Advertisement

ರಸ್ತೆ ಅಗಲೀಕರಣ, ಪೊಲೀಸ್ ಬಿಗಿ ಬಂದೋಬಸ್ತ್ : ಜೆಸಿಬಿಯಿಂದ 60 ಅಕ್ರಮ ಕಟ್ಟಡಗಳ ತೆರವು

02:32 PM Jan 30, 2022 | Team Udayavani |

ಕಾಳಗಿ: ಪಟ್ಟಣದ ಮುಖ್ಯಬಜಾರ್‌ ರಸ್ತೆ ಅಗಲೀಕರಣ ತೆರವು ಕಾರ್ಯ ಶನಿವಾರ ಬೆಳ್ಳಂಬೆಳಗ್ಗೆ ಪಟ್ಟಣ ಪಂಚಾಯಿತಿ ಅಧಿಕಾರಿಗಳು, ಜೆಸ್ಕಾಂ ಸಿಬ್ಬಂದಿ, ಪೊಲೀಸ್‌ ಬಿಗಿ ಬಂದೋಬಸ್ತ್
ನಲ್ಲಿ ಎರಡು ಜೆಸಿಬಿ ಯಂತ್ರಗಳ ಮೂಲಕ ಅತಿಕ್ರಮಣ ಕಟ್ಟಗಳ ತೆರವು ಕಾರ್ಯ ಕೈಗೊಂಡರು.

Advertisement

ಪಟ್ಟಣದ ಮುಖ್ಯಬಜಾರ್‌ ರಸ್ತೆಯಲ್ಲಿ 2018-19ನೇ ಸಾಲಿನ ರಾಜ್ಯ ಹಣಕಾಸು ವಿಶೇಷ ಅನುದಾನದಲ್ಲಿ ಸುಮಾರು 70ಲಕ್ಷ ರೂ. ವೆಚ್ಚದಲ್ಲಿ 30ಅಡಿ ಅಗಲದಲ್ಲಿ ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಮಾಡಲಾಗುತ್ತಿದ್ದು, ಇದಕ್ಕೆ ಅಡ್ಡಲಾಗಿ ಮುಖ್ಯಬಜಾರ್‌ನಲ್ಲಿ ಅತಿಕ್ರಮಣವಾಗಿರುವ ಸುಮಾರು 60 ಹೆಚ್ಚು ಕಟ್ಟಡಗಳನ್ನು 30 ಅಡಿ ಅಗಲ ಜೆಸಿಬಿ ಯಂತ್ರಗಳ ಮೂಲಕ ತೆರವು ಕಾರ್ಯ ಮಾಡಲಾಗಿದೆ ಎಂದು ಪಟ್ಟಣ ಪಂಚಾಯಿತಿ ಅಧಿಕಾರಿ ವೆಂಕಟೇಶ ತೆಲಾಂಗ್‌ ಹೇಳಿದರು.

ಕಳೆದ ಎರಡು ಮೂರು ತಿಂಗಳ ಹಿಂದೆ ಮಾರ್ಕ್ ಔಟ್ ಮಾಡುವ ಸಂದರ್ಭದಲ್ಲಿ ರಸ್ತೆಯನ್ನು 26 ಅಡಿ, ಒಮ್ಮೆ 33 ಅಡಿ, ಮಾರ್ಕ್ ಔಟ್ ಮಾಡಿ ಬಣ್ಣದ ಗುರುತು ಹಾಕಲಾಗಿತ್ತು. ಆದರೆ ವ್ಯಾಪಾರಸ್ಥರು ಹಾಗೂ ಕೆಲವು ಪ್ರಭಾವಿ ವ್ಯಕ್ತಿಗಳ ಮನವಿಯಂತೆ ಕೊನೆಗೆ 30ಅಡಿಯಷ್ಟು ರಸ್ತೆ ತೆರವು ಮಾಡಲಾಯಿತು. ಇದಕ್ಕೆ ವ್ಯಾಪಾರಸ್ಥರು ಸಹಕಾರ ನೀಡಿ ತಮ್ಮ ಕಟ್ಟಡಗಳನ್ನು ತಾವೇ ತೆರವು ಮಾಡಿಕೊಂಡರೆ ಇನ್ನು ಕೆಲವರು ವಿರೋಧ ವ್ಯಕ್ತಪಡಿಸಿದರು.

ಎರಡು ತಿಂಗಳಲ್ಲಿ ರಸ್ತೆ ನಿರ್ಮಾಣ : ಅತಿಕ್ರಮಣ ಕಟ್ಟಡ ತೆರವು ಕಾರ್ಯ ಮಾಡಿರುವ ಬೆನ್ನಲ್ಲೆ ಎರಡು ತಿಂಗಳಲ್ಲಿ ಸುಮಾರು 70ಲಕ್ಷ ರೂ. ಅನುದಾನದಲ್ಲಿ 30 ಅಡಿಯಲ್ಲಿ ಸಿಸಿ ರಸ್ತೆ
ಹಾಗೂ ರಸ್ತೆಯ ಎರಡು ಕಡೆಗಳಲ್ಲಿ ಉತ್ತಮ ಗುಣಮಟ್ಟದ ಚರಂಡಿ ನಿರ್ಮಾಣ ಮಾಡಿ ಸಾರ್ವಜನಿಕರ ಓಡಾಟಕ್ಕೆ ಅನುಕೂಲ ಮಾಡಿ ಕೊಡಲಾಗುತ್ತದೆ ಎಂದು ಪಪಂ ಮುಖ್ಯಾಧಿಕಾರಿ
ಹೇಳಿದರು.

ವಿದ್ಯುತ್‌ ಸಂಪರ್ಕ ಸ್ಥಗಿತ: ರಸ್ತೆ ಅಗಲಿಕರಣ ವೇಳೆ ಮುಖ್ಯ ಬಜಾರ್‌ ಕಡೆಗಿರುವ ವಿದ್ಯುತ್‌ ಸಂಪರ್ಕ ಕಡಿತಗೊಂಡಿದ್ದರಿಂದ ಕುಡಿಯುವ ನೀರು ಹಾಗೂ ಇನ್ನಿತರ ಸಾರ್ವಜನಿಕರ ಕೆಲಸಗಳಿಗೆ ತೊಂದರೆ ಉಂಟಾಗಿತ್ತು. ತಹಶೀಲ್ದಾರ್‌ ರಾಜಕುಮಾರ ಜಾಧವ, ಪ. ಪಂ ಮುಖ್ಯಾಧಿಕಾರಿ ವೆಂಕಟೇಶ ತೆಲಾಂಗ, ಕಿರಿಯ ಅಭಿಯಂತರರಾದ ದೇವಿಂದ್ರಪ್ಪ ಕೋರವಾರ, ಆಕಾಶ ರಾಠೊಡ, ಸುರೇಶ ಗಾಯಕವಾಡ, ದತ್ತಾತ್ರೇಯ ಕಲಾಲ ಹಾಗೂ ಪಟ್ಟಣ ಪಂಚಾಯಿತಿ ಸಿಬ್ಬಂದಿ ಈ ಸಂದರ್ಭದಲ್ಲಿದ್ದರು. ಸಿಪಿಐ ವಿನಾಯಕ, ಪಿಎಸ್‌ಐ ಹುಲಿಗೆಪ್ಪ ಪೂಜಾರಿ ನೇತೃತ್ವದಲ್ಲಿ 40 ಪೊಲೀಸರು ಬಿಗಿ ಬಂದೋಬಸ್ತ್ ಒದಗಿಸಿದ್ದರು.

Advertisement

33ಅಡಿ ಅಗಲವಿದ್ದ ಮುಖ್ಯಬಜಾರ ರಸ್ತೆ ಅಗಲೀಕರಣವನ್ನು ವ್ಯಾಪಾರಸ್ಥರ ಮನವಿ ಮೇರೆಗೆ 30ಅಡಿಗೆ ತೆರವು ಮಾಡಲಾಗಿದೆ. 40 ದಿನಗಳಲ್ಲಿ ಮುಖ್ಯಬಜಾರ್‌ನಲ್ಲಿ ಸಿಸಿ ರಸ್ತೆ ಹಾಗೂ ಎರಡು ಬದಿಯಲ್ಲಿ ಚರಂಡಿ ನಿರ್ಮಾಣ ಮಾಡಲಾಗುತ್ತದೆ.
– ವೆಂಕಟೇಶ ತೆಲಾಂಗ್‌, ಪಪಂ ಮುಖ್ಯಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next