,ಎಸ್‌.ಆರ್‌.ಶ್ರೀನಿವಾಸ್‌, ಡಾ.ರಾಜೇಶ್‌ಗೌಡ, ಎಸ್ಪಿ ರಾಹುಲ್‌ಕುಮಾರ್‌, ಎಡಿಸಿಚನ್ನಬಸಪ್ಪ, ಎಸಿ ಅಜಯ… ಹಾಗೂಎಂಜಿನಿಯರ್‌, ಗುತ್ತಿಗೆದಾರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next