Advertisement

ರಾಷ್ಟ್ರೀಯ ಹೆದ್ದಾರಿ ಅಗಲೀಕರಣಕ್ಕೆ ಚಾಲನೆ :ಮನೆ ಅಂಗಡಿ-ಮುಂಗಟ್ಟು ಮತ್ತಿತರ ಕಟ್ಟಡಗಳು ನೆಲಸಮ

12:30 PM Jan 17, 2022 | Team Udayavani |

ಹೊಳಲ್ಕೆರೆ: ಪಟ್ಟಣದ ವ್ಯಾಪ್ತಿಯಲ್ಲಿ 100 ಮೀ ಅಳತೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಅಗಲಿಕರಣಕ್ಕೆ ಚಾಲನೆ ನೀಡಿದ್ದು, ಭಾನುವಾರ ಮುಂಜಾನೆ 4 ಗಂಟೆ ಹೊತ್ತಿನಲ್ಲಿ ತಾಲೂಕು ಆಡಳಿತ,
ಪೊಲೀಸ್‌, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಗುತ್ತಿಗೆದಾರರ ಸಹಯೋಗದಲ್ಲಿ ಕಾರ್ಯಚರಣೆ ಕೈಗೊಂಡು ಸುಮಾರು ಹತ್ತಾರು ಮನೆ ಅಂಗಡಿ-ಮುಂಗಟ್ಟು ಮತ್ತಿತರ ಕಟ್ಟಡಗಳನ್ನು
ನೆಲಸಮಗೊಳಿಸಲಾಗಿತ್ತು.

Advertisement

ಹಲವಾರು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಪಟ್ಟಣ ವ್ಯಾಪ್ತಿಯಲ್ಲಿರುವ ಚಿತ್ರದುರ್ಗ- ಶಿವಮೊಗ್ಗ ಮಾರ್ಗದ ರಾಷ್ಟ್ರೀಯ ಹೆದ್ದಾರಿ ಅಗಲಿಕರಣ ಕಾಮಗಾರಿ ಆರಂಭಿಸಿದ ಗುತ್ತಿಗೆದಾರರು
ಪಟ್ಟಣದ ಚಿತ್ರದುರ್ಗ ಭಾಗದಿಂದ ಪುರಸಭೆ ಕವೇರಿತನಕ ರಸ್ತೆ ಅಗಲಿಕರಣದ ಅಳತೆಗೆ 100 ಮೀಟರ್‌ಗೆ ಅಡ್ಡವಾಗಿದ್ದ ಬಹುತೇಕ ಕಟ್ಟಡಗಳನ್ನು ಜೆಸಿಬಿಯಿಂದ ತೆರವುಗೊಳಿಸಲಾಗಿತ್ತು.

ಹಲವಾರು ವರ್ಷಗಳಿಂದ ರಾಷ್ಟ್ರೀಯ ಹೆದ್ದಾರಿ ಆಗಲಿಕರಣಗೊಳಿಸಬೇಕೆಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ರಸ್ತೆ ಅಭಿವೃದ್ಧಿಗೆ ಮುಂದಾಗಿದ್ದರೂ, ಪ್ರಾಧಿಕಾರದ ಅವೈಜ್ಞಾನಿಕ ಅಳತೆಯಿಂದಾಗಿ ರಸ್ತೆ ಪಕ್ಕದಲ್ಲಿದ್ದ ಕೆಲ ಮನೆಯ ಅಂಗಡಿ ಮುಂಗಟ್ಟು ಮಾಲೀಕರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿ ತಡೆಯಾಜ್ಞೆ ತರುವ ಮೂಲಕ ಕಾಮಗಾರಿ ಸ್ಥಗಿತಗೊಳಿಸಿದ್ದರು. ಹಾಗಾಗಿ ಹಲವಾರು ವರ್ಷಗಳ ಹಿಂದೆ ಅಭಿವೃದ್ಧಿ ಅಗಬೇಕಿದ್ದ ಕಾಮಗಾರಿ ಸ್ಥಗಿತಗೊಂಡಿತ್ತು.

ಎರಡು ದಿನಗಳ ಹಿಂದೆ ರಸ್ತೆ ಅಗಲಿಕರಣದ ಅಳತೆಯನ್ನು ಹೊಸದಾಗಿ ಮಾರ್ಕ್‌ ಮಾಡಿದ್ದು, 100 ಮೀಟರ್‌ ಅಳತೆಗೆ ತಕ್ಕಂತೆ ಕಟ್ಟಡಗಳನ್ನು ತೆರವುಗೊಳಿಸಲಾಗಿದೆ. ಇನ್ನೂ ಒಂದೆರಡು
ಕಟ್ಟಡಗಳು ಕೋರ್ಟ್‌ನಲ್ಲಿ ತಡೆಯಾಜ್ಞೆ ಇರುವುದರಿಂದ ತಾತ್ಕಾಲಿಕವಾಗಿ ರಸ್ತೆ ಅಭಿವೃದ್ಧಿ ಹಿನ್ನಡೆಯುಂಟಾಗಿದೆ.

ಪಟ್ಟಣದ ಕುಡಿನೀರುಕಟ್ಟೆ ವೀರಭದ್ರಪ್ಪ ಕಟ್ಟಡ ತೆರವುಗೊಳಿಸುವುದನ್ನು ವಿರೋಧಿಸಿದ್ದು, ನಮ್ಮ ಕಟ್ಟಡಕ್ಕೆ ನ್ಯಾಯಾಲಯದ ಆದೇಶದಂತೆ ಅಳತೆ ನಿಗದಿ ಮಾಡದೆ ಪೊಲೀಸ್‌ ಸರ್ವಗಾವಳಿನಲ್ಲಿ ಕಟ್ಟಡವನ್ನು ಅವೈಜ್ಞಾನಿಕ ಅಳತೆಗೆ ತೆರವುಗೊಳಿಸುತ್ತಿರುವುದು ಕಾನೂನು ಬಾಹೀರವಾಗಿದೆ. ನ್ಯಾಯಾಲದ ಆದೇಶದಂತೆ ರಸ್ತೆ ಅಭಿವೃದ್ಧಿ ಪ್ರಾಧಿಕಾರ ಹಾಗೂ
ಜಿಲ್ಲಾಡಳಿತ ಕಾನೂನು ಪಾಲನೆ ಮಾಡಿಲ್ಲ. ನನಗೆ ಅನ್ಯಾಯವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Advertisement

ಪಟ್ಟಣದಲ್ಲಿ ಕಟ್ಟಡ ತೆರವುಗೊಳಿಸಲು ಕೈಗೊಂಡ ಕಾರ್ಯಚರಣೆಯಲ್ಲಿ ಪೊಲೀಸ್‌ ಬದೊಬಸ್ತು ಕಲ್ಪಿಸಲಾಗಿತ್ತು. ಜನರು ಕಟ್ಟಡ ತೆರವುಗೊಳಿಸುವುದನ್ನು ಕೋವಿಡ್‌ ಮಾರ್ಗಸೂಚಿ
ಉಲ್ಲಂಘಿಸಿ ವಿಕ್ಷಣೆ ಮಾಡಲು ಸಾವಿರಾರು ಜನರು ಅಗಮಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next