ಬೆಂಗಳೂರು: ವಿಧಾನಸಭೆ ಚುನಾವಣೆಗೆ ಶನಿವಾರ ಮತದಾನ ನಡೆಯಲಿದ್ದು, ಗುರುವಾರ ಸಂಜೆ 6 ಗಂಟೆಗೆ ಚುನಾವ ಣೆಯ ಬಹಿರಂಗ ಪ್ರಚಾರ ಅಂತ್ಯವಾ ಯಿತು. ಈ ಹಿನ್ನೆಲೆಯಲ್ಲಿ ವಿವಿಧ ರಾಜಕೀಯ ಪಕ್ಷಗಳ ನಾಯಕರು, ಅಭ್ಯರ್ಥಿಗಳು ಮತದಾರರನ್ನು ಸೆಳೆ ಯಲು ಅಂತಿಮ ಹಂತದ ಯತ್ನ ನಡೆಸಿದರು. ರೋಡ್ ಶೋ, ಸಮಾವೇ ಶಗಳ ಮೂಲಕ ಮತದಾರರ ಮನವೊ ಲಿಕೆಯ ಯತ್ನ ನಡೆಸಿದರು.
ಅಂತಿಮ ದಿನ ಪ್ರಚಾರದ ಕೆಲ ಝಲಕ್ ಇಲ್ಲಿವೆ.
ಮೈಸೂರು ಪೇಟಾ ಧರಿಸಿ ಚೌಹಾಣ್ ರೋಡ್ ಶೋ: ಮೈಸೂರಿನ ಕೃಷ್ಣರಾಜ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಮದಾಸ್ ಪರ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್‌ಸಿಂಗ್ ಚೌಹಾಣ್ ಗುರುವಾರ ಭರ್ಜರಿ ರೋಡ್ ಶೋ ನಡೆಸಿದರು. ಮೈಸೂರು ಪೇಟಾ ಧರಿಸಿ, ಸಾರ್ವಜನಿಕರತ್ತ ಕೈ ಬೀಸುತ್ತಾ, ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಮನವಿ ಮಾಡಿದರು.
ಕೊಡೆ ಹಿಡಿದ ಕಳಲೆ: ಕಾಂಗ್ರೆಸ್ ಅಭ್ಯರ್ಥಿ ಕಳಲೆ ಕೇಶವಮೂರ್ತಿಯವರು ನಂಜನಗೂಡು ಪಟ್ಟಣದಲ್ಲಿ ತುಂತುರು ಮಳೆಯಲ್ಲಿ ಕೊಡೆ ಹಿಡಿದು ಭರ್ಜರಿ ರೋಡ್ ಶೋ ನಡೆಸುವ ಮೂಲಕ ಮತಯಾಚಿಸಿದರು.
ಎತ್ತಿನಗಾಡಿಯಲ್ಲಿ ಪ್ರಚಾರ: ತಿ.ನರಸೀಪುರ ತಾಲೂಕಿನ ಬನ್ನೂರು ಪಟ್ಟಣದಲ್ಲಿ ಜೆಡಿಎಸ್ ಅಭ್ಯರ್ಥಿ ಅಶ್ವಿನ್ ಕುಮಾರ್, ರೈತರ ಬೆಂಬಲದೊಂದಿಗೆ ಎತ್ತಿನಗಾಡಿಯಲ್ಲಿ ರೋಡ್ ಶೋ ನಡೆಸಿ, ಮತಯಾಚಿಸಿದರು.
ನಟ ಆದಿ ರೋಡ್ ಶೋ: ಗುಡಿಬಂಡೆಯಲ್ಲಿ ಬಿಜೆಪಿ ಅಭ್ಯರ್ಥಿ ಸಾಯಿಕುಮಾರ್ ಪರ ತೆಲುಗು ನಟ ಆದಿ ಬೃಹತ್ ರೋಡ್ ಶೋ ನಡೆಸಿದರು.
ಚಿತ್ರನಟಿ ದಾಮಿನಿಯಿಂದ ಮತಯಾಚನೆ: ಸಕಲೇಶಪುರದಲ್ಲಿ ಚಿತ್ರನಟಿ ದಾಮಿನಿ ತಮ್ಮ ಪತಿ ಬಿಜೆಪಿ ಅಭ್ಯರ್ಥಿ ನಾರ್ವೆ ಸೋಮಶೇಖರ್ ಪರ ಕಾಲ್ನಡಿಗೆ ಮುಖಾಂತರ ಸಾಗಿ ಮತಯಾಚಿಸಿದರು.