Advertisement

ಮರಳಿನಿಂದ ಜಾರುವ ರಸ್ತೆಗೆ ಮೋಕ್ಷ ಬೇಕಿದೆ

03:45 AM Jul 17, 2017 | Harsha Rao |

ಕುಂಬಳೆ: ಕುಂಬಳೆ ಪೊಲೀಸ್‌ ಠಾಣೆಯ ಮುಂದಿನ ರಸ್ತೆ ಮರಳು ತುಂಬಿ ಅಪಾಯವನ್ನು ಆಹ್ವಾನಿಸುತ್ತಿದೆ. 
ಕಾನೂನು ಬಾಹಿರವಾಗಿ ಸಮುದ್ರತೀರ ಮತ್ತು ಹೊಳೆಗಳಿಂದ ಅಕ್ರಮವಾಗಿ ಲಾರಿ, ಟೆಂಪೊ, ಇನ್ನಿತರ ವಾಹನಗಳಲ್ಲಿ ಸಾಗಿಸುತ್ತಿದ್ದಾಗ ಪೊಲೀಸರು ವಾಹನಗಳನ್ನು ವಶಪಡಿಸಿ ಈ ರಸ್ತೆ ಪಕ್ಕದಲ್ಲಿರಿಸಿದಾಗ ಮಾರುತಿ, ಆಮ್ನಿ, ರಿಕ್ಷಾ ಮುಂತಾದ ಸಣ್ಣ ವಾಹನಗಳಿಂದ ಮರಳು ರಸ್ತೆಗೆ ಜಾರಿಬಿದ್ದು ರಸ್ತೆಯಲ್ಲಿ ಶೇಖರಣೆಯಾಗುವುದು. ಇದರಿಂದ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ತೊಡಕಾಗುವುದು. ಬೈಕ್‌ಗಳು ಈ ರಸ್ತೆಯಲ್ಲಿ ಹಲವು ಬಾರಿ ಸ್ಕಿಡ್‌ ಆಗಿ ಅಪಾಯ ಸಂಭವಿಸಿದೆ. 
ಕುಂಬಳೆ ಗ್ರಾಮ ಪಂಚಾಯತ್‌ ಮತ್ತು ಪೊಲೀಸ್‌ ಠಾಣೆಯ ಮುಂದೆಯೇ ಈ ಅವಾಂತರ ನಡೆಯುತ್ತಿದ್ದರೂ ಸ್ಥಳೀಯಾಡಳಿತವಾಗಲಿ ಪೊಲೀಸರಾಗಲಿ ಈ ಸಮಸ್ಯೆಗೆ ಪರಿಹಾರ ಕಂಡಿಲ್ಲ.ವಿದ್ಯಾಲಯಕ್ಕೆ ಸಿ.ಐ.ಕಚೇರಿಗೆ,ಕೃಷಿ ಭವನ ಸಾರ್ವಜನಿಕ ಶ್ಮಶಾನಗಳಿಗೆ ತೆರಳುವ ರಸ್ತೆಯಲ್ಲಿ ತುಂಬಿರುವ ಮರಳನ್ನು ತೆರವುಗೊಳಿಸಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂಬುದಾಗಿ ಸಾರ್ವಜನಿಕರ ಬೇಡಿಕೆಯಾಗಿದೆ. ಇನ್ನಷ್ಟು ಅಪಾಯ ಸಂಭವಿಸುವ ಮುನ್ನ ಸಮಸ್ಯೆಗೆ ಪರಿಹಾರ ಕಾಣಬೇಕಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next