Advertisement

ರಸ್ತೆ ದುರಸ್ತಿ ಇನ್ನೂ ಆಗಿಲ್ಲ, ಚರಂಡಿಯೂ ಇಲ್ಲ!

06:15 AM Jul 07, 2018 | |

ಕುಂದಾಪುರ: ಮಳೆ ಬಂದರೆ ಸಾಕು ಕುಂದಾಪುರದ ರಾಷ್ಟ್ರೀಯ ಹೆದ್ದಾರಿ ಹೊಳೆಯಾಗುತ್ತದೆ. ಶುಕ್ರವಾರ ಮುಂಜಾನೆ ಸುರಿದ ಮಳೆಗೆ ಹೆದ್ದಾರಿಯಿಡೀ ನೀರು ತುಂಬಿ ರಸ್ತೆ ಯಾವುದು ರಸ್ತೆಯ ಅಂಚು ಯಾವುದು ಎಂದು ಅರಿಯದಂತೆ ಇತ್ತು. 

Advertisement

ರಾಷ್ಟ್ರೀಯ ಹೆದ್ದಾರಿಗೆ ತೇಪೆ ಹಾಕುವ ಕಾರ್ಯ ಆರಂಭಗೊಂಡಿದೆ. ಆದರೆ ಇದು ಕಣ್ಣಿಗೆ ಮಣ್ಣೆರಚುವಂತೆ ಇದ್ದು ಪರಿಪೂರ್ಣ ತೇಪೆ ಕಾರ್ಯ ನಡೆಯಲೇ ಇಲ್ಲ. ಶಾಸ್ತ್ರಿ ಸರ್ಕಲ್‌ನಿಂದ ಬಸ್ರೂರು  ಮೂರುಕೈ ವರೆಗೆ ತೇಪೆಯೇ ನಡೆದಿಲ್ಲ.  ಶಾಸ್ತ್ರಿ ಸರ್ಕಲ್‌ನಿಂದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ, ಸಂಗಂ ವರೆಗೆ ತುಸು ತೇಪೆ ನಡೆದಿದೆ. ಪೂರ್ಣಪ್ರಮಾಣದಲ್ಲಿ ತೇಪೆ ನಡೆಯದೇ ರಸ್ತೆಯ ಹೊಂಡಗಳು ಹಾಗೆಯೇ ಇವೆ. 

ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಎಲ್ಲಿಯೂ ಚರಂಡಿಯೇ ಇಲ್ಲದಿರುವುದೇ ಇದಕ್ಕೆ ಕಾರಣವಾಗಿದೆ. ಮುಖ್ಯ ರಸ್ತೆಯಿಂದ ಸರ್ವಿಸ್‌ ರಸ್ತೆಗೆ ಸೇರುವಲ್ಲಿ ಕೂಡಾ ನೀರು ನಿಲ್ಲುವ ಕಾರಣ ನೀರು ಸರಾಗವಾಗಿ ಹರಿಯದೇ ತೊಂದರೆಯಾಗುತ್ತಿದೆ. ವಿನಾಯಕ ಥಿಯೇಟರ್‌ ಬಳಿ ದ್ವಿಪಥ ರಸ್ತೆ  ಆರಂಭವಾಗುವವರೆಗೆ ಇಂತಹ ಎಡವಟ್ಟು ಮುಂದು ವರಿದಿದೆ. ಫ‌ುಟ್‌ಪಾತ್‌ ಇಲ್ಲ, ರಸ್ತೆ ಬದಿಯೂ ನೀರು ನಿಲ್ಲುವುದರಿಂದ ಜನ ರಸ್ತೆಯಲ್ಲೇ ನಡೆಯುತ್ತಿದ್ದು, ವಾಹನಗಳು ಸಾಗುವ ವೇಳೆ  ದಾರಿಹೋಕರಿಗೆ ಕೆಸರಿನ ಅಭಿಷೇಕವಾಗುತ್ತಿದೆ. 

Advertisement

Udayavani is now on Telegram. Click here to join our channel and stay updated with the latest news.

Next