Advertisement
ನೂತನವಾಗಿ ನಿರ್ಮಾಣಗೊಂಡಿದ್ದ ಕಾಲು ಸಂಕದ ಸಂಪರ್ಕ ರಸ್ತೆಗೆ ಹಾಕಲಾಗಿದ್ದ ಮಣ್ಣು ಮಳೆ ನೀರಿನಲ್ಲಿ ಕೊಚ್ಚಿ ಹೋಗಿ ಶಾಲಾ ಮಕ್ಕಳು ಹಾಗೂ ಸಾರ್ವಜನಿಕರಿಗೆ ಈ ರಸ್ತೆಯಲ್ಲಿ ಸಂಚರಿಸಲು ತೊಂದರೆ ಎದುರಾಗಿತ್ತು. ಮಳೆನೀರು ಸರಾಗವಾಗಿ ಹರಿದುಹೋಗಲು ದಾರಿ ಇಲ್ಲದೆ ಮಣ್ಣು ಹಾಗೂ ಕೆಸರು ನೀರು ಸಮೀಪದ ಕೃಷಿ ಭೂಮಿಗೆ ಹರಿದು ಕೃಷಿಕರಿಗೂ ಸಮಸ್ಯೆ ಉಂಟಾಗಿತ್ತು. ದೂರಿನ ಹಿನ್ನೆಲೆಯಲ್ಲಿ ‘ಉದಯವಾಣಿ’ ಸುದಿನ ಸಹಿತ ಮಾಧ್ಯಮಗಳು ಸಚಿತ್ರ ವರದಿ ಪ್ರಕಟಿಸಿ ಅಧಿಕಾರಿಗಳ ಗಮನ ಸೆಳೆದಿದ್ದವು. ಪ್ರತಿಕ್ರಿಯಿಸಿದ್ದ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು, ಸಮಸ್ಯೆ ಬಗೆ ಹರಿಸುವ ಭರವಸೆ ನೀಡಿದ್ದರು. ಇದೀಗ ಲೋಕೋಪಯೋಗಿ ಇಲಾಖೆಯ ಅಧಿ ಕಾರಿಗಳ ಸೂಚನೆಯಂತೆ ಮೋರಿ ಅಳವಡಿಸಿ ರಸ್ತೆಯನ್ನು ಸಂಚಾರಕ್ಕೆ ಯೋಗ್ಯವನ್ನಾಗಿ ಮಾಡುವ ಜತೆಗೆ ಮಳೆನೀರು ಸರಾಗವಾಗಿ ಹರಿದುಹೋಗಲು ವ್ಯವಸ್ಥೆ ಮಾಡಲಾಗಿದೆ.
ಕಾಲು ಸಂಕಕ್ಕೆ ನಿರ್ಮಿಸಲಾಗಿದ್ದ ಸಂಪರ್ಕ ರಸ್ತೆಯ ಮಣ್ಣು ಮಳೆಯ ಕಾರಣದಿಂದಾಗಿ ಕೊಚ್ಚಿಹೋಗಿ ಸಮಸ್ಯೆ ಎದುರಾಗಿ ಸಾರ್ವಜನಿಕರಿಗೆ ತೊಂದರೆಯಾಗಿರುವ ವಿಚಾರ ಮಾಧ್ಯಮಗಳ ವರದಿಯಿಂದ ನಮ್ಮ ಗಮನಕ್ಕೆ ಬಂದಿತ್ತು. ಶಾಲಾ ಮಕ್ಕಳು ಹಾಗೂ ಸ್ಥಳೀಯರ ಹಿತದೃಷ್ಟಿಯಿಂದ ಸಮಸ್ಯೆಯನ್ನು ಬಗೆಹರಿಸಲು ಕ್ರಮ ಕೈಗೊಂಡಿದ್ದೇವೆ.
– ರಾಜಾರಾಮ್ ಎಇಇ, ಲೋಕೋಪಯೋಗಿ ಇಲಾಖೆ, ಪುತ್ತೂರು.