Advertisement

ಅಭಿವೃದ್ಧಿಯಲ್ಲಿ ಕಲ್ಯಾಣವಾಗಲಿ : ಕೊರಬು

07:50 PM Mar 24, 2021 | Team Udayavani |

ಅಫಜಲಪುರ : ಹಿಂದುಳಿದ ಹೈದ್ರಾ ಬಾದ್‌ ಕರ್ನಾಟಕ ಪ್ರದೇಶವನ್ನು ಕಲ್ಯಾಣ ಕರ್ನಾಟಕವೆಂದು ಮರು ನಾಮಕರಣ ಮಾಡಿದ್ದೇ ಬಿಜೆಪಿ ಸರ್ಕಾರದ ದೊಡ್ಡ ಸಾಧನೆಯಾಗಿದ್ದು, ಮತ್ಯಾವ ವಿಷಯದಲ್ಲೂ ಕಲ್ಯಾಣವಾಗಿಲ್ಲ. ಹೆಸರಿನಲ್ಲಿ ಮಾತ್ರ ಕಲ್ಯಾಣವಾಗದೇ ಅಭಿವೃದ್ಧಿಯಲ್ಲೂ ಕಲ್ಯಾಣವಾಗಲಿ ಎಂದು ಸಮಾಜ ಸೇವಕ ಜೆ.ಎಂ. ಕೊರಬು ಹೇಳಿದರು.

Advertisement

ತಾಲೂಕಿನ ಮಾಶಾಳ ಗ್ರಾಮದಲ್ಲಿ ಅಹಿಂದ ಚಿಂತಕರ ವೇದಿಕೆ ವತಿಯಿಂದ ಕಲ್ಯಾಣ ಕರ್ನಾಟಕದ 371ನೇ (ಜೆ) ಮುಂಬಡ್ತಿ ಕಾನೂನು ತಿದ್ದುಪಡಿ ಹಾಗೂ 24 ಜಿಲ್ಲೆಗಳಲ್ಲಿ ಶೇ. 8 ನೇಮಕಾತಿ ಮುಂಬಡ್ತಿ ಮಿಸಲಾತಿ ಹೋರಾಟದ ಜಾಥಾ ಸ್ವಾಗತಿಸಿ ಅವರು ಮಾತನಾಡಿದರು. ಕಲ್ಯಾಣ ಕರ್ನಾಟಕ ಅಭಿವೃದ್ದಿ ವಿಷಯದಲ್ಲಿ ಬಹಳಷ್ಟು ಹಿಂದುಳಿ ದಿದೆ. ಈ ಭಾಗದ ಅಭಿವೃದ್ಧಿಗಾಗಿಯೇ 2013ರಲ್ಲಿ ಕಾಂಗ್ರೆಸ್‌ ಸರ್ಕಾರವಿದ್ದಾಗ 371ನೇ (ಜೆ)ಕಲಂ ಜಾರಿಗೆ ತರಲಾಗಿತ್ತು. ಆದರೆ ಇದರಿಂದಲೂ ಸಮರ್ಪಕ ಅಭಿವೃದ್ಧಿಯಾಗುತ್ತಿಲ್ಲ.

ಮುಂಬಡ್ತಿ ನಿಯಮಗಳ ಕಾನೂನನ್ನು ತಿದ್ದುಪಡಿ ಮಾಡಬೇಕು, ರಾಜ್ಯದ 24 ಜಿಲ್ಲೆಗಳಲ್ಲಿ ಶೇ. 8 ನೇಮಕಾತಿ ಮುಂಬಡ್ತಿ, ಮೀಸಲಾತಿ ಒದಗಿಸ ಬೇಕೆಂದು ಒತ್ತಾಯಿಸಿದರು. ಅಹಿಂದ ಚಿಂತಕರ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಸೈಬಣ್ಣ ಜಮಾದಾರ ಮಾತನಾಡಿ, ಮುಂಬಡ್ತಿಯಲ್ಲಿ ಬೆಳಗಾವಿ, ಮೈಸೂರು, ಬೆಂಗಳೂರು ವಿಭಾಗದಲ್ಲಿ ಕಲ್ಯಾಣ ಕರ್ನಾಟಕ ಜನರಿಗೆ ಅನ್ಯಾಯವಾಗಿದೆ ಎಂದರು. ಕೊರಬು ಫೌಂಡೇಶನ್‌ ಅದ್ಯಕ್ಷ ಶಿವಪುತ್ರ ಜಿಡ್ಡಗಿ, ದಿಗಂಬರ ಕಾಡಪ್ಪಗೋಳ, ಯಶವಂತರಾಯ ಸೂರ್ಯವಂಶಿ, ರಮೇಶ ಹಡಪದ, ಇಸ್ಮಾಯಿಲ್‌ ಮಾಲಗತ್ತಿ, ಮಹಿ ಬೂಬ್‌‌, ಶರಣು ಭೀಮನಖೇಡ, ಚನ್ನವೀರ ಸಂಗಾ, ಶಿವು ಜಮಾದಾರ, ಸಂತೋಷ ಗಂಜಿ ಇದ್ದರು

Advertisement

Udayavani is now on Telegram. Click here to join our channel and stay updated with the latest news.

Next