Advertisement

ಮದುವೆಗೆ ವಾರವಿರುವಾಗ ಮೂಗು ಕಳೆದುಕೊಂಡ

09:46 AM Feb 27, 2017 | Team Udayavani |

ನವದೆಹಲಿ: ಮದುವೆಗೆ ಒಂದು ವಾರ ಬಾಕಿಯಿರುವಾ­ಗಲೇ ಮದುಮಗ ಮೂಗು ಕಳೆದುಕೊಂಡಿದ್ದಾನೆ!  ದೆಹಲಿಯ ಲಹೋರಿಗೇಟ್‌ನಲ್ಲಿ ಶನಿವಾರ ರಾತ್ರಿ ಈ ಘಟನೆ ನಡೆದಿದೆ. 

Advertisement

ಉದ್ಯಮಿಯೊಬ್ಬರ ಪುತ್ರ 29 ವರ್ಷದ ಅಮನ್‌ ಗುಪ್ತಾ ತಮ್ಮ ಮದುವೆಗೆ ಆಹ್ವಾನ ನೀಡಲು ಸಹೋದ್ಯೋಗಿಗಳ ಮನೆಗೆ ಹೋಗಿದ್ದರು. ವಾಪಸ್‌ ಬರುತ್ತಾ ರಸ್ತೆಯೊಂದರಲ್ಲಿ ಯೂಟರ್ನ್ ಮಾಡಿ, ಕಾರನ್ನು ಎಲ್ಲಿ ನಿಲ್ಲಿಸಬಹುದೆಂದು ಅತ್ತಿತ್ತ ನೋಡುತ್ತಿದ್ದಾಗ, ಏಕಾಏಕಿ ಅಲ್ಲಿಗೆ ಆಗಮಿಸಿದ ಮೂವರು ಗುಪ್ತಾ ಮೇಲೆ ಹಲ್ಲೆ ನಡೆಸಿದರು. ಅದರಲ್ಲಿ ಒಬ್ಟಾತ ಗುಪ್ತಾರ ಮೂಗನ್ನು ಕಚ್ಚಿ, ಮೂಗಿನ ಒಂದು ಭಾಗವೇ ಕಿತ್ತು ಹೋಗುವಂತೆ ಮಾಡಿದ್ದಾನೆ. 

ಕೂಡಲೇ ಗುಪ್ತಾರನ್ನು ಆಸ್ಪತ್ರೆಗೆ ದಾಖಲಿ­ಸ­ಲಾಗಿದೆ. ಶಸ್ತ್ರಚಿಕಿತ್ಸೆ ನಡೆಸಬೇಕೆಂದರೆ, ತುಂಡಾದ ಮೂಗನ್ನು ಹುಡುಕಿಕೊಂಡ ಬನ್ನಿ ಎಂದು ವೈದ್ಯರು ಹೇಳಿದ್ದಾರೆ. ಸ್ನೇಹಿತರು ಎಷ್ಟು ಹುಡುಕಿದರೂ ಮೂಗು ಸಿಗಲೇ ಇಲ್ಲ.

Advertisement

Udayavani is now on Telegram. Click here to join our channel and stay updated with the latest news.

Next