Advertisement
ರಸ್ತೆ ಎತ್ತರದಲ್ಲಿ, ಮನೆಗಳು ತಗ್ಗಿನಲ್ಲಿ ಮುಖ್ಯ ರಸ್ತೆಯಿಂದ ನಾರಾಯಣ ಗುರು ರಸ್ತೆಯಾಗಿ ಮುಂದೆ ಹೋದಂತೆ ಉತ್ತಮ ಕಾಂಕ್ರೀಟ್ ರಸ್ತೆ ಇದೆ. ಆದರೆ ಮೂಲಕ ಸಾಗಿದಾಗ ಮುಂದೆ ಮುಂದೆ ಹೋದಂತೆ ಉತ್ತಮ ಕಾಂಕ್ರೀಟ್ ರಸ್ತೆಯಿದೆ. ಆದರೆ ರಸ್ತೆ ಎತ್ತರದಲ್ಲಿದ್ದು ಮನೆಗಳು, ಅಂಗಳ ತಗ್ಗಿನಲ್ಲಿವೆ. ಚರಂಡಿಯಿಲ್ಲ. ಆದ್ದರಿಂದ ಮಳೆ ನೀರು ಮನೆಯಂಗಳಗಳಲ್ಲೇ ನೆಲೆಯಾಗುತ್ತದೆ.
ಮದ್ದುಗುಡ್ಡೆಯ ನಂತರದ ರಸ್ತೆಗಳ ಪರಿಸ್ಥಿತಿಯೂ ಇದಕ್ಕೆ ತೀರ ಭಿನ್ನ ಏನಿಲ್ಲ. ಕೆಲವೆಡೆ ಚರಂಡಿ ಇದೆ. ಆದರೆ ಅದರ ಹೂಳೆತ್ತದೆ ದಶಕವೇ ಆಯಿತೋ ಏನೋ ಎನ್ನುತ್ತಾರೆ ಸ್ಥಳೀಯರು. ಮಳೆಗಾಲದಲ್ಲಿ ಇಲ್ಲಿನ ನಿವಾಸಿಗಳಿಗೆ ನೀರು ಮನೆ ಒಳಕ್ಕೆ ಪ್ರವೇಶಿಸದಿದ್ದರೆ ಸಾಕು ಎನ್ನುವುದರಲ್ಲೇ ಹೆಣಗಾಡುತ್ತಿರುತ್ತಾರೆ. ಚರಂಡಿಗೆ ಜಾಗ ಎಲ್ಲಿ?
ಕಾಂಕ್ರೀಟ್ ರಸ್ತೆಯ ಅಕ್ಕಪಕ್ಕದಲ್ಲಿ ಹಲವೆಡೆ ಚರಂಡಿಗೆ ಜಾಗವಿಲ್ಲ. ಇಲ್ಲಿ ರೋಡ್ ಮಾರ್ಜಿನ್ ಬಿಟ್ಟಿಲ್ಲ. ಅನೇಕ ಕಡೆ ಮನೆಗಳ ಕಾಂಪೌಂಡ್ ಇದೆ. ಒತ್ತುವರಿ ತೆರವು ಹೊರತು ಚರಂಡಿ ನಿರ್ಮಾಣ ಕಷ್ಟವಿದೆ. ಇನ್ನು ಕೆಲವೆಡೆ ವಿದ್ಯುತ್ ಕಂಬ ಕೂಡಾ ತೀರಾ ಅಪಾಯದಲ್ಲಿದೆ. ಮತ್ತೆ ಕೆಲವೆಡೆ ವಿದ್ಯುತ್ ಕಂಬ ಚರಂಡಿ ಯಲ್ಲಿಯೇ ಇದೆ.
Related Articles
ಚರಂಡಿ ಮಾಡಬೇಕಿರುವ ಜಾಗದಲ್ಲಿ ಕಂಪೌಂಡ್ ಇದೆ. ಸ್ತಳೀಯರು ಒತ್ತುವರಿ ತೆರವಿಗೆ ಸಹಕರಿಸಿದರೆ ಚರಂಡಿ ಮಾಡಬಹುದು. ಈಗ ಬಂದ 11 ಲಕ್ಷ ರೂ. ಅನುದಾನ ರಿಂಗ್‌ರೋಡ್‌ನಲ್ಲಿ ಕಾಮಗಾರಿಗೆ ವಿನಿಯೋಗಿಸಲಾಗಿದೆ. ಇನ್ನು ಅನುದಾನ ಬಂದರೆ ಇಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಬಹುದು.
– ಸುರೇಶ್ ನಾೖಕ್, ಪುರಸಭೆ ಸದಸ್ಯರು
Advertisement
ಹೂಳೆತ್ತಿಲ್ಲನಮ್ಮ ವಾರ್ಡ್‌ನಲ್ಲಿ ಚರಂಡಿ ಹೂಳೆತ್ತದೆ ಅದೆಷ್ಟೋ ವರ್ಷಗಳಾಗಿರಬಹುದು. ಪ್ರತಿವರ್ಷ ಹೂಳೆತ್ತಿದರೆ ಇಂತಹ ಸಮಸ್ಯೆ ಬರುತ್ತಿರಲಿಲ್ಲ.
– ರಾಘವೇಂದ್ರ, ಮದ್ದುಗುಡ್ಡೆ ನಿವಾಸಿ – ಲಕ್ಷ್ಮೀ ಮಚ್ಚಿನ