Advertisement

ರಸ್ತೆ ಸುರಕ್ಷೆ: 7,270 ಕೋ.ರೂ. ನೆರವು

01:23 AM Sep 27, 2021 | Team Udayavani |

ಹೊಸದಿಲ್ಲಿ: ದೇಶದಲ್ಲಿ ರಸ್ತೆ ಅವಘಡಗಳಲ್ಲಿ ಮರಣ ಪ್ರಮಾಣವನ್ನು ಶೂನ್ಯಕ್ಕಿಳಿಸುವ ಗುರಿಯೊಂದಿಗೆ ರಸ್ತೆ ಸುರಕ್ಷೆ ಬಲ ಪಡಿಸುವುದಕ್ಕಾಗಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು 7,270 ಕೋ.ರೂ.ಗಳ ರಾಜ್ಯ ನೆರವು ಯೋಜನೆ ಯೊಂದನ್ನು ಜಾರಿಗೊಳಿಸಲು ಮುಂದಾಗಿದೆ.

Advertisement

ದೇಶದಲ್ಲಿ ಸಂಭವಿಸುವ ರಸ್ತೆ ಅವಘಡಗಳಲ್ಲಿ ಪ್ರಾಣಹಾನಿಯಲ್ಲಿ ಶೇ. 85ರಷ್ಟು 14 ರಾಜ್ಯಗಳಲ್ಲಿ ನಡೆಯುತ್ತಿದ್ದು, ಈ ರಾಜ್ಯಗಳಿಗೆ ಆರು ವರ್ಷಗಳ ಅವಧಿಯ ಈ ಯೋಜನೆಯಡಿ ನೆರವು ನೀಡಲಾಗುತ್ತದೆ.

ಇದನ್ನೂ ಓದಿ:ರಾಷ್ಟ್ರೀಯ ಸಹಕಾರಿ ವಸತಿ ಮಹಾಮಂಡಳಿ ಸಭೆಯನ್ನು ಬೆಂಗಳೂರಿನಲ್ಲಿ ನಡೆಸಲು ಸಚಿವರ ಆಗ್ರಹ

3,635 ಕೋ.ರೂ.ಗಳನ್ನು ಕೇಂದ್ರ ಸರಕಾರ ಒದಗಿಸಲಿದ್ದರೆ, 1,818 ಕೋ. ರೂ.ಗಳನ್ನು ವಿಶ್ವ ಬ್ಯಾಂಕ್‌ಮತ್ತು ಎಡಿಬಿಯಿಂದ ಸಾಲವಾಗಿ ಪಡೆಯಲಾಗುತ್ತದೆ. ಕರ್ನಾಟಕ ಇದರಡಿ ನೆರವು ಪಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next