Advertisement

ರಸ್ತೆ ಕೆಸರು ಗದ್ದೆ; ಕಂಡಲ್ಲಿ ಕಸದ ರಾಶಿ

10:37 AM Sep 11, 2019 | Suhan S |

ಬೈಲಹೊಂಗಲ: ಪಟ್ಟಣದ ಬಸವೇಶ್ವರ ಆಶ್ರಯ ಕಾಲೋನಿಯಲ್ಲಿ ನೈರ್ಮಲ್ಯ ಕೊರತೆ ರಾರಾಜಿಸುತ್ತಿದ್ದು, ಸಾಂಕ್ರಾಮಿಕ ರೋಗಗಳಿಗೆ ಆಹ್ವಾನ ನೀಡುವಂತೆ ಇಲ್ಲಿನ ರಸ್ತೆಗಳು ಕೆಸರುಗದ್ದೆಯಾಗಿ ಸಾರ್ವಜನಿಕರಿಗೆ ನೆಮ್ಮದಿ ಕೆಡಸಿವೆ.

Advertisement

ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಹೊಂದಿಕೊಂಡಂತೆ ಇರುವ ಬಹುತೇಕ ಬಡಾವಣೆಗಳ ಒಳರಸ್ತೆಗಳ ಬದಿ ಸಮರ್ಪಕದ ಕಸದ ತೊಟ್ಟಿ ಇರದ ಪರಿಣಾಮ ಎಲ್ಲೆಂದರಲ್ಲಿ ಕಸದ ರಾಶಿ, ತ್ಯಾಜ್ಯಗಳು ಬಿದ್ದಿವೆ. ಅಲ್ಲಲ್ಲಿ ಹಂದಿ, ಬೀದಿ-ನಾಯಿ ಹಾಗೂ ಬಿಡಾಡಿ ಜಾನುವಾರುಗಳ ತಾಣವಾಗಿ ಮಾರ್ಪಟ್ಟಿದೆ.

ಎಲ್ಲೆಂದರಲ್ಲಿ ಕಸದ ರಾಶಿ: ಸರಕಾರಿ ಗೋಮಾಳ ಜಾಗೆ ಬಳಿ ಹಂದಿಗಳ ತಾಣವಾಗಿದೆ. ಎಲ್ಲ ಸಮುದಾಯ ಜನ ವಾಸಿಸುವ ಬಡಾವಣೆ ಜನತೆಗೆ ಎಲ್ಲ ಓಣಿಯಲ್ಲಿ ನೆರ್ಮಲ್ಯ ಕೊರತೆಯಿಂದ ನಾನಾ ಸಾಂಕ್ರಮಿಕ ರೋಗಗಳ ಭೀತಿ ಎದುರಿಸುವಂತಾಗಿದೆ. ರಸ್ತೆ ಮೇಲೆ ಕೆಲ ದಿನಗಳಿಂದ ಬಿದ್ದಿರುವ ಮಳೆಯಿಂದ ರಸ್ತೆಗಳು ಕೆಸರುಮಯವಾಗಿ ಪರಿಣಮಿಸಿದೆ. ಪೌರ ಕಾರ್ಮಿಕರು ಸ್ಚಚ್ಛತೆ ಕಾಪಾಡಲು ಮುಂದಾಗದಿರುವುದು ಜನರ ಆಕ್ರೋಶಕ್ಕೆ ಕಾರಣವಾದರೆ, ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಜನರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ರೋಗ ತಡೆಗೆ ಕ್ರಮ ಕೈಗೊಳ್ಳಿ: ಇದೇ ಕಾಲೋನಿ ಸಮುದಾಯ ಭವನದ ಬಳಿ ಮನೆಗಳಿಗೆ ನೀರು ನುಗ್ಗಿ ಹಾನಿಯಾಗಿದೆ. ಮಳೆಯಿಂದ ಹಲವು ಕುಟುಂಬಗಳು ಮನೆ ಕಳೆದುಕೊಂಡು ಆಶ್ರಯವಿಲ್ಲದೆ ಸಮುದಾಯ ಭವನದಲ್ಲಿ ತಮ್ಮ ಜೀವನ ಸಾಗಿಸುತ್ತಿದ್ದಾರೆ. ಆದರೆ ಅಧಿಕಾರಿಗಳು ಅಂಥವರನ್ನು ಕಂಡು ಸೂಕ್ತ ಮನೆ ಒದಗಿಸಲು ಪ್ರಯತ್ನಿಸುತ್ತಿಲ್ಲ. ಸರಕಾರಿ ಸಾರ್ವಜನಿಕ ಆಸ್ಪತ್ರೆ ಬಳಿ ಈ ಕಾಲೋನಿ ಇದ್ದರೂ ಕಾಲೋನಿಯ ಸಾಂಕ್ರಾಮಿಕ ರೋಗಗಳನ್ನು ತಡೆಯುವ ನಿಟ್ಟಿನಲ್ಲಿ ಕ್ರಮ ಕೈಗೊಂಡಿಲ್ಲ ಎಂದು ನಾಗರಿಕರು ದೂರಿದ್ದಾರೆ.

ರಸ್ತೆ ಸ್ವಚ್ಛತೆಗೆ ಒತ್ತಾಯ: ಬಸವೇಶ್ವರ ಆಶ್ರಯ ನಗರ ಸರಕಾರಿ ಪ್ರಾಥಮಿಕ ಶಾಲೆ ನಂ.8 ಇಲ್ಲಿ ಕಸ ಬೆಳೆದು ನಿಂತಿದೆ. ಶಾಲೆಯ ಮುಂದೆಯ ರಾಡಿ ಇದ್ದರೂ ಅದನ್ನು ಸ್ವಚ್ಛಗೊಳಿಸಲು ಅಧಿಕಾರಿಗಳು ಮುಂದಾಗುತ್ತಿಲ್ಲ. ವಿದ್ಯಾರ್ಥಿಗಳು ಇಂಥ ಕೆಸರು ರಸ್ತೆಯಲ್ಲಿ ನಡೆದು ಶಾಲೆಗೆ ಬರಬೇಕಿದೆ. ಹೀಗಾಗಿ ಹಲವು ಬಾರಿ ಮಕ್ಕಳು ಜಾರಿ ರಸ್ತೆಯಲ್ಲಿ ಬಿದ್ದು ಪೆಟ್ಟು ತಗುಲಿದ ಉದಾಹರಣೆ ಸಾಕಷ್ಟಿವೆ ಎಂದು ನಾಗರಿಕರು ದೂರಿದ್ದಾರೆ.

Advertisement

 

•ಸಿ.ವೈ.ಮೆಣಶಿನಕಾಯಿ

Advertisement

Udayavani is now on Telegram. Click here to join our channel and stay updated with the latest news.

Next