Advertisement

ರಸ್ತೆ ನಿಯಮ ಪಾಲಿಸಿ-ಅಪರಾಧ ತಡೆಗಟ್ಟಿ

05:10 PM Jan 07, 2022 | Team Udayavani |

ಕಮಲನಗರ: ಚಾಲಕರು ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸುವ ಮೂಲಕ ಅಪಘಾತಗಳನ್ನು ತಡೆಯಬೇಕು ಎಂದು ಡಿವೈಎಸ್‌ಪಿ ಬಲ್ಲಪ್ಪ ನಂದಗಾವೆ ಸಲಹೆ ನೀಡಿದರು.

Advertisement

ಪಟ್ಟಣದ ಶ್ರೀ ಸಿದ್ಧರಾಮೇಶ್ವರ ಪದವಿ ಮಹಾವಿದ್ಯಾಲಯದಲ್ಲಿ ಪೊಲೀಸ್‌ ಇಲಾಖೆ ಹಮ್ಮಿಕೊಂಡಿದ್ದ 32ನೇ ರಾಷ್ಟ್ರೀಯ ಸುರಕ್ಷತಾ ಸಪ್ತಾಹ, ಮಾದಕ ವಸ್ತುಗಳ ದುಷ್ಪರಿಣಾಮ, ಅಪರಾಧ ತಡೆ ಮಾಸಾಚರಣೆ ಹಾಗೂ ಸೈಬರ್‌ ಅಪರಾಧಗಳ ಕಡಿವಾಣಕ್ಕಾಗಿ ಆಯೋಜಿಸಿದ ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪಿಎಸ್‌ಐ ನಂದಿನಿ ಎಸ್‌. ಮಾತನಾಡಿ, ವಾಹನ ಚಾಲಕರು ರಸ್ತೆ ನಿಯಮ ಹಾಗೂ ಸಂಚಾರ ಚಿಹ್ನೆ ಚೆನ್ನಾಗಿ ಅರಿತುಕೊಳ್ಳಬೇಕು. ಸ್ವಲ್ಪವೂ ಬೇಜವಾಬ್ದಾರಿ ಅಥವಾ ನಿರ್ಲಕ್ಷತೆ ತೊರದೆ ನಿಯಮ ಪಾಲನೆ ಮಾಡಬೇಕು. ಸಂಚಾರ ನಿಯಮ ಪಾಲನೆ ಮಾಡಿದರೆ ಸಾಕಷ್ಟು ಅಪಘಾತ ತಡೆಗಟ್ಟಬಹುದು ಎಂದರು.

ಠಾಣಾ ಕುಶನೂರ ಪಿಎಸ್‌ಐ ಚಂದ್ರಶೇಖರ ಮಾತನಾಡಿದರು. ಪ್ರಭಾರಿ ಪ್ರಾಂಶುಪಾಲ ಉಮಾಕಾಂತ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಪಿಎಸ್‌ಐಗಳಾದ ಬಸವರಾಜ ಪಾಟೀಲ, ರೇಣುಕಾ, ಪ್ರಾಂಶುಪಾಲ ಶಿವಾಜಿ. ಆರ್‌. ಎಚ್‌ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next